ಬೆಂಗಳೂರು,ನ.28- ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ನ್ಯೂಮೋನಿಯ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಚೀನಾದಲ್ಲಿ ಮಕ್ಕಳಲ್ಲಿ ಹೆಚ್ಚಾಗಿರುವ ಉಸಿರಾಟ ಕಾಯಿಲೆಗಳು ಭೀತಿ ಹುಟ್ಟಿಸಿದ್ದು, ಅಲ್ಲಿನ ಜನ ನ್ಯೂಮೋನಿಯಾದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಮಾದರಿಯಲ್ಲೇ ಚೀನಾ ನ್ಯೂಮೋನಿಯಾ ಇತರೆ ದೇಶಗಳಿಗೆ ಹರಡುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಜಾಗ್ರತ ಕ್ರಮವಹಿಸುವಂತೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಆಯಾ ರಾಜ್ಯಗಳಲ್ಲಿ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸೋಂಕು ನಿವಾರಣೆಗೆ ಸಿದ್ದತೆ ನಡೆಸಿಕೊಳ್ಳುವಂತೆ ಸೂಚಿಸಲಾಗಿದೆ.
ಆಸ್ಪತ್ರೆಯಲ್ಲಿ ಅಗತ್ಯ ಔಷದೋಪಚಾರ ಜತೆಗೆ ಮಾನವ ಸಂಪನ್ಮೂಲ ಸಮರ್ಪಕ ಲಭ್ಯತೆ ಇರುವಂತೆ ನೋಡಿಕೊಳ್ಳುವಂತೆಯೂ ತಿಳಿಸಲಾಗಿದೆ. ಜ್ವರಕ್ಕೆ ಸಂಬಂಧಿಸಿದ ಔಷದಿಗಳು ಲಸಿಕೆಗಳು ಆಮ್ಲೆಜನಕ ಪರೀಕ್ಷಾ ಕಿಟ್ ಹೀಗೆ ಅಗತ್ಯ ಇರುವ ಎಲ್ಲಾ ಸಲಕರಣೆ ಗೆ ಸಿದ್ಧತೆ ಮಾಡಿಕೊಳ್ಳಬೇಕು ಒಂದು ವೇಳೆ ಸ್ಟಾಕ್ ಇಲ್ಲದಿದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಔಷದೋಪಚಾರ ಸಿದ್ದಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಭಾರತದಲ್ಲಿ ಮತ್ತೆ 1.6 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾದ ಫಾಕ್ಸ್‌ಕಾನ್
ಈ ಹಿಂದೆ ಕೊರೊನಾ ಸೋಂಕಿನ ಸಮಯದಲ್ಲಿ ಜಾರಿಗೆ ಗೆ ತಂದಿರುವ ಮಾರ್ಗಸೂಚಿಯನ್ನು ತಪ್ಪದೆ ಪಾಲನೆ ಮಾಡುವಂತೆಯೂ ತಿಳಿಸಲಾಗಿದೆ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸೇರಿ ಅರೋಗ್ಯ ಸಂಸ್ಥೆಗಳಿಂದ ಪಡೆದ ಡೇಟಾ ವನ್ನು ಪೋರ್ಟಲ್ ನಲ್ಲಿ ಅಫ್ಲೋಡ್ ಮಾಡಬೇಕು ಎಂದು ಹೇಳಲಾಗಿದೆ.
ರೋಗದ ಲಕ್ಷಣ ಹೊಂದಿರುವವರ ಮೂಗು ಗಂಟಲು ದ್ರವವನ್ನು ಪರೀಕ್ಷೆ ಮಾಡಬೇಕು ಹೀಗೆ ಹಲವು ವಿಚಾರಗಳ ಬಗ್ಗೆ ಕೇಂದ್ರ ಅರೋಗ್ಯ ಇಲಾಖೆ ಇಂದ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚನೆ ಬಂದಿದ್ದು, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.