ಸ್ಟಾವಂಜರ್(ನಾರ್ವೆ),ಮೇ.30- ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಅಂತರರಾಷ್ಟೀಯ ಪಂದ್ಯಾವಳಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಅದ್ಬುತ ಆಟದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ವ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ತಮ್ಮ ಚೊಚ್ಚಲ ಜಯ ಸಾಧಿಸಿದ್ದಾರೆ. ಚುರುಕಿನ ಆಟದಲ್ಲಿ ಮೂರು ಸುತ್ತುಗಳ ಬಳಿಕ 5.5 ಅಂಕಗಳೊಂದಿಗೆ ಮೇಲುಗೈ ಸಾಧಿಸಿ ಎದುರಾಳಿಗೆ ತನ್ನ ಶಕ್ತಿ ತೋರಿಸಿ ಅಂತಿಮವಾಗಿ ಜಯದ ಮಾಲೆ ಧರಿಸಿದ್ದಾರೆ.
ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ 18 ವರ್ಷದ ಪ್ರಗ್ನಾನಂದ ಬಿಳಿ ಕಾಯಿಗಳೊಂದಿಗೆ ಆಡಿ ತವರಿನ ನೆಚ್ಚಿನ ಆಟಗಾರ ಕಾರ್ಲ್‌ಸೆನ್ ವಿರುದ್ದ ಗೆಲುವು ಸಾಧಿಸುವುದರ ಜೊತೆಗೆ ಅವರನ್ನು ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಳ್ಳಿದರು. ಸ್ಲೋ ಚೆಸ್ ಎಂದೂ ಕರೆಯಲ್ಪಡುವ ಕ್ಲಾಸಿಕಲ್ ಚೆಸ್ ಆಟಗಾರರು ತಮ್ಮ ಚಲನೆಗಳನ್ನು ಮಾಡಲು ಗಮನಾರ್ಹ ಸಮಯಾವಕಾಶ ಸಿಗುತ್ತದೆ. ಸಾಮಾನ್ಯವಾಗಿ ಕನಿಷ್ಠ ಒಂದು ಗಂಟೆ ಅವಕಾಶ ಇರುತ್ತದೆ.
ಈ ಸ್ವರೂಪದಲ್ಲಿ ಕಾರ್ಲ್‌ಸೆನ್ ಮತ್ತು ಪ್ರಗ್ನಾನಂದ ನಡುವಿನ ಈ ಹಿಂದಿನ ಮೂರು ಮುಖಾಮುಖಿಗಳೂ ಕೂಡ ಡ್ರಾದಲ್ಲಿ ಅಂತ್ಯಗೊಂಡಿದ್ದವು.ಪ್ರಗ್ನಾನಂದ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿದೆ . ಪಂದ್ಯಾವಳಿಯಲ್ಲಿ ಉತ್ತಮ ಆರಂಭಕಂಡು ಈಗ ಪ್ರಶಸ್ತಿ ಗೆಲ್ಲುವ ನೆಚ್ಚನ ಆಟಗಾರರ ಎನಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಗ್ನನಂದಾ ಅವರ ಸಹೋದರಿ ಆರ್ ವೈಶಾಲಿ 5.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ ಅವರು ಅನ್ನಾ ಮುಜಿಚುಕ್ ವಿರುದ್ಧ ತಮ ಆಟವನ್ನು ಡ್ರಾ ಮಾಡಿಕೊಂಡರು.
ಇತರ ಪಂದ್ಯಗಳಲ್ಲಿ, ವಿಶ್ವದ ಎರಡನೇ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರು ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಅಮೇರಿಕನ್ ಹಿಕರು ನಕಮುರಾ ಅವರು ಫ್ರಾನ್ಸ್ ನ ಅಲಿರೆಜಾ ಫಿರೌಜ್ಜಾ ವಿರುದ್ಧ ತಮ ಆರ್ಮಗೆಡ್ಡೋನ್ ಪಂದ್ಯವನ್ನು ಗೆದ್ದು ಹೆಚ್ಚುವರಿ ಅರ್ಧ ಪಾಯಿಂಟ್ ಗಳಿಸಿದರು ಮತ್ತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.ಮುಂದೆ ನಕಮುರಾ ನಾಲ್ಕನೇ ಸುತ್ತಿನಲ್ಲಿ ಪ್ರಗ್ನಾನಂದ ವಿರುದ್ಧ ಸೆಣಸಲಿದ್ದಾರೆ.ಈ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.