Friday, November 22, 2024
Homeರಾಷ್ಟ್ರೀಯ | NationalRSS ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುವುದಕ್ಕೆ ವಿಧಿಸಿದ್ದ ನಿರ್ಬಂಧ ತೆರವು

RSS ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುವುದಕ್ಕೆ ವಿಧಿಸಿದ್ದ ನಿರ್ಬಂಧ ತೆರವು

ನವದೆಹಲಿ,ಜು.22- ಆರ್‍ಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಪ್ರಧಾನಿ ನರೇಂದ್ರಮೋದಿ ಸರ್ಕಾರ ತೆಗೆದುಹಾಕಿದೆ. ಈ ಕುರಿತು ಕಳೆದ ವಾರವೇ ಆದೇಶ ಹೊರಡಿಸಿದ್ದು, ಆರ್‍ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಆದೇಶದ ಸ್ಕ್ರೀನಶಾಟ್ ಅನ್ನು ಹಂಚಿಕೊಂಡಿದ್ದು, 58 ವರ್ಷಗಳ ಹಿಂದೆ ನೀಡಲಾದ ಸಂವಿಧಾನಿಕ ನಿರ್ದೇಶನವನ್ನು ಮೋದಿ ಸರ್ಕಾರವು ಹಿಂಪಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಜುಲೈ 9ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಆರ್‍ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಹೊರಡಿಸಿದ ಕಚೇರಿ ಮೆಮೊರಾಂಡಮ್ ಅನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಿದರೆ, ಶಿಸ್ತು ಕ್ರಮ ಜರಗಿಸುವ ಕಾನೂನನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸರ್ದಾರ್ ಪಟೇಲ್ ಅವರು ಫೆಬ್ರವರಿ 1948 ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಆರ್‍ಎಸ್‍ಎಸ್‍ನ್ನು ನಿಷೇಧಿಸಿದ್ದರು.

ತರುವಾಯ, ಉತ್ತಮ ನಡವಳಿಕೆಯ ಭರವಸೆಯ ಮೇಲೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇದಾದ ನಂತರವೂ ಆರ್ಎಸ್‍ಎಸ್ ನಾಗಪುರದಲ್ಲಿ ತಿರಂಗವನ್ನು ಹಾರಿಸಲಿಲ್ಲ. 1966 ರಲ್ಲಿ,ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಲಾಗಿತ್ತು. ಇದು ಸರಿಯಾಗಿ ಇತ್ತು ಎಂದು ಅವರು ಹಿಂದಿನ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಜೂನ್ 4, 2024ರ ನಂತರ ಸ್ವಯಂ-ಅಭಿಷಿಕ್ತ ನಾನ-ಬಯೋಲಾಜಿಕಲ್ ದೇವರ ನಡುವಿನ ಸಂಬಂಧಗಳು ಹದಗೆಟ್ಟವು. ಜುಲೈ 9, 2024ರಂದು, ಶ್ರೀ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಿರಲಿಲ್ಲ. ಇನ್ನು ಮುಂದೆ ಅಧಿಕಾರಶಾಹಿಯು ಈಗ ನಿಕ್ಕರ್ಗಳಲ್ಲಿ ಬರಬಹುದು ಎಂದು ನಾನು ಭಾವಿಸುತ್ತೇನೆ ಎಂದು, 2016ರಲ್ಲಿ ಬ್ರೌನ್ ಪ್ಯಾಂಟïನಿಂದ ಬದಲಾಯಿಸಲ್ಪಟ್ಟ ಖಾಕಿ ಶರ್ಟ್‍ನ ಆರ್‍ಎಸ್‍ಎಸ್ ಸಮವಸವನ್ನು ಜೈರಾಂ ರಮೇಶ್ ಪ್ರಸ್ತಾಪಿಸಿದ್ದಾರೆ.

ಆರೆಸ್ಸೆಸ್ ಮತ್ತು ಜಮಾತ-ಎ-ಇಸ್ಲಾಮಿಯ ಚಟುವಟಿಕೆಗಳೊಂದಿಗೆ ಸರ್ಕಾರಿ ನೌಕರರ ಸಂಘವನ್ನು ನಿಷೇಧಿಸುವ ನವೆಂಬರ್ 30, 1966ರ ಮೂಲ ಆದೇಶದ ಸ್ಕ್ರೀನïಶಾಟ್ ಅನ್ನು ಸಹ ಕಾಂಗ್ರೆಸ್ ನಾಯಕ ಹಂಚಿಕೊಂಡಿದ್ದಾರೆ.
ಜುಲೈ 9 ರ ಆದೇಶವನ್ನು ಟ್ಯಾಗ್ ಮಾಡಿದ ಬಿಜೆಪಿಯ ಅಮಿತ್ ಮಾಳವಿಯಾ, 58 ವರ್ಷಗಳ ಹಿಂದೆ, 1966ರಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರುವ ಅಸಂವಿಧಾನಿಕ ಆದೇಶವನ್ನು ಮೋದಿ ಸರ್ಕಾರವು ಹಿಂಪಡೆದಿದೆ ಎಂದು ಹೇಳಿದ್ದಾರೆ.

58 ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಆರ್‍ಎಸ್‍ಎಸ್‍ನ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿರ್ಬಂಧ ಹೇರಿತ್ತು.ಮೋದಿ ಸರ್ಕಾರ ಆದೇಶವನ್ನು ಹಿಂಪಡೆದಿದೆ ಎಂದು ಪವನ್ ಖೇರಾ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

Latest News