Sunday, June 30, 2024
Homeರಾಷ್ಟ್ರೀಯಮಧ್ಯ ಪ್ರದೇಶದಲ್ಲಿ ಕರಾಳ ತುರ್ತು ಪರಿಸ್ಥಿತಿಯ ಕುರಿತು ಪಠ್ಯ

ಮಧ್ಯ ಪ್ರದೇಶದಲ್ಲಿ ಕರಾಳ ತುರ್ತು ಪರಿಸ್ಥಿತಿಯ ಕುರಿತು ಪಠ್ಯ

ಭೂಪಾಲ್‌,ಜೂ.27- ಶಾಲಾ ಪಠ್ಯ ಪುಸ್ತಕದಲ್ಲಿ ಇನ್ನು ಮುಂದೆ 1975ರ ಕರಾಳ ತುರ್ತು ಪರಿಸ್ಥಿತಿ ಕುರಿತು ಅಧ್ಯಾಯವನ್ನು ಸೇರ್ಪಡೆ ಮಾಡುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಘೋಷಿಸಿದ್ದಾರೆ.

ಭೂಪಾಲ್‌ನ ಮುಖ್ಯಮಮತ್ರಿಗಳ ನಿವಾಸಿ ಲೋಕತಂತ್ರ ಸೇನಾನಿ ಸಮಾನ್‌ ಸಮಾರಂಭದಲ್ಲಿ ಮಾತನಾಡಿದ ಅವರು, 1975ರಿಂದ 1977ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಇಂದಿನ ಪೀಳಿಗೆಗೆ ಹೋರಾಟದ ಬಗ್ಗೆ ಅರಿವು ಮೂಡಿಸುವುದು ಈ ಹೆಜ್ಜೆಯ ಹಿಂದಿನ ಉದ್ದೇಶವಾಗಿದೆ ಎಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ಜನತೆ ಹೋರಾಟಗಳನ್ನು ಸರಿಸಿದ ಅವರು, ದೇಶದಲ್ಲಿ ಚಾಲ್ತಿಯಲ್ಲಿರುವ ಸನ್ನಿವೇಶಗಳು, ದಮನ ಮತ್ತು ಅಂದಿನ ಕಾಂಗ್ರೆಸ್‌‍ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮವನ್ನು ವಿರೋಧಿಸಲು ಲೋಕತಂತ್ರ ಸೇನಾನಿಗಳ ದೃಢಸಂಕಲ್ಪವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಹೇಳಿದರು.

ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು, ಆದರೆ ಪ್ರಜಾಪ್ರಭುತ್ವ ಹೋರಾಟಗಾರರ ಹೋರಾಟದಿಂದ ಇಂದು ದೇಶ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲ್ಪಟ್ಟವರನ್ನು ಮಿಸಾಬಂದಿ ಎಂದು ಕರೆಯುತ್ತಾರೆ, ಬಿಜೆಪಿ ಅವರನ್ನು ಲೋಕತಂತ್ರ ಸೇನಾನಿ ಎಂದು ಹೆಸರಿಸಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಜನರನ್ನು ಅಂದರೆ ಆಂತರಿಕ ಭದ್ರತಾ ಕಾಯಿದೆಯ ನಿರ್ವಹಣೆಯಡಿ ಬಂಧಿಸಲಾಯಿತು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಡಿದವರಿಗೆ ಸರ್ಕಾರಿ ಅತಿಥಿ ಗೃಹಗಳಲ್ಲಿ ಮೂರು ದಿನಗಳ ಕಾಲ ಶೇ.50 ರಿಯಾಯಿತಿ ದರದಲ್ಲಿ ತಂಗಲು ಸೌಲಭ್ಯ ಕಲ್ಪಿಸಲಾಗುವುದು. ಅವರು ಹೆದ್ದಾರಿಯಲ್ಲಿ ಟೋಲ್‌ ಪಾವತಿಸುವಲ್ಲಿ ವಿನಾಯಿತಿ ಪಡೆಯುತ್ತಾರೆ. ಆಯುಷಾನ್‌ ಹೆಲ್ತ್‌ಕಾರ್ಡ್‌ ಮೂಲಕ ಪ್ರಜಾಪ್ರಭುತ್ವ ಹೋರಾಟಗಾರರಿಗೆ ಚಿಕಿತ್ಸಾ ವೆಚ್ಚ ಪಾವತಿಸಲು ವಿಳಂಬ ಮಾಡುವುದಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.

ಗಂಭೀರ ಆರೋಗ್ಯ ಸಮಸ್ಯೆಗಳ ಸಂದರ್ಭ ದಲ್ಲಿ ಪ್ರಜಾಪ್ರಭುತ್ವ ಹೋರಾಟಗಾರರಿಗೆ ಏರ್‌ ಆಂಬ್ಯುಲೆನ್‌್ಸಗಳನ್ನು ಒದಗಿಸಲಾಗುವುದು ಮತ್ತು ತುರ್ತುಸ್ಥಿತಿ-ವಿರೋಧಿ ಕ್ರುಸೇಡರ್‌ ಗಳು ಪ್ರಯಾಣ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಪಡೆಯುತ್ತಾರೆ. ಹೋರಾಟಗಾರರ ಸಂಬಂಧಿತ ಕಲೆಕ್ಟರ್‌ಗಳಿಗೆ ಮೂರು ತಿಂಗಳೊಳಗೆ ಪಾವತಿಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿದರು.

ಲೋಕತಂತ್ರ ಸೇನಾನಿಗಳ ಅಂತಿಮ ಸಂಸ್ಕಾರಕ್ಕೆ ಸರ್ಕಾರಿ ಗೌರವಗಳೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಕುಟುಂಬಗಳಿಗೆ ನೀಡಲಾಗುವ ಮೊತ್ತವನ್ನು ಪ್ರಸ್ತುತ 8,000ರಿಂದ 10,000 ಕ್ಕೆ ಹೆಚ್ಚಿಸಲಾಗುವುದು. ಇದರೊಂದಿಗೆ ಪ್ರಜಾಪ್ರಭುತ್ವ ಹೋರಾಟಗಾರರ ಕುಟುಂಬದ ಸದಸ್ಯರಿಗೆ ಕೈಗಾರಿಕೆಗಳು ಅಥವಾ ಇತರ ವ್ಯಾಪಾರೋದ್ಯಮಗಳನ್ನು ಸ್ಥಾಪಿಸಲು ಅಗತ್ಯ ತರಬೇತಿಯನ್ನು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

RELATED ARTICLES

Latest News