Friday, August 29, 2025
Homeಬೆಂಗಳೂರುಈ ಸಂಜೆ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಲಮಂಡಳಿಯಿಂದ ರಸ್ತೆ ದುರಸ್ತಿ

ಈ ಸಂಜೆ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಲಮಂಡಳಿಯಿಂದ ರಸ್ತೆ ದುರಸ್ತಿ

Chamarajpet road patholes

ಬೆಂಗಳೂರು, ಆ.29– ನಗರದ ಚಾಮರಾಜಪೇಟೆಯಲ್ಲಿ ಬೆಂಗಳೂರು ಜಲಮಂಡಳಿ ಕಾಮಗಾರಿಗಾಗಿ ಅಗೆದ ರಸ್ತೆ ಗುಂಡಿಗೆ ಸಿಲುಕಿ ವಾಹನ ಸವಾರರು ಪರದಾಟದ ಸಂಬಂಧ ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಲಮಂಡಳಿ ರಸ್ತೆ ದುರಸ್ತಿ ಮಾಡಿದೆ.

ಜಲಮಂಡಳಿ ಕಾಮಗಾರಿ ಅಧ್ವಾನ..! ರಸ್ತೆ ಗುಂಡಿಯಲ್ಲಿ ಹೂತುಹೋದ ವಾಹನಗಳು ಶೀರ್ಷಿಕೆಯಡಿ ಈ ಸಂಜೆ ಪತ್ರಿಕೆಯಲ್ಲಿ ನಿನ್ನೆ ಸುದ್ದಿ ಪ್ರಕಟವಾಗಿತ್ತು. ಕಾಮಗಾರಿ ಗುಂಡಿಯಲ್ಲಿ ಮಳೆನೀರು ನಿಂತು ಸಾಕಷ್ಟು ತೊಂದರೆಗಳು ಸಂಭವಿಸಿದ್ದವು.

ಈ ಸಂಬಂಧ ಪತ್ರಿಕೆಯಲ್ಲಿ ವರದಿವಾಗಿತ್ತು. ಇದನ್ನು ಗಮನಿಸಿದ ಜಲಮಂಡಳಿ ಅಧಿಕಾರಿಗಳು ಕಳೆದ ರಾತ್ರಿ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಜಲಮಂಡಳಿಯವರು ಅಗೆದಿರುವ ರಸ್ತೆ ಗುಂಡಿಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಅವರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನೂ ನಗರದ ಹಲವೆಡೆ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ರಸ್ತೆಗಳು ಗುಂಡಿಮಯವಾಗಿದ್ದು, ಅವುಗಳನ್ನು ಮುಚ್ಚುವ ಕಾರ್ಯ ಆರಂಭಿಸಲಾಗಿದೆ.

RELATED ARTICLES

Latest News