Friday, March 28, 2025
Homeರಾಷ್ಟ್ರೀಯ | Nationalಛತ್ತೀಸ್‌ಗಢದಲ್ಲಿ ಮೂವರು ನಕ್ಸಲರ ಎನ್‌ಕೌಂಟರ್

ಛತ್ತೀಸ್‌ಗಢದಲ್ಲಿ ಮೂವರು ನಕ್ಸಲರ ಎನ್‌ಕೌಂಟರ್

Chhattisgarh: Three Naxalites killed in encounter with security forces in Dantewada district

ದಂತೇವಾಡ, ಮಾ. 25: ಛತ್ತೀಸ್ ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ನಕ್ಸ ಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ತಂಡವು ನಕ್ಸ ಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು.

ಘಟನಾ ಸ್ಥಳದಿಂದ ಮೂವರು ನಕ್ಸಲರ ಶವಗಳು ಮತ್ತು ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಾರ್ಚ್ 20 ರಂದು ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು 30 ನಕ್ಸ ಲರನ್ನು ಗುಂಡಿಕ್ಕಿ ಕೊಂದಿದ್ದವು.

RELATED ARTICLES

Latest News