ನವದೆಹಲಿ,ಆ.26- ಹೊಸ ಪಿಂಚಣಿ ಯೋಜನೆಯನ್ನು ಸುಧಾರಿಸಲು ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಇಂದು ಈಡೇರಿದೆ.
ನಿವೃತ್ತಿಯ ನಂತರ ಖಚಿತವಾದ ಪಿಂಚಣಿಗಾಗಿ ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2025 ಏಪ್ರಿಲ್ 1ರಿಂದ ಯುಪಿಎಸ್ ಜಾರಿಯಾಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸರ್ಕಾರಿ ನೌಕರರ ಯೋಗಕ್ಷೇಮಕ್ಕೆ ಸರ್ಕಾರ ತೋರಿರುವ ಬದ್ಧತೆಯಾಗಿದೆ ಮತ್ತು ಅವರಿಗೆ ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಷ್ಟ್ರೀಯ ಪ್ರಗತಿಗೆ ಗಣನೀಯ ಕೊಡುಗೆ ನೀಡುವ ಎಲ್ಲಾ ಸರ್ಕಾರಿ ನೌಕರರ ಶ್ರಮದ ಬಗ್ಗೆ ನಾವು ಹೆಮೆಪಡುತ್ತೇವೆ.
ಏಕೀಕೃತ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಅವರ ಯೋಗಕ್ಷೇಮ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ನಮ ಬದ್ಧತೆ ಅನುಗುಣವಾಗಿರುತ್ತದೆ ಹೇಳಿದ್ದಾರೆ.