Monday, March 10, 2025
Homeರಾಷ್ಟ್ರೀಯ | Nationalಭಾರತೀಯ ರೈಲ್ವೆ ಹಣಕಾಸು ನಿಗಮ(IRFC)ಗೆ ಭಾರತ ಸರ್ಕಾರದಿಂದ ನವರತ್ನ ಮಾನ್ಯತೆ

ಭಾರತೀಯ ರೈಲ್ವೆ ಹಣಕಾಸು ನಿಗಮ(IRFC)ಗೆ ಭಾರತ ಸರ್ಕಾರದಿಂದ ನವರತ್ನ ಮಾನ್ಯತೆ

Centre grants 'Navratna' status to IRCTC and IRFC:

ನವದೆಹಲಿ, ಮಾ.9 – ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್‌ಎಫ್‌ಸಿ), ರೈಲ್ವೆ ಸಚಿವಾಲಯದ ಪ್ರಮುಖ ಹಣಕಾಸು ಸಂಸ್ಥೆ, ಇದೀಗ ಭಾರತ ಸರ್ಕಾರದಿಂದ ಪ್ರತಿಷ್ಠಿತ ನವರತ್ನ ಸ್ಥಾನಮಾನವನ್ನು ಪಡೆದಿದೆ.

ಈ ಮಾನ್ಯತೆ ಭಾರತದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಬೆಂಬಲ ನೀಡುವ ಕೇಂದ್ರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಪೈಕಿ ಐಆರ್‌ಎಪ್ಪಿಯ ಪ್ರಗತಿಯ ಪ್ರಮುಖ ಮೈಲಿಗಲ್ಲಾಗಿದೆ.

ಡಿಸೆಂಬರ್ 12, 1986 ರಂದು 100% ಸರ್ಕಾರಿ ಮಾಲಕತ್ವದ ಸಂಸ್ಥೆಯಾಗಿ ಸ್ಥಾಪಿತಗೊಂಡ ಐಆರ್‌ಎರ್ಪಿ ಭಾರತೀಯ ರೈಲ್ವೆಯ ವಿಸ್ತರಣೆ ಮತ್ತು ಆಧುನಿಕೀಕರಣಕ್ಕೆ ಹಣಕಾಸು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಐಆರ್‌ಎಪ್ರಿಯ ಈ ಸಾಧನೆ, ಅದರ ನಿರಂತರ ಬೆಳವಣಿಗೆ ಮತ್ತು ರೈಲ್ವೆ ವಲಯದಲ್ಲಿ ಪೂರಕ ಹಣಕಾಸು ಒದಗಿಸುವ ಶಕ್ತಿಯನ್ನೊಳಗೊಂಡಿದೆ.

ಈ ಮಹತ್ವದ ಸಾಧನೆ ಕುರಿತಂತೆ ಸಂತೋಷ ವ್ಯಕ್ತಪಡಿಸಿದ ಐಆರ್‌ಎಪ್ಪಿಯ ಸಿಎಂಡಿ ಸಿಇಒ ಮನೋಜ್‌ಕುಮಾ‌ರ್ ದುಬೇ, ನವರತ್ನ ಸ್ಥಾನಮಾನ ಪಡೆಯುವುದು ಐಆ‌ಎಪ್ಪಿಯ ಆರ್ಥಿಕ ಶಕ್ತಿಯ ಪ್ರತಿಬಿಂಬವಾಗಿದ್ದು, ಭಾರತದ ರೈಲ್ವೆ ಮೂಲಸೌಕರ್ಯ ಬೆಂಬಲಿಸುವ ನಮ್ಮ ಬದ್ಧತೆಯನ್ನು ಹತ್ತಿರದಿಂದ ತೋರಿಸುತ್ತದೆ. ಈ ಮಾನ್ಯತೆ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಲು ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚು ಅರ್ಥಪೂರ್ಣವಾಗಿ ಕೊಡುಗೆ ನೀಡಲು ನಮಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.

RELATED ARTICLES

Latest News