Saturday, May 4, 2024
Homeರಾಷ್ಟ್ರೀಯಪ್ರಧಾನಿ ಕಚೇರಿಯ ಅಧಿಕಾರಿ ಎಂದು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ಪ್ರಧಾನಿ ಕಚೇರಿಯ ಅಧಿಕಾರಿ ಎಂದು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ನವದೆಹಲಿ,ಡಿ.17- ನಾನು ಸೇನಾ ವೈದ್ಯ, ನರಶಸ್ತ್ರಚಿಕಿತ್ಸಕ, ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದೆಲ್ಲ ಸುಳ್ಳು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಬಂಧಿಸಿದೆ. ಆರೋಪಿಯನ್ನು ಸೈಯದ್ ಇಶಾನ್(37) ಬುಖಾರಿ ಎಂದು ಗುರುತಿಸಲಾಗಿದೆ. ಈತನನ್ನು ಇಶಾನ್ ಬುಖಾರಿ ಮತ್ತು ಡಾ ಇಶಾನ್ ಬುಖಾರಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಕಾಶ್ಮೀರದ ಕುಪ್ವಾರದವನಾದ ಈತನನ್ನು ಒಡಿಶಾ ಎಸ್‍ಟಿಎಫ್ ಒಡಿಶಾದ ಜೈಪುರ ಜಿಲ್ಲೆಯ ನ್ಯೂಲ್‍ಪುರ ಗ್ರಾಮದಲ್ಲಿ ಬಂಧಿಸಲಾಗಿದೆ.

ಈತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಕಾಶ್ಮೀರವಲ್ಲದೆ ದೇಶದ ಇತರೆ ರಾಜ್ಯಗಳಲ್ಲಿ 6-7 ಮದುವೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದ ಹೆಣ್ಣುಮಕ್ಕಳು ಈತ ಮದುವೆಯಾಗಿದ್ದ. ದಾಳಿಯ ಸಮಯದಲ್ಲಿ 100ಕ್ಕೂ ಹೆಚ್ಚು ಗಂಭೀರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾಗಿ ಪೆಪೊಲೀಸರು ತಿಳಿಸಿದ್ದಾರೆ.

ಹಲವಾರು ನಕಲಿ ಗುರುತುಗಳನ್ನು ಹೊಂದಿರುವ ಈತ ಪಾಕಿಸ್ತಾನದ ಹಲವಾರು ಜನರೊಂದಿಗೆ ಮತ್ತು ಕೇರಳದ ಕೆಲವು ಅನುಮಾನಾಸ್ಪದ ಅಂಶಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎಸ್‍ಟಿಎಫ್ ಇನ್ಸ್‍ಪೆಕ್ಟರ್ ಜನರಲ್ ಜೆ.ಎನ್.ಪಂಕಜ್ ತಿಳಿಸಿದ್ದಾರೆ.

ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ಕಿಚ್ಚ ಸುದೀಪ್ ಸಾಥ್

ಅಮೆರಿಕದ ಕಾರ್ನೆಲ್ ಯೂನಿವರ್ಸಿಟಿ, ಕೆನಡಾದ ಹೆಲ್ತ್ ಸರ್ವೀಸಸ್ ಇನ್‍ಸ್ಟಿಟ್ಯೂಟ್, ತಮಿಳುನಾಡಿನ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹೆಸರಿನಲ್ಲಿ ಪಡೆದಿರುವ ನಕಲಿ ವೈದ್ಯಕೀಯ ಪದವಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವಾರು ಬಾಂಡ್‍ಗಳು, ಅಫಿಡವಿಟ್‍ಗಳು, ಎಟಿಎಂ ಕಾರ್ಡ್‍ಗಳು, ಗುರುತಿನ ಚೀಟಿಗಳು, ಖಾಲಿ ಚೆಕ್‍ಗಳು ಮತ್ತು ಆಧಾರ್ ಕಾರ್ಡ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಪದವಿಗಳು, ಅಫಿಡವಿಟ್‍ಗಳು, ಬಾಂಡ್‍ಗಳು, ಎಟಿಎಂ ಕಾರ್ಡ್‍ಗಳು, ಖಾಲಿ ಚೆಕ್‍ಗಳು, ಆಧಾರ್ ಕಾರ್ಡ್‍ಗಳು ಮತ್ತು ವಿಸಿಟಿಂಗ್ ಕಾರ್ಡ್‍ಗಳನ್ನು ಇಟ್ಟುಕೊಂಡು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದ. ಎಸ್‍ಟಿಎಫ್ ತಂಡಕ್ಕೆ ದೊರೆತ ಸುಳಿವು ಆಧರಿಸಿ ಪೆಪೊಲೀಸರು ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ದಾಖಲೆಗಳು ಮತ್ತು ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News