ಚೆನ್ನೈ, ಜ.22- ಇಂಗ್ಲೆಂಡ್ ಹಾಗೂ ಭಾರತ ನಡುವಿನ ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ಟಿಕೆಟ್ ಹೊಂದಿದ ಸಾರ್ವಜನಿಕರು ಜ.25 ರಂದು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್ ಸಿಎ) ತಿಳಿಸಿದೆ.
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಎಲ್ಲ ಟಿಕೆಟ್ ಗಳು ಈಗಾಗಲೇ ಬಹುತೇಕ ಸೋಲ್‌್ಡ ಔಟ್ ಆಗಿದ್ದು, ಆ ಸಮಯದಲ್ಲಿ ಚೆನ್ನೈನಲ್ಲಿ ಪೊಂಗಲ್ ಹಬ್ಬ ಆಚರಿಸುತ್ತಿದ್ದು ಚೆನ್ನೈ ಮೆಟ್ರೋ ರೈಲ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಟಿಎನ್ಸಿಎ ಸಾರ್ವಜನಿಕರಿಗೆ ಉಚಿತ ಮೆಟ್ರೋ ಸೇವೆ ಕಲ್ಪಿಸಿದೆ.
2023ರ ಐಪಿಎಲ್ ಟೂರ್ನಿ ಯ ವೇಳೆ ಮರಿನಾ ಬೀಚ್ ನಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಸಲುವಾಗಿ ಟಿಎನ್ಸಿಎ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪಯಣದ ಸೇವೆ ಕಲ್ಪಿಸಿತ್ತು.
`ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟ್ವೆಂಟಿ-20 ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರು ಎರಡು ಕಡೆಯಿಂದಲೂ ಮೆಟ್ರೋ ದಲ್ಲಿ ಉಚಿತ ಪ್ರಯಾಣ ಮಾಡ ಬಹುದು’ ಎಂದು ಟಿಎನ್ ಸಿಎ) ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವೆ ಇಂದಿನಿಂದ (ಜನವರಿ 22) ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಜಿದ್ದಾಜಿದ್ದಿನ ಕಾದಾಟ ನಡೆಸಲಿದ್ದು, ನಂತರ ಮೂರು ಏಕದಿನ ಪಂದ್ಯಗಳು ಆಯೋಜನೆಗೊಂಡಿದೆ.