ಮುಂಬೈ,ಡಿ.6- ಅನಾಮಧೇಯ ವ್ಯಕ್ತಿಗಳು ರಾಸಾಯನಿಕ ಸಿಂಪಡಿಸಿದ್ದರಿಂದ ಪ್ರೇಕ್ಷಕರು ಕೆಮ್ಮಲು ಪ್ರಾರಂಭಿಸಿದ ನಂತರ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಪ್ರದರ್ಶನ ರದ್ದುಗೊಳಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಮುಂಬೈನ ಗೈಟಿ ಗ್ಯಾಲಕ್ಸಿ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಚಿತ್ರದ ಪ್ರದರ್ಶನಕ್ಕೆ ಯಾರೋ ಅಪರಿಚಿತ ರಾಸಾಯನಿಕ ವಸ್ತುವನ್ನು ಸಿಂಪಡಿಸಿದ ಘಟನೆಯ ನಂತರ ಹಲವಾರು ಚಲನಚಿತ್ರ ಪ್ರೇಕ್ಷಕರು ಕೆಮಲು ಪ್ರಾರಂಭಿಸಿದರು ಮತ್ತು ಗಂಟಲಿನ ಕಿರಿಕಿರಿ ಉಂಟಾದರಿಂದ ಪ್ರದರ್ಶನವನ್ನು ನಿಲ್ಲಿಸಲಾಯಿತು.
ಬಾಂದ್ರಾದಲ್ಲಿನ ಸಿನಿಮಾ ಹಾಲ್ನಲ್ಲಿ ಗೊಂದಲ ಉಂಟಾದಾಗ ಭಯಭೀತರಾದ ಚಲನಚಿತ್ರ ಪ್ರೇಕ್ಷಕರು ತಮ ಮುಖಗಳನ್ನು ಮುಚ್ಚಿಕೊಳ್ಳುವುದು ಹಾಗೂ ಕೆಮಲು ಶುರು ಮಾಡಿದರು ಎನ್ನಲಾಗಿದೆ.ಒಂದು ದಿನ ಮುಂಚಿತವಾಗಿ, ಬಹುನಿರೀಕ್ಷಿತ ಪುಷ್ಪಾ ಸೀಕ್ವೆಲ್ನ ಪ್ರೀಮಿಯರ್ ಸಮಯದಲ್ಲಿ ಹೈದರಾಬಾದ್ ಸಿನಿಮಾ ಹಾಲ್ನಲ್ಲಿ ಕಾಲ್ತುಳಿತಕ್ಕೆ ಮಹಿಳೆಯೊಬ್ಬರನ್ನು ಬಲಿಯಾಗಿದ್ದರು.
ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಸಂಭವಿಸಿದ್ದು, ಯಾವುದೇ ಸೂಚನೆಯಿಲ್ಲದೆ ಪ್ರೀಮಿಯರ್ಗೆ ಆಗಮಿಸಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಪಾರ ಜನಸ್ತೋಮ ಏಕಾಏಕಿ ಮುಗಿಬಿದ್ದಾಗ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಆಕೆಯ ಒಂಬತ್ತು ವರ್ಷದ ಮಗನನ್ನು ಉಸಿರುಕಟ್ಟುವಿಕೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ಅರ್ಜುನ್ ಮತ್ತು ಥಿಯೇಟರ್ ಆಡಳಿತವು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.