ನವದೆಹಲಿ, ಆ.24- ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಅವರು ತಮ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಪೂರ್ವ ಆಟಗಾರ ಎಂಬ ಖ್ಯಾತಿ ಪಡೆದಿರುವ ಚೇತೇಶ್ವರ ಪೂಜಾರ ದಿಢೀರ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ತಮ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೃತ್ತಿ ಜೀವನವನ್ನು ಅಂತ್ಯಗೊಳಿಸಿದ್ದಾರೆ. 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಆಡಿದ್ದ ಚೇತೇಶ್ವರ ಪೂಜಾರ, ನಂತರ 2013ರಲ್ಲಿ ಏಕದಿನ ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ದರು.
ಆದರೆ, ಏಕದಿನಕ್ಕಿಂತ ಟೆಸ್ಟ್ ಕ್ರಿಕೆಟ್‌ನಲ್ಲಿ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದ ಪೂಜಾರ, 103 ಟೆಸ್ಟ್‌ಗಳನ್ನು ಆಡಿ 19 ಶತಕಗಳನ್ನು ಗಳಿಸಿದ್ದರೆ, ಐದು ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 7200 ರನ್ ಕಲೆ ಹಾಕಿದ್ದಾರೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಭಾರತದ ಪರವಾಗಿ ಅಮೋಘ ಆಟ ಪ್ರದರ್ಶಿಸಿದರು. ನಂತರ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇದೇ ಅವರ ಕೊನೆಯ ಟೆಸ್ಟ್ ಕೂಡ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ತಮ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅವರು, ಭಾರತದ ಜರ್ಸಿ ಧರಿಸುವುದು, ಭಾರತೀಯ ರಾಷ್ಟ್ರಗೀತೆ ಆಡುವುದು ಮತ್ತು ತಾನು ಮೈದಾನದಲ್ಲಿ ಕಾಲಿಟ್ಟ ಪ್ರತಿ ಕ್ಷಣವನ್ನೂ ನೆನೆಯುತ್ತೇನೆ ಮತ್ತು ಉತ್ತಮ ಪ್ರದರ್ಶನ ನೀಡುವ ಉತ್ಸಾಹವಿತ್ತು. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಒಳ್ಳೆಯ ವಿಷಯವೂ ಕೊನೆಯಾಗುತ್ತದೆ. ಅದರಂತೆ ನಾನು ಈಗ ಎಲ್ಲ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ತಿಳಿಸಿದರು.