Monday, March 31, 2025
Homeರಾಜಕೀಯ | Politicsಬಿ.ಕೆ.ಹರಿಪ್ರಸಾದ್‌ಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

ಬಿ.ಕೆ.ಹರಿಪ್ರಸಾದ್‌ಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

Chalavadi Narayanaswamy hits back at B.K. Hariprasad

ಬೆಂಗಳೂರು,ಮಾ.26– ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಪ್ರತಿದಿನ ಮಾತನಾಡದಿದ್ದರೆ, ನಿಮ್ಮ ಹೈಕಮಾಂಡ್‌ ನಿಮ್ಮನ್ನು ಎಲ್ಲಿ ಮೂಲೆಗುಂಪು ಮಾಡುತ್ತದೋ ಎಂಬ ಆತಂಕ ನಿಮ್ಮಲ್ಲಿ ಸ್ಪಷ್ಟವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ಗೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಸುದೀರ್ಘ ಪೋಸ್‌್ಟ ಹಾಕಿರುವ ಅವರು, ಹರಿಪ್ರಸಾದ್‌ ಆರೋಪಕ್ಕೆ ಲೆಕ್ಕ ಚುಕ್ತ ಮಾಡಿದ್ದಾರೆ. ರಾಜಕೀಯವಾಗಿ ಪ್ರಸ್ತುತವಾಗಲು ಮೋದಿಯವರನ್ನು ನಿರಂತರ ಟೀಕಿಸುವುದು ನಿಮ್ಮ ಕಾಯಕ. ಆದರೆ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರ ಆಚಾರ-ವಿಚಾರಗಳು ನನಗೆ ಚೆನ್ನಾಗಿ ತಿಳಿದಿವೆ. ಅವುಗಳನ್ನು ಒಂದೊಂದೇ ಬಿಚ್ಚುತ್ತಾ ಹೋದರೆ, ಒಂದು ರಾಜಕೀಯ ನಾಟಕ ವೇ ರಚಿಸಬಹುದು. ಆ ನಾಟಕದಲ್ಲಿ ಹಿರಿಯರಾದ ತಮಗೆ ಒಂದು ಪಾತ್ರವನ್ನೂ ಕೊಡಬಹುದು. ಆದರೆ, ನಿಮ್ಮಷ್ಟು ತಳಮಟ್ಟದ ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಾಹೇಬರೇ, ಛಲವಾದಿಯ ಛಲ ಯಾವ ರೀತಿಯದು ಎಂಬುದು ನಿಮಗೆ ಗೊತ್ತಿಲ್ಲದ ವಿಷಯವಲ್ಲ. ನಿಮ್ಮ ಹಿರಿತನಕ್ಕೆ ಯಾವಾಗಲೂ ನನ್ನ ಗೌರವ ಇದ್ದೇಯಿದೆ. ಕಾಲೇಜು ದಿನಗಳಿಂದಲೂ ನಿಮ್ಮ ಹೋರಾಟ, ಗಾಂಽ ನಗರದಲ್ಲಿ ಚುನಾವಣೆಗೆ ಸ್ಪರ್ಽಸಿ, ಸೋತಾಗಿನ ಚೀರಾಟ, ಮತ್ತನೇಕ ವಿಷಯಗಳು ನನಗೆ ತಿಳಿಯದ್ದೇನಲ್ಲ ಬಿಡಿ. ಆದರೆ ನಿಮ್ಮ ಇತಿಹಾಸ ನಿಮ್ಮ ಯೋಗದ ಪ್ರತಿಲವೇ ಹೊರತು, ಅದು ಯೋಗ್ಯತೆ ಮತ್ತು ಹೋರಾಟದ ಪ್ರತಿಬಿಂಬವಲ್ಲ ಎಂಬುದು ನನಗೆ ಮಾತ್ರವಲ್ಲ ಅನೇಕರಿಗೆ ಗೊತ್ತಿರುವ ವಿಷಯವೇ ಸರಿ ಎಂದಿದ್ದಾರೆ.

ವಿಚಾರ, ತತ್ವ, ಆದರ್ಶ, ಸಿದ್ಧಾಂತ ಮತ್ತು ಹೋರಾಟದ ಜೀವನ ಎಂದರೆ ಬೇರೆಯವರ ಪಂಚೆ, ಹ್ಯೂಬ್ಲೋಟ್‌ ವ್ಯಾಚ್‌, ಖಾಕಿ ಚಡ್ಡಿಯನ್ನು ಇಣುಕಿ ನೋಡಿ ಅವರನ್ನು ನಿಂದಿಸುವುದಲ್ಲ. ಅಽಕಾರಕ್ಕಾಗಿ ಹಾತೊರೆಯುತ್ತಾ ಸ್ವಪಕ್ಷದ ನಾಯಕರನ್ನೇ ಹೀಯಾಳಿಸುವುದಲ್ಲ ಎಂದು ಹೇಳಿದ್ದಾರೆ.

ನಿಮ್ಮ ಸಮಾಜವಾದಿ ಮುಖ ಯಾವುದು ಎಂಬುದು ನೀವು ನಿಮ್ಮ ನಾಯಕರನ್ನು ಟೀಕಿಸಿದಾಗಲೇ ಅನಾವರಣಗೊಂಡಿದೆ. ಸಮಾಜವಾದಿ ಚಿಂತನೆ ಮನಸ್ಸಿನಲ್ಲಿ ಇರಬೇಕು, ಮಾನ್ಯ ದೇವರಾಜ ಅರಸುರವರ ಕಾರಿನಲ್ಲಿ ಕುಳಿತರೆ ಅವರು ದೇವರಾಜ ಅರಸು ಆಗುವುದಿಲ್ಲ; ಅವರ ಚಿಂತನೆ ಅಳವಡಿಸಿಕೊಂಡರೆ ಮಾತ್ರ ನಿಜವಾದ ಸಮಾಜವಾದಿಯಾಗಲು ಸಾಧ್ಯ ಎಂಬುದು ನಿಮಗೂ ಅನ್ವಯವಾಗುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ನಿಮ್ಮ ಯೋಗ-ಯೋಗ್ಯತೆಯನ್ನು ಕಣ್ಣಾರೆ ಕಂಡ ನನ್ನ ಕಣ್ಣಿಗೆ ಕಾಮಾಲೆ ಬಂದಿಲ್ಲ. ಎಲ್ಲರನ್ನೂ ಗೌರವದಿಂದ ನೋಡುವ ನನಗೆ ಆಽಕಾರಕ್ಕಾಗಿ ಯಾರನ್ನೂ ನಿಮ್ಮ ರೀತಿಯಲ್ಲಿ ಹೀಯಾಳಿಸುವ ಉದ್ದೇಶವಿಲ್ಲ, ಸಂವಿಧಾನವನ್ನು ಪ್ರಶ್ನಿಸಿದ ಕಾರಣಕ್ಕೆ ಹಲವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಪಕ್ಷ ನಮ್ಮದು. ನಾನೂ ಕೂಡ ಇಂತಹ ನಡೆಯನ್ನು ಖಂಡಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೆ, ಅದಕ್ಕೆ ಪೂರಕವಾಗಿ ನನ್ನ ಪಕ್ಷದ ನಾಯಕರು ಅದನ್ನು ಗೌರವಿಸಿದರು.

ಈಗ ಮುಸಲ್ಮಾನರಿಗೆ ಸಂವಿಧಾನ ಬದಲಿಸಿಯಾದರೂ ಮೀಸಲಾತಿ ನೀಡುತ್ತೇವೆ ಎಂಬ ಉಪಮುಖ್ಯಮಂತ್ರಿ ಹೇಳಿಕೆಯನ್ನು ಪ್ರಶ್ನಿಸುವ ಅಥವಾ ವಿರೋಽಸುವ ತಾಕತ್ತು, ಧಮ್‌, ಎದೆಗಾರಿಕೆ, ಹೋರಾಟ ನಿಮ್ಮಲ್ಲಿರಲು ಸಾಧ್ಯವಿದೆಯೇ? ಅಥವಾ ನಿಮ್ಮ ಹೋರಾಟ ಮಂತ್ರಿ ಪದವಿಗೋಸ್ಕರ ಮಾತ್ರ ಮೀಸಲಿದೆನಾ? ಎಂದು ಪ್ರಶ್ನಿಸಿದರು.

ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಐದಾರು ದಶಕಗಳಿಂದ ವಂಚಿಸುತ್ತಾ ಬಂದ ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಸಂವಿಧಾನ ಪಿತೃ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ ಕೀರ್ತಿ ನಿಮ್ಮ ಕಾಂಗ್ರೆಸ್‌ ಪಕ್ಷಕ್ಕಿದೆ, ಅದನ್ನು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುವ ಅಪಕೀರ್ತಿ ನಿಮಗೂ ಇದೆ.

ಇಂತಹ ಕ್ರೂರ ಇತಿಹಾಸ ಹೊಂದಿದ ಪಕ್ಷದ ನಾಯಕರ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲು ನನಗೆ ಆಸಕ್ತಿಯಿಲ್ಲ. ನೀವು ಹಪಹಪಿಸುತ್ತಿರುವ ಕನಸಿನ ಮಂತ್ರಿ ಪದವಿ, ಯೋಗದಿಂದಾಗಲಿ ಅಥವಾ ಬೆದರಿಕೆಯಿಂದಾಗಲಿ ಅಥವಾ ಬೇರೆಯದೆ ಮಾರ್ಗದಿಂದಾಗಲಿ ನಿಮಗೆ ಪ್ರಾಪ್ತವಾಗಲಿ ಎಂದು ತಮಗೆ ಮತ್ತೊಮ್ಮೆ ಹಾರೈಸುತ್ತೇನೆ ಅವರು ಹೇಳಿದ್ದಾರೆ.

RELATED ARTICLES

Latest News