Saturday, January 4, 2025
Homeರಾಜ್ಯGST ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ಒಳಪಡಿಸಲು ಕೇಂದ್ರ ಚಿಂತಿಸಲಿ : ಗೃಹಸಚಿವ ಪರಮೇಶ್ವರ್

GST ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ಒಳಪಡಿಸಲು ಕೇಂದ್ರ ಚಿಂತಿಸಲಿ : ಗೃಹಸಚಿವ ಪರಮೇಶ್ವರ್

Centre should consider bringing petrol and diesel under GST

ಬೆಂಗಳೂರು,ಜ.1- ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸುವ ವಿಚಾರದಲ್ಲಿ ಕೇಂದ್ರಸರ್ಕಾರದ ಸಹಕಾರ ಅಗತ್ಯ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಮಾರ್ಚ್ನಲ್ಲಿ ಮಂಡಿಸುವ ಬಜೆಟ್ ವೇಳೆ ಪೆಟ್ರೋಲ್, ಡೀಸೆಲ್ ಮಾರಾಟವನ್ನು ಜಿಎಸ್ಟಿ ವ್ಯಾಪ್ತಿಗೊಳಪಡಿಸುವ ಪ್ರಸ್ತಾಪ ಮಾಡುವ ನಿರೀಕ್ಷೆಯಿದೆ. ಆದರೆ ಇದರ ಲಾಭ, ನಷ್ಟಗಳ ಲೆಕ್ಕಾಚಾರವೂ ನಡೆಯಬೇಕು.

ರಾಜ್ಯಗಳಿಗೆ ನಷ್ಟವಾಗುತ್ತದೆ ಎನ್ನುವುದಾದರೆ ಮರುಚಿಂತನೆ ಅನಿವಾರ್ಯವಾಗುತ್ತದೆ.
ಜಿಎಸ್ಟಿ ಕೇಂದ್ರಸರ್ಕಾರದ ಕಾಯಿದೆಯಾಗಿದ್ದು, ರಾಜ್ಯಸರ್ಕಾರಕ್ಕಿಂತಲೂ ಕೇಂದ್ರದ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಇಲ್ಲಿವರೆಗೂ ಯಶಸ್ವಿಯಾಗಿ ನಿಭಾಯಿಸಿದ್ದೇನೆ. 1987 ರಿಂದಲೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಐಶ್ವರ್ಯಗೌಡ ಅವರ ವಂಚನೆ ಪ್ರಕರಣದ ಹಣವನ್ನು ನರೇಂದ್ರಸ್ವಾಮಿ ಬಳಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ ಮಾಡಿರುವ ಆರೋಪದ ಬಗ್ಗೆ ತಮಗೆ ಗೊತ್ತಿಲ್ಲ. ವಂಚನೆ ಕುರಿತು ಮಾಜಿ ಸಂಸದ ಡಿ.ಕೆ.ಸುರೇಶ್ ದೂರು ಕೊಟ್ಟಿದ್ದಾರೆ. ಪೊಲೀಸರು ಅದರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.

ಠಾಣೆಗಳಲ್ಲಿ ದಾಖಲಾಗುವ ದೂರುಗಳಿಗೆ ಮತ್ತು ಅದರ ವಿಚಾರಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ ಎಂದರು.
ಬೀದರ್ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಆತಹತ್ಯೆ ಪ್ರಕರಣದಲ್ಲಿ ತಮ ಪಾತ್ರ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬರುವವರೆಗೂ ನಿರೀಕ್ಷೆ ಮಾಡಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿರುವ ದೂರಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ನನಗೂ ದೂರು ಕೊಟ್ಟಿಲ್ಲ. ಬಿಜೆಪಿಯವರೇ ಉತ್ತರ ಕೊಡುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಬೇರೆ ಯಾವುದೇ ಸಚಿವರ ಹಸ್ತಕ್ಷೇಪವಿಲ್ಲ. ಗೃಹಸಚಿವರ ಮತ್ತು ಮುಖ್ಯಮಂತ್ರಿಯವರ ಆದೇಶವನ್ನು ಪೊಲೀಸ್ ಅಧಿಕಾರಿಗಳು ಪಾಲನೆ ಮಾಡುತ್ತಾರೆ. ಸಿ.ಟಿ.ರವಿ ಆರೋಪ ಅನಗತ್ಯ ಎಂದು ಹೇಳಿದರು.

ಸಿ.ಟಿ.ರವಿ ಪ್ರಕರಣದಲ್ಲಿ ಯಾವ ರೀತಿಯ ಮಹಜರು ಮಾಡಬೇಕು ಎಂಬುದನ್ನು ಪೊಲೀಸ್ ಅಧಿಕಾರಿಗಳು ನಿರ್ಧರಿಸುತ್ತಾರೆ. ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ಸಭಾಧ್ಯಕ್ಷರಿಗೆ ಆಸಕ್ತಿಯಿರುತ್ತದೆ. ಹೀಗಾಗಿ ಅಗತ್ಯ ಸಹಕಾರ ನೀಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

RELATED ARTICLES

Latest News