ನವದೆಹಲಿ, ಮೇ 18– ವಿಶ್ವದ ಮುಂದೆ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಲು ಮುಂದಾಗಿರುವ ಭಾರತ ವಿದೇಶಕ್ಕೆ ತೆರಳುವ ಸಂಸದರ ನಿಯೋಗದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ನೇತೃತ್ವದಲ್ಲಿ ಮೇ 23ರಿಂದ ಪ್ರಾರಂಭವಾಗುವ 10 ದಿನಗಳ ಅಂತರರಾಷ್ಟ್ರೀಯ ಪ್ರವಾಸಕ್ಕಾಗಿ ರಾಜಕೀಯ ಕ್ಷೇತ್ರಗಳ ಸುಮಾರು 40 ಸಂಸದರು ಅಮೆರಿಕ, ಯುಕೆ, ಯುಎಇ, ಜಪಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಮತ್ತು ಪಹಲ್ಯಾಮ್ ಭಯೋತ್ಪಾದಕ ದಾಳಿಯ ನಂತರ ಅಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ನಿಖರವಾದ ದಾಳಿಯ ಹಿಂದಿನ ತಾರ್ಕಿಕತೆಯನ್ನು ಬ್ದಾರಿಯನ್ನು ಈ ನಿಯೋಗಗಳಿಗೆ ನೀಡಲಾಗಿದೆ.
ಕಾಶ್ಮೀರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರವು ಈ ಬಹು ಪಕ್ಷಗಳ ಸಂಸದರನ್ನು ನಿಯೋಜಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಎನ್ಸಿಪಿ-ಎಸ್ಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ನಿಯೋಗದಲ್ಲಿ ತಮ್ಮ ಸೇರ್ಪಡೆಯನ್ನು ದೃಢಪಡಿಸಿದ್ದಾರೆ. ಈ ಧೈಯವನ್ನು ರಾಷ್ಟ್ರೀಯ ಏಕತೆಯ ವಿಷಯ ಎಂದು ಕರೆದಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಂದ ನನಗೆ ಕರೆ ಬಂತು. ಅವರು ಈ ಸಮಿತಿಗಳಲ್ಲಿ ಒಂದರ ಭಾಗವಾಗಲು ನನ್ನನ್ನು ಕೇಳಿಕೊಂಡರು. ನಮ್ಮ ರಾಷ್ಟ್ರದ ಪ್ರಶ್ನೆ ಬಂದಾಗ ನಾವೆಲ್ಲರೂ ಒಟ್ಟಿಗೆ ಇರುತ್ತೇವೆ. ನಮ್ಮ ದೇಶದ ದೃಷ್ಟಿಕೋನವನ್ನು ಮಂಡಿಸಲು ನಾವು ಇತರ ದೇಶಗಳಿಗೆ ಹೋಗುತ್ತೇವೆ ಎಂಬುದು ಸ್ಪಷ್ಟವಾಗಿದೆ. ಅತ್ಯಂತ ಮುಖ್ಯವಾದ ಕ್ಷಣಗಳಲ್ಲಿ ಭಾರತ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಹೊತ್ತುಕೊಂಡು ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬವಾಗಿ ಹೆಜ್ಜೆ ಇಡಲಿದ್ದಾರೆ.
ಈ ನಿಯೋಗವು ಏಳು ತಂಡಗಳಾಗಿ 32 ದೇಶಗಳಿಗೆ ಮತ್ತು ಬ್ರಸೆಲ್ಸ್ ನಲ್ಲಿರುವ ಇಯು ಪ್ರಧಾನ ಕಚೇರಿಗೆ ಭೇಟಿ ನೀಡಲಿದೆ. ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ಸಂಕಲ್ಪವನ್ನು ವ್ಯಕ್ತಪಡಿಸುವುದು ಈ ರಾಜತಾಂತ್ರಿಕ ಸಂಪರ್ಕ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಅಪರೂಪದ ಹೆಜ್ಜೆಯಾಗಿ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಿದೆ.ಏಳು ನಿಯೋಗಗಳ ನಾಯಕರಾಗಿ ಕಾಂಗ್ರೆಸ್‌ನ ಶಶಿ ತರೂರ್. ಬಿಜೆಪಿಯ ರವಿಶಂಕರ್ ಪ್ರಸಾದ್, ಜೆಡಿಯುನ ಸಂಜಯ್ ಕುಮಾರ್ ಝಾ, ಬಿಜೆಪಿಯ ಬೈಜಯಂತ್ ವಾಂಡಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಕಾರ್ಯ ನಿರ್ವಹಿಸಲಿದ್ದಾರೆ.
ಲೋಕಸಭೆಯ ವಿಪಕ್ಷಗಳ ನಾಯಕ ರಾಹುಲ್ ಗಾಂಧಿ ಅವರು ನಾಲ್ಕು ಮಂದಿ ಸಂಸದರ ಹೆಸರನ್ನು ಸೂಚಿಸಿದ್ದರು. ಇದರಲ್ಲಿ ಆನಂದ್ ತರ್ಮಾ, ಗೌರವ್ ಗೊಗೊಯ್, ರಾಜಾ ಬ್ರಾರ್ ಮತ್ತು ರಾಜ್ಯಸಭೆ ಸಂಸದ ಡಾ.ಸೈಯದ್ ನಾಸೀರ್ ಹುಸೇನ್ ಸೇರಿದ್ದು, ಇವರಲ್ಲಿ ಆನಂದ್ ಶರ್ಮಾ ಅವರು ಮಾತ್ರ ನಿಯೋಗದ ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಾಂಗ್ರೆಸ್‌ನ ಶಶಿ ತರೂರ್ ಜೊತೆಗೆ ಕಾಂಗ್ರೆಸ್ ನಾಯಕರಾದ ಮನೀಶ್ ಶಿವಾರಿ, ಅರ್ಮ ಸಿಂಗ್ ಮತ್ತು ಸಲ್ಮಾನ್ ಖುರ್ಷಿದ್ ಅವರು ಕೂಡ ನಿಯೋಗದ ಭಾಗವಾಗಿದ್ದಾರೆ. ಏಳು ನಿಯೋಗವು ತಲಾ ಒಬ್ಬ ಮುಸ್ಲಿಂ ಸದಸ್ಯರನ್ನು ಒಳಗೊಂಡಿದೆ.
ಸಂಸತ್ ಸದಸ್ಯರಲ್ಲದ ಮಾಜಿ ಕೇಂದ್ರ ಸಚಿವರಾದ ಗುಲಾಮ್ ನಬಿ ಆಜಾದ್, ಎಂ.ಜೆ. ಅಕ್ಟರ್, ಆನಂದ್ ಶರ್ಮಾ, ವಿ. ಮುರಳೀಧರನ್ ಖುರ್ಷಿದ್ ಮತ್ತು ಎಸ್.ಎಸ್.ಅಹ್ಲುವಾಲಿಯಾ ಕೂಡ ಈ ನಿಯೋಗದಲ್ಲಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಮುಂದುವರಿದ ಭಾಗವಾಗಿ ಇದೀಗ ಭಯೋತ್ಪಾದನೆಯ ವಿರುದ್ಧ ತನ್ನ ನಿಲುವನ್ನು ವಿಶ್ವಕ್ಕೆ ತಿಳಿಸಲು ನಿಯೋಗವನ್ನು ರಚಿಸಿದೆ.ಅಭೂತಪೂರ್ವ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ರಚನೆಯಾಗಿರುವ ಈ ನಿಯೋಗದಲ್ಲಿ ಸರ್ವಪಕ್ಷಗಳ ಏಳು ಸಂಸದರು, ಮಾಜಿ ಮಂತ್ರಿಗಳು, ರಾಜಕಾರಣಿಗಳು ಸೇರಿ ಒಟ್ಟು 51 ನಾಯಕರು ಇದ್ದಾರೆ. ಈ 51 ರಾಜಕೀಯ ನಾಯಕರಲ್ಲಿ 31 ಮಂದಿ ಆಡಳಿತ ಪಕ್ಷವಾದ ಎನ್ ಡಿಎಗೆ ಸೇರಿದ್ದರೆ ಉಳಿದ 20ಮಂದಿ ವಿಪಕ್ಷ ಸದಸ್ಯರಾಗಿದ್ದಾರೆ.
ನಿಯೋಗ 1:
ಬಿಜೆಪಿಯ ಬೈಜಯಂತ್ ಪಾಂಡಾ ನೇತೃತ್ವದ ಈ ನಿಯೋಗದಲ್ಲಿ ಬಿಜೆಪಿಯ ನಿಶಿಕಾಂತ್ ದುಬಿ, ಫಾಂಟ್ನಾನ್ ಕೊನ್ಯಾಕ್, ರೇಖಾ ಶರ್ಮಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ, ನಾಮನಿರ್ದೇಶಿತ ಸತ್ಯಾಮ್ ಸಂಧು ಮಾಜಿ ಸಚಿವ ಗುಲಾಮ್ ನಬಿ ಆಜಾದ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಹರ್ಷ್ ಶ್ರೀಂಗ್ಲಾ ಇದ್ದಾರೆ.
ನಿಯೋಗ 2:
ಬಿಜೆಪಿಯ ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ದಗ್ಗು ಬಟ್ಟಪುರಂದೇಶ್ವರಿ, ಎಸ್ಎಸ್-ಯುಬಿಟಿಯ ಪ್ರಿಯಾಂಕಾ ಚತುರ್ವೇದಿ, ನಾಮನಿರ್ದೇಶಿತ ಗುಲಾಮ್ ನಬಿ ಖತಾನಾ, ಕಾಂಗ್ರೆಸ್‌ನ ಅಮರ್ ಸಿಂಗ್, ಬಿಜೆಪಿಯ ಸಮಿಕ್ ಭಟ್ಟಾಚಾರ್ಯ, ಮಾಜಿ ಕೇಂದ್ರ ಸಚಿವ ಎಂ.ಜೆ. ಆಕ್ಟರ್ ಮತ್ತು ಮಾಜಿ ರಾಜತಾಂತ್ರಿಕ ಪಂಕಜ್ ಸರನ್ ಇದ್ದಾರೆ. ಈ ಎರಡು ತಂಡಗಳ ಸದಸ್ಯರು ಯುನೈಟೆಡ್ ಕಿಂಗ್ಟಮ್, ಫ್ರಾನ್ಸ್, ಜರ್ಮನಿ, ಇಯು, ಇಟಲಿ ಮತ್ತು ಡೆನ್ಮಾರ್ಕ್‌ಗೆ ಪ್ರಯಾಣಿಸಲಿದ್ದಾರೆ.
ನಿಯೋಗ 3:
ಜೆಡಿಯುನ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರಧಾನ್ ಬರುವಾ, ಹೇಮಾಂಗ್ ಜೋತಿ, ತೃಣಮೂಲದ ಯೂಸುಫ್ ಪಠಾನ್, ಸಿಪಿಐ-ಎಂನ ಜಾನ್ ಬ್ರಿಟ್ಬಾಸ್, ಮಾಜಿ ಸಚಿವ ಖುರ್ಷಿದ್ ಮತ್ತು ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಇದ್ದಾರೆ. ಈ ನಿಯೋಗವು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದೆ.
Roderm 4:
ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಅವರ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ಬನ್ಸುರಿ ಸ್ವರಾಜ್, ಆತುಲ್ ಗರ್ಗ್, ಮನನ್ ಕುಮಾರ್ ಮಿಶ್ರಾ, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್, ಬಿಜೆಡಿಯ ಸಸ್ಮಿತ್ ಪಾತ್ರ, ಮಾಜಿ ಸಚಿವ ಎಸ್.ಎಸ್. ಅಹ್ಲುವಾಲಿಯಾ ಮತ್ತು ಮಾಜಿ ರಾಜತಾಂತ್ರಿಕ ಸುಜನ್ ಚಿನೋಯ್ ಇದ್ದಾರೆ. ರೀ ತಂಡ ಯುಎಇ, ಲೈಬೀರಿಯಾ, ಕಾಂಗೋ ಮತ್ತು ಸಿಯೆರಾ ಲಿಯೋನ್ ಪ್ರಯಾಣಿಸಲಿದೆ.
ನಿಯೋಗ 5:
ಕಾಂಗ್ರೆಸ್‌ನ ಶಶಿ ತರೂರ್ ನೇತೃತ್ವದ ಎಲ್ ಜೆಪಿ-ಆರ್‌ವಿಯ ಶಾಂಭವಿ, ಜೆಎಂಎಂನ ಸರ್ಫರಾಜ್ ಅಹ್ಮದ್, ಟಿಡಿಪಿಯ ಜಿ ಎಂ ಹರೀಶ್ ಬಾಲಯೋಗಿ, ಬಿಜೆಪಿಯ ಶಶಾಂಕ್ ಮಣಿ ತ್ರಿವಾರಿ, ಭುವನೇಶ್ವರ ಕಲಿತಾ, ತೇಜಸ್ವಿ ಸೂರ್ಯ, ಶಿವಸೇನಾದ ಮಿಲಿಂದ್ ದಿಯೋರಾ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ತರಣ್ಣಿತ್ ಸಂಧು ಇದ್ದಾರೆ. ಇವರು ಯುಎಸ್, ಪನಾಮ, ಗಯಾನಾ, ಕೊಲಂಬಿಯಾ ಮತ್ತು ಬ್ರೆಜಿಲ್‌ಗೆ ಪ್ರಯಾಣಿಸಲಿದ್ದಾರೆ.
ನಿಯೋಗ 6 :
ಕನಿಮೋಳಿ ನೇತೃತ್ವದ ನಿಯೋಗದಲ್ಲಿ ಎಸ್ಪಿಯ ರಾಜೀವ್ ರೈ, ಎನ್ಸಿಯ ಮಿಯಾನ್ ಅಲ್ತಾಫ್ ಅಪ್ಪದ್, ಬಿಜೆಪಿಯ ಬ್ರಿಜೇಶ್ ಚೌಟ, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ, ಎಎಪಿಯ ಅಶೋಕ್ ಕುಮಾರ್ ಮಿತ್ತಲ್ ಮತ್ತು ಮಾಜಿ ರಾಜತಾಂತ್ರಿಕರಾದ ಮಂಜೀವ್ ಪುರಿ ಮತ್ತು ಜಾವೇದ್ ಆಶ್ರಫ್ ಅವರು ಸ್ಪೇನ್, ಗ್ರೀಸ್, ಸೊವೇನಿಯಾ, ಲಾಟ್ವಿಯಾ ಮತ್ತು ರಷ್ಯಾಕ್ಕೆ ಪ್ರಯಾಣಿಸಲಿದ್ದಾರೆ.
ನಿಯೋಗ 7:
ಎನ್ಸಿಪಿಯ ಸುಪ್ರಿಯಾ ಸುಳೆ ನೇತೃತ್ವದ ಈ ನಿಯೋಗದಲ್ಲಿ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಠಾಕೂರ್, ಎಎಪಿಯ ವಿಕ್ರಮಜಿತ್ ಸಾಹಿ, ಕಾಂಗ್ರೆಸ್‌ನ ಮನೀಷ್ ತಿವಾರಿ, ಟಿಡಿಪಿಯ ಲವು ಶ್ರೀಕೃಷ್ಣದೇವರಾಯಲು, ಮಾಜಿ ಸಚಿವರಾದ ಮುರಳೀಧರನ್ ಮತ್ತು ಆನಂದ್ ಶರ್ಮಾ ಅವರನ್ನು ಒಳಗೊಂಡಿದೆ. ಈ ತಂಡ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದೆ.