ಚಾಮರಾಜನಗರ, ಜು.2– ಮಾದೇಶ್ವರ ಸ್ವಾಮಿ ಬೆಟ್ಟದಲ್ಲಿ ಹುಲಿಗಳ ಹತ್ಯೆ ಕಹಿನೆನಪು ಮಾಸುವ ಮುನ್ನವೇ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿ ಕಂದೇಗಾಲ ಕೊಡಸೋಗೆ ಬಳಿ 20ಕ್ಕೂ ಹೆಚ್ಚು ವಾನರಗಳ ಮೃತದೇಹ ಪತ್ತೆಯಾಗಿದೆ.
ವಾನರಗಳಿಗೆ ವಿಷವಿಟ್ಟು ಹತ್ಯೆ ಮಾಡಿ ನಂತರ ಇಲ್ಲಿ ತಂದುಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಕೋತಿಗಳನ್ನು ಗಮನಿಸಿದ ಸ್ಥಳೀಯರು ಕೂಡಲೇ ಗುಂಡ್ಲುಪೇಟೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ವಾನರಗಳ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಿದ್ದಾರೆ.
- ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದೆ : ಟ್ರಂಪ್
- ಯೂ ಟರ್ನ್ ಹೊಡೆದ ಬಿ.ಆರ್.ಪಾಟೀಲ್
- ಖಾಸಗಿ ವಲಯದಲ್ಲೂ ಜಾತಿ ಆಧಾರಿತ ಮೀಸಲಾತಿ ಬೇಕು : ರಾಮದಾಸ್ ಅಠಾವಳೆ
- ಕೆಲಸದ ಅವಧಿ ಹೆಚ್ಚಿಸಲು ತೀರ್ಮಾನವಾಗಿಲ್ಲ : ಸಂತೋಷ್ ಲಾಡ್
- ಇಮ್ರಾನ್ಖಾನ್ ಹತ್ಯೆಗೆ ಜೈಲಿನಲ್ಲೇ ಸಂಚು ನಡೆಸಲಾಗುತ್ತಿದೆ: ಅಲೀಮಾ ಖಾನ್