Saturday, April 27, 2024
Homeರಾಜ್ಯಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು

ಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು

ಬೆಂಗಳೂರು,ಡಿ.17- ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಯಲುವ ಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಸಮಾಜ ಕಲ್ಯಾಣ ಇಲಾಖೆ ಅಮಾನತುಗೊಳಿಸಿದೆ.

ಮೊರಾರ್ಜಿ ಶಾಲೆ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ವಾರ್ಡನ್ ಮಂಜುನಾಥ್ ಹಾಗೂ ಡಿ ಗ್ರೂಪ್ ನೌಕರರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿ ತನಿಖೆಗೂ ಸೂಚನೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸೂಚನೆ ಮೇರೆಗೆ ಶಾಲೆಯ ಸಿಬ್ಬಂದಿಗಳನ್ನು ಇಲಾಖೆಯ ಜಂಟಿ ನಿರ್ದೇಶಕನನ್ನು ಅಮಾನತು ಮಾಡಿದ್ದಾರೆ.

ಸಂಸತ್ತಿಗೆ ನುಗ್ಗಿದವರ ಮೊಬೈಲ್ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಪತ್ತೆ

ಅಲ್ಲದೆ ಭವಿಷ್ಯದಲ್ಲಿ ಇಂತಹ ಘಟನೆಗಳು ರಾಜ್ಯದ ಯಾವುದೇ ಸ್ಥಳಗಳಲ್ಲೂ ನಡೆಯದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸುತ್ತೋಲೆ ಹೊರಡಿಸುವುದಾಗಿ ಮಹದೇವಪ್ಪ ಹೇಳಿದ್ದಾರೆ.ಮಾಲೂರು ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದಗುಂಡಿಯೊಳಗೆ ಇಳಿಸಿ ಪ್ರಾಂಶುಪಾಲರ ಎದುರೇ ಸ್ವಚ್ಛಗೊಳಿಸಿರುವ ಘಟನೆ ಭಾರೀ ವಿವಾದವನ್ನೇ ಸೃಷ್ಟಿಸಿತ್ತು.

ಮಕ್ಕಳಿಗೆ ಇಲ್ಲಿನ ಸಿಬ್ಬಂದಿಯವರು ಕಿರುಕುಳ ನೀಡುತ್ತಿದ್ದರು. ಅನಗತ್ಯವಾಗಿ ಹೊಡೆಯುವುದು, ಕಿರುಕುಳ ನೀಡುವುದು, ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇನ್ನು ಘಟನಾ ಸ್ಥಳಕ್ಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಕೋಲಾರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ರಾಮಮಂದಿರ ಉದ್ಘಾಟನೆ : ಅಮೆರಿಕದಲ್ಲಿನ ಹಿಂದೂ ಸಮುದಾಯದಿಂದ ಕಾರು ರ‍್ಯಾಲಿ

ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ಮಲದಗುಂಡಿಯಲ್ಲ. ಸ್ವಚ್ಛತಾ ಆಂದೋಲನ ಛೇಂಬರ್ ಒಳಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಕೇಳಿದ್ದಾರೆ. ಆದರೆ ಇದು ಮಲದಗುಂಡಿ ಎಂದು ವಸತಿ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಖಚಿತಪಡಿಸಿದ್ದಾರೆ.

RELATED ARTICLES

Latest News