ನವದೆಹಲಿ,ಫೆ.15- ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ ಅವರ ಅಧಿಕೃತ ನಿವಾಸ ಶೀಷಮಹಲ್ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪತ್ತೆಯ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಫೆಬ್ರವರಿ 13 ರಂದು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ನೀಡಿದ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಆದೇಶಿಸಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಮಾಜಿ ಅಧಿಕೃತ ನಿವಾಸದ ನವೀಕರಣದಲ್ಲಿ 40,000 ಚದರ ಗಜಗಳಷ್ಟು (8 ಎಕರೆ) ವಿಸ್ತಾರವಾದ ಅತಿರಂಜಿತ ನಿವಾಸವಾದ 6 ಫ್ಲಾಗ್‌ಸ್ಟಾಫ್ ರಸ್ತೆ ಬಂಗಲೆಯನ್ನು ನಿರ್ಮಿಸಲು ಕಟ್ಟಡದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳ ಬಗ್ಗೆ ವಿವರವಾದ ತನಿಖೆ ನಡೆಸಲು ಸಿಪಿಡಬ್ಲ್ಯುಡಿ ಗೆ ಸೂಚಿಸಲಾಗಿದೆ.
ದೆಹಲಿ ಬಿಜೆಪಿ ಮುಖ್ಯಸ್ಥವೀರೇಂದ್ರ ಸಚ್ ದೇವ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಷೇನಾ ಅವರನ್ನು 6 ಫ್ಲಾಗ್ ಸ್ಟಾಫ್ ರಸ್ತೆ ಬಂಗಲೆಯೊಂದಿಗೆ ನಾಲ್ಕು ಸರ್ಕಾರಿ ಆಸ್ತಿಗಳ ವಿಲೀನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಸಚ್ ದೇವ ಅವರು ಲೆಫ್ಟಿನೆಂಟ್ ಗವರ್ನರ್ ಸಕ್ಷೇನಾ ಅವರಿಗೆ ಬರೆದ ಪತ್ರದಲ್ಲಿ, ನಾಲ್ಕು ಸರ್ಕಾರಿ ಆಸ್ತಿಗಳನ್ನು ಅನಧಿಕೃತವಾಗಿ ವಿಲೀನಗೊಳಿಸುವ ಮೂಲಕ ಬಂಗಲೆಯ ವಿಸ್ತರಣೆಯನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ಬಂಗಲೆಯನ್ನು ಆಕ್ರಮಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಪುನರ್ನಿಮರ್ಾಣಗೊಂಡ ಬಂಗಲೆಯು 2015 ರಿಂದ ಅಕ್ಟೋಬರ್ 2024 ರವರೆಗೆ ಕೇಜ್ರವಾಲ್ ಅವರ ಅಧಿಕೃತ ನಿವಾಸವಾಗಿ ಕಾರ್ಯನಿರ್ವಹಿಸಿತು.
ಅವರು 2025 ರ ದೆಹಲಿ ವಿಧಾನಸಭೆ ಚುನಾವಣೆಗೆ ಭ್ರಷ್ಟಾಚಾರವನ್ನು ತನ್ನ ಚುನಾವಣಾ ಪ್ರಚಾರದ ಕೇಂದ್ರ ವಿಷಯವನ್ನಾಗಿ ಮಾಡಿದ ಬಿಜೆಪಿಯ ತೀವ್ರ ರಾಜಕೀಯ ಪರಿಶೀಲನೆಗೆ ಒಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆವರಣವನ್ನು ಖಾಲಿ ಮಾಡಿದ್ದರು.