Thursday, February 22, 2024
Homeರಾಜ್ಯಸಿಲಿಂಡರ್ ಸ್ಫೋಟ : ಒಂದೇ ಕುಟುಂಬದ 7 ಮಂದಿಗೆ ಗಾಯ

ಸಿಲಿಂಡರ್ ಸ್ಫೋಟ : ಒಂದೇ ಕುಟುಂಬದ 7 ಮಂದಿಗೆ ಗಾಯ

ಬೆಳಗಾವಿ, ಡಿ.17- ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಹಸುಗೂಸು ಸೇರಿದಂತೆ ಒಂದೆ ಕುಟುಂಬದ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ರಾತ್ರಿ ನಡೆದಿದೆ.ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ದೀಪಾ( 42), ಸೋಮನಗೌಡ (44), ನವೀನ(14), ವಿದ್ಯಾ(13) ಹಾಗೂ ಒಂಭತ್ತು ತಿಂಗಳ ಬಸವನಗೌಡ ನಿರ್ವಾಣಿ ಗಾಯಗೊಂಡ ಕುಟುಂಬ ಸದಸ್ಯರು.

ಕಳೆದ ರಾತ್ರಿ ಮನೆಯವರೆಲ್ಲ ಊಟ ಮಾಡಿ ಮಲಗಿದ್ದು, ಮಧ್ಯರಾತ್ರಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ವಾಸನೆಯಿಂದ ಎಚ್ಚರಗೊಂಡ ಕುಟುಂಬ ಸದಸ್ಯರೊಬ್ಬರು ಮೊಬೈಲ್ ಟಾರ್ಚ್ ಆನ್ ಮಾಡಿ ಅಡುಗೆ ಮನೆಗೆ ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ

ಸ್ಫೋಟದ ರಭಸಕ್ಕೆ ಮನೆಯ ಹೆಂಚುಗಳು ಹಾರಿ ಹೋಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದಿಂದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

Latest News