Sunday, September 8, 2024
Homeಮನರಂಜನೆಚಿತ್ರರಂಗದಿಂದ 'ಡೆವಿಲ್' ದರ್ಶನ್‌ಗೆ ನಿಷೇಧ ಹೇರಲು ಚಿಂತನೆ

ಚಿತ್ರರಂಗದಿಂದ ‘ಡೆವಿಲ್’ ದರ್ಶನ್‌ಗೆ ನಿಷೇಧ ಹೇರಲು ಚಿಂತನೆ

ಬೆಂಗಳೂರು,ಜೂ.13- ಕೊಲೆ ಪ್ರಕರಣದಲ್ಲಿ ವಿಚಾರಣೆಗೊಳಗಾಗಿರುವ ನಟ ದರ್ಶನ್‌ರನ್ನು ಚಿತ್ರರಂಗದಿಂದ ನಿಷೇಧಿಸುವ ಬದಲು ಅಸಹಕಾರ ಅಸ್ತ್ರ ಬಳಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸಂಜೆ ಕಾರ್ಯಕಾರಿ ಸಮಿತಿಯ ಸಭೆ ನಡೆಯುತ್ತಿದ್ದು, ಅಲ್ಲಿ ದರ್ಶನ್‌ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಈ ಕುರಿತು ಹೇಳಿಕೆ ನೀಡಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಪ್ರಜಾಪ್ರಭುತ್ವದಲ್ಲಿ ಯಾರನ್ನೂ ನಿಷೇಧಿಸಲು ಸಾಧ್ಯವಿಲ್ಲ. ಈ ಹಿಂದೆ ಕೆಲವು ಘಟನೆಗಳಾದಾಗ ಕೆಲವು ನಟರನ್ನು ನಿಷೇಧಿಸಲಾಗಿತ್ತು. ಆಗ ಹಿರಿಯರಾದ ಪಾರ್ವತಮ ರಾಜ್‌ಕುಮಾರ್‌, ಅಂಬರೀಷ್‌ ಸೇರಿದಂತೆ ಮತ್ತಿತರರು ಮಧ್ಯಪ್ರವೇಶ ಮಾಡಿ ನಿಷೇಧ ತೆರವುಗೊಳಿಸುವಂತಾಗಿತ್ತು. ಹೀಗಾಗಿ ಮತ್ತೊಮೆ ನಿಷೇಧ ಮಾಡುವುದು ಅಷ್ಟು ಸೂಕ್ತವಲ್ಲ ಎಂದರು.

ದರ್ಶನ್‌ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಜೊತೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ ಮತ್ತಿತರರು ಚರ್ಚೆ ನಡೆಸಿದ್ದಾರೆ.

ಪ್ರಕರಣ ಈಗಾಗಲೇ ಕಾನೂನಿನ ಅಂಗಳದಲ್ಲಿರುವುದರಿಂದ ನಮ ವ್ಯಾಪ್ತಿಯಲ್ಲಿ ಏನು ಸಾಧ್ಯವೋ ಅದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.ಸದ್ಯಕ್ಕೆ ಅಸಹಕಾರ ಪ್ರಕ್ರಿಯೆ ನಮ ಹಂತದಲ್ಲಿ ಚರ್ಚೆಯಲ್ಲಿದೆ. ಚಿತ್ರರಂಗದ ಮಾತೃ ಸಂಸ್ಥೆಯಾದ ವಾಣಿಜ್ಯ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದೇ ಆದರೆ ನಿರ್ದೇಶಕರ, ನಿರ್ಮಾಪಕರ, ಕಲಾವಿದರ, ತಂತ್ರಜ್ಞರ ಸಂಘಟನೆಗಳು ಅದನ್ನು ಪಾಲಿಸಬೇಕಾಗುತ್ತದೆ. ದರ್ಶನ್‌ ಅವರ ಚಿತ್ರವನ್ನು ಯಾರೂ ನಿರ್ದೇಶಿಸಬಾರದು, ನಿರ್ಮಿಸಬಾರದು, ಅವರ ಚಿತ್ರದಲ್ಲಿ ನಟಿಸಬಾರದು, ತಂತ್ರಜ್ಞರು ಕೆಲಸ ಮಾಡಬಾರದು ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಅದನ್ನು ಎಲ್ಲರೂ ಅನುಸರಿಸಬೇಕು ಎಂದರು.

RELATED ARTICLES

Latest News