Thursday, May 2, 2024
Homeರಾಷ್ಟ್ರೀಯಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ

ಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ

ನವದೆಹಲಿ,ಡಿ.17-ದೇಶಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿರುವ ಸಂಸತ್‍ನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಪ್ರಧಾನಿ ನರೇಂದ್ರಮೋದಿ ಅವರು, ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿದ್ದು, ಅಷ್ಟೇ ಆತಂಕಕಾರಿಯೂ ಹೌದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಗಂಭೀರವಾದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಇದು ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ಆಳವಾದ ತನಿಖೆ ನಡೆಯಬೇಕು. ಯಾರೊಬ್ಬರು ಇದರಲ್ಲಿ ರಾಜಕೀಯವನ್ನು ಬೆರೆಸಬಾರದೆಂದು ವಿರೋಧ ಪಕ್ಷಗಳು ಹಾಗೂ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಹಿಂದಿ ದೈನಿಕ ಡ್ಯಾನಿಶ್ ಜಾಗರಣ್ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಘಟನೆ ನಡೆದು ಐದು ದಿನಗಳ ನಂತರ ಮೊದಲ ಬಾರಿಗೆ ಅವರು ಮಾತನಾಡಿದ್ದಾರೆ. ಸಂಸತ್‍ನಲ್ಲಿ ನಡೆದ ಘಟನೆಯ ಗಂಭೀರತೆಯನ್ನು ನಾವು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಲೋಕಸಭೆಯ ಸ್ಪೀಕರ್ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದನ್ನು ತಿಳಿಯಲು ವಿಷಯದ ಆಳಕ್ಕೆ ಹೋಗುವುದು ಮುಖ್ಯ.

ಒಟ್ಟಾರೆ ನಮಗೆ ಪರಿಹಾರ ಸಿಗಬೇಕು. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣವು ಗಂಭೀರವಾಗಿಯೇ ಇದೆ. ನಾವು ಕಡಿಮೆ ಅಂದಾಜು ಮಾಡಬಾರದು. ಡಿ.13ರಂದು ಏನಾಯಿತು ಎಂಬುದರ ಹಿಂದಿನ ಉದ್ದೇಶಗಳನ್ನು ತನಿಖೆ ಮಾಡಲು ಅಗತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.

ಈ ವಿಷಯದ ಬಗ್ಗೆ ಪ್ರತಿರೋಧಗಳಿಂದ ದೂರ ಇರಬೇಕು ಎಂದು ಮನವಿ ಮಾಡಿದ್ದಾರೆ. ಸಭಾಧ್ಯಕ್ಷರು ಪ್ರಕರಣದ ಬಗ್ಗೆ ಗಂಭೀರತೆಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಈ ಬಗ್ಗೆ ಕಟ್ಟುನಿಟ್ಟಾಗಿ ತನಿಖೆ ನಡೆಸುತ್ತಿವೆ. ಒಂದೇ ಮನಸ್ಸಿನಿಂದ ಪರಿಹಾರವನ್ನೂ ಕಂಡುಕೊಳ್ಳಬೇಕು. ತಪ್ಪು ಹುಡುಕುವುದರಿಂದ ಪರಿಹಾರ ಸಿಗುವುದಿಲ್ಲ. ಸಂಸತ್ ಒಳಗೆ ನುಗ್ಗಿದವರ ಉದ್ದೇಶಗಳು ಹಾಗೂ ಅದರ ಹಿಂದಿನ ಉದ್ದೇಶಗಳನ್ನು ನಮ್ಮ ತನಿಖಾಧಿಕಾರಿಗಳು ಪತ್ತೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಇನ್ನು ಮೋದಿ ಅವರು ತಮ್ಮ ಮಾತಿನ ಉದ್ದಕ್ಕೂ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈಗ ದೇಶದ ಜನತೆಯ ನಂಬಿಕೆ ಕಳೆದುಕೊಂಡಿರುವ ರಾಜಕೀಯ ಪಕ್ಷವಾಗಿದೆ. ಇತಿಹಾಸದ ಶತಮಾನವುಳ್ಳ ಪಕ್ಷವನ್ನು ನಂಬುವ ಸ್ಥಿತಿಯಲ್ಲಿ ಯಾರೊಬ್ಬರು ಇಲ್ಲ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಂದರಲ್ಲೂ ತಪ್ಪು ಹುಡುಕುವುದು ಕಾಂಗ್ರೆಸ್‍ನ ಹುಟ್ಟಗುಣ. ಸಾಲು ಸಾಲು ಸೋಲುಗಳನ್ನು ಅನುಭವಿಸಿದ್ದರೂ ತನ್ನ ತಪ್ಪನ್ನು ತಿದ್ದುಕೊಳ್ಳದೆ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ನಾವು ಸ್ಪಷ್ಟ ಜನಾದೇಶ ಪಡೆಯಲಿದ್ದೇವೆ. 2019ರ ಲೋಕಸಭೆ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಬಿಜೆಪಿಗೆ ದೇಶದ ಜನತೆ ನೀಡಲಿದ್ದಾರೆ. ಕೇಂದ್ರದಲ್ಲಿ ನಾವು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ಯಾವುದೇ ಶಕ್ತಿಗಳು ತಡೆಯುವುದಿಲ್ಲ ಎಂದು ಆತ್ಮವಿಶ್ವಾಸದಿಂದ ಮೋದಿ ನುಡಿದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಬ್ರಹ್ಮಾಂಡದ ಯಾವುದೇ ಶಕ್ತಿಯು ಈಗ ಆಗಸ್ಟ್ 2019 ರ ನಿರ್ಧಾರವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆ : ಅಮೆರಿಕದಲ್ಲಿನ ಹಿಂದೂ ಸಮುದಾಯದಿಂದ ಕಾರು ರ‍್ಯಾಲಿ

ಬ್ರಹ್ಮಾಂದ್ ಕಿ ಕೋಯಿ ಭಿ ತಾಕತ್ ಅಬ್ ಆರ್ಟಿಕಲ್ 370 ಕಿ ವಾಪ್ಸಿ ನಹಿಂ ಕರ ಶಕ್ತಿ, ಲಿಹಾಜ ಸಕಾರಾತ್ಮತ್ ಕಾರ್ಯ ಮೈನ್ ಲಗೇನ್ (ವಿಶ್ವದಲ್ಲಿ ಯಾವುದೇ ಶಕ್ತಿಯು ಈಗ ಆರ್ಟಿಕಲ್ 370 ಅನ್ನು ಹಿಂತಿರುಗಿಸಲು ಸಾಧ್ಯವಿಲ್ಲ, ಆದ್ದರಿಂದ ಸಕಾರಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಿ) ಎಂದು ಪ್ರಧಾನಿ ತಿಳಿಸಿದ್ದಾರೆ.

ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ರಾಜಸ್ಥಾನದ ಗೆಲುವು ಮುಂಬರುವ ಲೋಕಸಭೆ ಚುನಾವಣೆಗೆ ಪ್ರಮುಖ ಸಂದೇಶ ಎಂದರಲ್ಲದೇ, ಜನರ ಹೃದಯವನ್ನು ಗೆಲ್ಲುವುದು ಚುನಾವಣಾ ಸ್ಥಾನಗಳನ್ನು ಎಣಿಕೆ ಮಾಡುವುದಕ್ಕಿಂತ ಹೆಚ್ಚಿನದು. ಇದಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

ಯಾವುದೇ ಕ್ಷೇತ್ರದಲ್ಲಿ ಹೆಸರು ದೊಡ್ಡದಾದರೆ, ಯಾರಾದರೂ ತಮ್ಮದೇ ಆದ ಬ್ರ್ಯಾಂಡಿಂಗ್ ಮಾಡಿದರೆ, ಉಳಿದ ಜನರು ಎಷ್ಟೇ ಪ್ರತಿಭಾವಂತರಾಗಿದ್ದರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಗಮನ ಸೆಳೆಯುವುದಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಈ ಕಾರಣದಿಂದಾಗಿ, ಕೆಲವೊಮ್ಮೆ ಕೆಲವರು ಹೊಸದಾಗಿ ಕಾಣಿಸಿಕೊಳ್ಳುತ್ತಾರೆ. ಅದೇನೆಂದರೆ ಅವು ಹೊಸಬರಲ್ಲ ಎಂಬುದು ಸತ್ಯ. ಅವರಿಗೆ ಅವರದೇ ಆದ ದೀರ್ಘ ತಪಸ್ಸು ಮತ್ತು ಅನುಭವವಿದೆ ಎಂದರು.

ಇನ್ನು ಜನವರಿ 22ರಂದು ನಡೆಯಲಿರುವ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ದಿನ ತಮಗೆ ವಿಶೇಷವಾದ ದಿನ. ಭಾರತದ 140 ಕೋಟಿ ಹೃದಯಗಳ ಸಂತೋಷ ಮತ್ತು ನೆಮ್ಮದಿಗೆ ಇದೊಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಸಂಸತ್ತಿಗೆ ನುಗ್ಗಿದವರ ಮೊಬೈಲ್ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಪತ್ತೆ

370ನೇ ವಿಧಿಯನ್ನು ರದ್ದುಗೊಳಿಸುವ ರಾಷ್ಟ್ರಪತಿಗಳ ಅಧಿಕಾರವನ್ನು ಎತ್ತಿಹಿಡಿಯುವ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆಯಾಗಿ, ಸೋಮವಾರದ ಮೊದಲು ಪ್ರಧಾನಿ ಮೋದಿ ಈ ಕ್ರಮವನ್ನು ಐತಿಹಾಸಿಕ ಎಂದು ಕರೆದಿದ್ದರು. ಇದು ಕೇವಲ ಕಾನೂನು ತೀರ್ಪು ಅಲ್ಲ, ಆದರೆ ಭರವಸೆಯ ದಾರಿದೀಪ ಮತ್ತು ಸಾಕ್ಷಿಯಾಗಿದೆ. ಬಲಿಷ್ಠ ಮತ್ತು ಹೆಚ್ಚು ಅಖಂಡ ಭಾರತವನ್ನು ನಿರ್ಮಿಸುವ ಸಾಮೂಹಿಕ ಸಂಕಲ್ಪಕ್ಕೆ ದಾರಿ ಆಶಾವಾದವನ್ನು ವ್ಯಕ್ತಪಡಿಸಿದ್ದರು.

RELATED ARTICLES

Latest News