ಬೆಂಗಳೂರು, ಮೇ 22- ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯ ಬಳಕೆಗೂ ಶುಲ್ಕ ಪಾವತಿ ಮಾಡಬೇಕಿದೆ.ಹೌದು… ಕೆಲ ದಿನಗಳ ಹಿಂದಷ್ಟೇ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದ ಬಿಎಂಆರ್‌ಸಿಎಲ್ ನವರು ಇದೀಗ ಶೌಚಾಲಯ ಬಳಕೆಗೂ ದರ ನಿಗದಿಪಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಬೇಕಂದ್ರೆ ಇನ್ಮುಂದೆ 2 ರಿಂದ 5 ರುಪಾಯಿ ನಿಗದಿ ಮಾಡಲಾಗಿದೆ.ಶೌಚಾಲಯ ಬಳಸುವ ಪ್ರಯಾಣಿಕರಿಂದ ಹಣ ಸಂಗ್ರಹಿಸಲು ಬಿಎಂಆರ್‌ಸಿಎಲ್‌ನವರು ಸಿಬ್ಬಂದಿಗಳನ್ನು ನೇಮಕ ಮಾಡಿದ್ದಾರೆ.
ಮೆಟ್ರೋ ನಿಲ್ದಾಣ ಶೌಚಾಲಯ ಬಳಕೆಗೆ ನಿಗದಿತ ದರದ ಬಗ್ಗೆ ಬೋರ್ಡ್ ಹಾಕಿ ಹಗಲು ದರೋಡೆಗೆ ಮುಂದಾಗಿರುವ ಬಿಎಂಆರ್‌ಸಿಎಲ್ ಕ್ರಮಕ್ಕೆ ಪ್ರಯಾಣಿಕರು ಕಿಡಿ ಕಾರಿದ್ದಾರೆ.