ರಾಯ್‌ಪುರ, ಅ.24- ಛತ್ತೀಸ್‌ಗಢದ ಐಪಿಎಸ್‌ಅಧಿಕಾರಿ ರತನ್ ಲಾಲ್ ಡಾಂಗಿ ಅವರ ವಿರುದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪತ್ನಿ, ದೈಹಿಕ, ಮಾನಸಿಕ ಮತ್ತು ಕಿರುಕುಳದ ದೂರು ನೀಡಿದ್ದಾರೆ
ಇದಲ್ಲದೆ ರತನ್ ಲಾಲ್ ಡಾಂಗಿ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕೂಡ ದೂರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ತನಿಖೆ ನಡೆಸಲು ಇಲಾಖೆ ಸಮಿತಿಯನ್ನು ರಚಿಸಿದೆ ಕಳೆದ ಅ. 15 ರಂದು, 2003ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮತ್ತು ಪೊಲೀಸ್ ಮಹಾನಿರ್ದೇಶಕ ರತನ್ ಲಾಲ್ ಡಾಂಗಿ ವಿರುದ್ಧ ದೈಹಿಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳದ ಆರೋಪದ ಮೇಲೆ ಮಹಿಳೆಯಿಂದ ದೂರು ಬಂದಿತ್ತು.
ದೂರುಗಳ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.ತನಿಖಾ ಸಮಿತಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ. ಆನಂದ್ ಛಾಬ್ರಾ ಮತ್ತು ಉಪ ಪೊಲೀಸ್ ಮಹಾನಿರ್ದೇಶಕ ಮಿಲ್ನಾ ಕುರ್ರೆ ಇದ್ದಾರೆ. ತನಿಖಾ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಪ್ರಕರಣ ಕುರಿತು ಮಾತನಾಡಿರುವ ರತನ್ ಲಾಲ್ ಡಾಂಗಿ ಆ ಮಹಿಳೆ ಕೆ ವರ್ಷದಿಂದ ನನಗೆ ಬ್ಲ್ಯಾಕ್‌ಮೇಲ್ ಮಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.2017-18ರಲ್ಲಿ ದಾಂತೇವಾಡದಲ್ಲಿ ಉಪ ಪೊಲೀಸ್ ಮಹಾನಿರ್ದೇಶಕರಾಗಿದ್ದಾಗ ಮಹಿಳೆಯೊಬ್ಬರು ತನ್ನ ಪತಿಯ ಕೆಲಸದ ಬಗ್ಗೆ ಸಂಪರ್ಕಿಸಿದ್ದಳು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಂತರ 2023 ರಲ್ಲಿ ಪೊಲೀಸ್ ತರಬೇತಿ ಕಾಲೇಜಿನ ನಿರ್ದೇಶಕಿಯಾಗಿ ನೇಮಕಗೊಂಡಾಗ ನನ್ನ ಆಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಹೇಳಿಕೊಂಡು ಹಣ ಕೇಳಿದ್ದಾಳೆ ಎಂದು ಡಾಂಗಿ ಆರೋಪಿಸಿದ್ದಾರೆ.
ಆತಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ನನ್ನನ್ನುಅದರಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಂದಿನಿಂದ ಈ ಮಹಿಳೆ ನನ್ನಿಂದ ಹಣ ಸುಲಿಗೆ ಮಾಡುತ್ತಿದ್ದಾಳೆ ಮತ್ತು ನನ್ನ ಹೆಂಡತಿಯಿಂದ ಬೇರೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ. ಆಕೆಯ ಬ್ಲಾಕ್‌ಮೇಲಿಂಗ್‌ನಿಂದ ಹತಾಶೆಗೊಂಡು, ನಾನು ಪೊಲೀಸ್ ಪ್ರಧಾನ ಕಚೇರಿಗೆ ದೂರು ನೀಡಿದ್ದೇನೆ, ಎಂದು ಅವರು ಹೇಳಿದರು.
