Sunday, July 6, 2025
Homeರಾಜಕೀಯ | Politics'ನನ್ ಸುದ್ದಿಗ್ ಬಂದ್ರೆ ನಿಮಪ್ಪನ ಬಂಡವಾಳ ಬಿಚ್ಚಿಡ್ತೀನಿ' : ಪ್ರಿಯಾಂಕ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ವಾರ್ನಿಂಗ್

‘ನನ್ ಸುದ್ದಿಗ್ ಬಂದ್ರೆ ನಿಮಪ್ಪನ ಬಂಡವಾಳ ಬಿಚ್ಚಿಡ್ತೀನಿ’ : ಪ್ರಿಯಾಂಕ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ವಾರ್ನಿಂಗ್

Chalavadi Narayanaswamy warns Priyanka Kharge

ಬೆಂಗಳೂರು,ಜು.6- ಪದೇ ಪದೇ ನನ್ನ ಸುದ್ದಿ ಬಂದರೆ ನಿನ್ನ ಇತಿಹಾಸದ ಜೊತೆಗೆ ನಿಮ್ಮಪ್ಪನ ಬಂಡವಾಳವನ್ನು ಬಿಚ್ಚಬೇಕಾಗುತ್ತದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವ ಪ್ರಿಯಾಂಕ ಖರ್ಗೆಗೆ ಏಕವಚನದಲ್ಲೇ ಎಚ್ಚರಿಕೆ ಕೊಟ್ಟಿದ್ದಾರೆ. ನನ್ನನ್ನು ಪ್ರಿಯಾಂಕ ಖರ್ಗೆ ಪದೇ ಪದೇ ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಇತಿಹಾಸವನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ನನ್ನ ಅಭ್ಯಂತರವೇನಿಲ್ಲ. ಪದೇ ಪದೇ ನನ್ನನ್ನು ಕೆಣಕಿದರೆ ನಿಮ್ಮ ತಂದೆಯ ಇತಿಹಾಸದ ಜೊತೆಗೆ ನಿಮ್ಮ ಇತಿಹಾಸವನ್ನು ಬಿಚ್ಚಬೇಕಾಗುತ್ತದೆ ಎಂದು ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದಲಿತರ ಆಸ್ತಿಯನ್ನು ಅಥವಾ ಸವಲತ್ತುಗಳನ್ನು ನನ್ನ ಕುಟುಂಬಕ್ಕೆ ತುಂಬಿಕೊಂಡಿಲ್ಲ. ನನ್ನ ಮನೆಯಲ್ಲಿ ಶಾಸಕರು, ಎಂಪಿಗಳು ಕೂಡ ಇಲ್ಲ, ದಲಿತರು ಸಂಕಷ್ಟಕ್ಕೆ ಸಿಲುಕಲು ನೀವೇ ಕಾರಣ. ನಿಮ್ಮ ಬಗ್ಗೆ ನಾಲ್ಕು ಜನ ದಲಿತರು ಒಳ್ಳೆಯದನ್ನೇ ಮಾತನಾಡುವುದಿಲ್ಲ. ಬೀದರ್‌ನಿಂದ ಚಾಮರಾಜನಗರದವರೆಗೂ ನಿಮ್ಮ ಚರಿತ್ರೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಹೋದರ ಪ್ರಿಯಾಂಕ್ ಖರ್ಗೆ ಮೆಂಟಲ್ ಆಸ್ಪತ್ರೆಯಿಂದ ಬಂದವರು. ಅವರ ಬಗ್ಗೆ ಮಾತನಾಡುವುದೇ ಬೇಡ. ಅವರು ಜನೋಪಕಾರಿ ಮಾತನಾಡುವುದು ಕಮ್ಮಿ. ಯಾರು ಪ್ಯಾಂಟ್ ಹಾಕುತ್ತಾರೆ. ಯಾರು ಚಡ್ಡಿ ಹಾಕುತ್ತಾರೆ, ಬರೀ ಇಂಥವೇ ಅವರು ಮಾತನಾಡುವುದು ಎಂದು ವ್ಯಂಗ್ಯವಾಡಿದರು. ಅವರು ನರೇಗಾ ಕೆಲಸದವರಿಗೆ ಹಣ ಕೊಡಲು ಆಗಿಲ್ಲ, ಅವರ ಇಲಾಖೆ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ. ಪ್ರಿಯಾಂಕ್ ಖರ್ಗೆ ಅಲ್ಲ ಅವರ ಇಡೀ ಖಾಂದಾನ್ ಬಂದರೂ ಆರ್ ಎಸ್ಎಸ್ ನಿಷೇಧ ಮಾಡಲು ಆಗುವುದಿಲ್ಲ.

ಹುಲಿ ತನ್ನ ಬಾಲ ಅಲ್ಲಾಡಿಸಬಹುದು. ಆದರೆ ಬಾಲ ಹುಲಿಯನ್ನು ಅಲ್ಲಾಡಿಸಲು ಆಗುವುದಿಲ್ಲ. ನೆಹರೂ, ಇಂದಿರಾ ಅವರಿಂದಲೇ ಸಂಘ ಪರಿವಾರವನ್ನು ಬ್ಯಾನ್ ಸಾಧ್ಯವಾಗಲಿಲ್ಲ. ಆರ್‌ಎಸ್‌ಎಸ್‌ ದೇಶಭಕ್ತರ ಕೂಟ, ನಾವು ಅದರ ಹಿಂದೆ ಇದ್ದೇವೆ. ಕಾಂಗ್ರೆಸ್‌ನವರು ಇರೋದು ಪಾಕಿಸ್ತಾನ, ಚೀನಾದ ಹಿಂದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ಒಂದೊಂದು ತಂತ್ರ ಹೊರಬರುತ್ತಿದೆ. ಸಿದ್ದರಾಮಯ್ಯ ಹಟಾವೊ ಶುರುವಾಗಿದೆ. ರಾಜ್ಯದಿಂದ ಸಿದ್ದರಾಮಯ್ಯ ಅವರನ್ನ ಹೆಗೆ ಹೊರಗೆ ಕಳುಹಿಸಬೇಕೆಂದು ತಂತ್ರ ಹೆಣೆಯಲಾಗಿದೆ. ಇದೇ ರೀತಿ 10/12 ವರ್ಷಗಳ ಹಿಂದೆ ಖರ್ಗೆಯವರನ್ನ ಇಲ್ಲಿಂದ ಹೇಗೆ ಹೊರಗೆ ಕಳಿಸಿದ್ದರು. ಖರ್ಗೆ ಅವರಿಗೆ ಶೆಡ್ ರೆಡಿ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಶೆಡ್ ರೆಡಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಸವರಾಜ ರಾಯರೆಡ್ಡಿ ಹೇಳಿಕೆಯನ್ನು ಖಂಡಿಸಿದ ಛಲವಾದಿ, ರಸ್ತೆ ಬೇಕಾದರೆ ಗ್ಯಾರಂಟಿ ಬಿಟ್ಟುಬಿಡಿ ಅಂತಾರೆ ರಾಯರೆಡ್ಡಿ. ಇವರದು ಅಭಿವೃದ್ಧಿ ಸರ್ಕಾರ ಅಲ್ಲ, ಜನರನ್ನ ಮೋಸ ಮಾಡಿ ಮೂಗಿಗೆ ತುಪ್ಪಸವರಿ ಮತ ಪಡೆದು ಲೂಟಿ ಮಾಡೋ ಉದ್ದೇಶ ಇವರದ್ದು. ಅಭಿವೃದ್ಧಿಗೂ ಗ್ಯಾರಂಟಿಗೂ ಯಾವ ಸಂಬಂಧ.? ಗ್ಯಾರಂಟಿ ಸರಿಯಾಗಿ ರೀಚ್ ಆಗುತ್ತಿಲ್ಲ. ನುಡಿದಂತೆ ನಡೆದಿಲ್ಲ ಇನ್ನು ಮೂರು ವರ್ಷಕ್ಕೆ ಚುನಾವಣೆ ಇದೆ. ಒಂದೇ ವರ್ಷ ಚುನಾವಣೆ ಅನ್ನೋ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಎಷ್ಟು ಸಾದ್ಯ ಅಷ್ಟು ಲೂಟಿ ಮಾಡುತ್ತಿದ್ದಾರೆ ಎಂದರು.

RELATED ARTICLES

Latest News