ಪಾರಿವಾಳದ ಮೂಲಕ ಬೇಹುಗಾರಿಕೆ..!

ಭುವನೇಶ್ವರ್,ಮಾ.9-ಡ್ರೋನ್ ಆಯ್ತು ಇದೀಗ ಬೇಹುಗಾರಿಕೆಗಾಗಿ ಪರಿವಾಳ ಬಳಸಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಿಂದ ಕ್ಯಾಮೆರಾ ಮತ್ತು ಮೈಕ್ರೋಚಿಪ್‍ನಂತೆ ಕಾಣುವ ಸಾಧನಗಳನ್ನು ಅಳವಡಿಸಲಾಗಿರುವ ಪಾರಿವಾಳವನ್ನು ಹಿಡಿಯಲಾಗಿದ್ದು, ಪಕ್ಷಿಯನ್ನು ಬೇಹುಗಾರಿಕೆಗೆ ಬಳಸಲಾಗುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ದೋಣಿಯಲ್ಲಿ ಪಾರಿವಾಳದ ಕಾಲಿಗೆ ಯಾವುದೋ ವಸ್ತು ಕಟ್ಟಿರುವುದನ್ನು ಗಮನಿಸಿದ ಮೀನುಗಾರರು ಪಕ್ಷಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್‌ಗೆ ಸಾಕ್ಷಿಯಾದ ಮೋದಿ-ಅಲ್ಬನಿಸ್ ಪಾರಿವಾಳದ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು […]
ಒಡಿಸ್ಸಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಅನುಮಾನಾಸ್ಪದ ಸಾವು

ಪರದೀಪ್,ಜ.3- ಒಡಿಸ್ಸಾದಲ್ಲಿ ಮತ್ತೊಬ್ಬ ರಷ್ಯನ್ ಪ್ರಜೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕಳೆದ 15 ದಿನಗಳಲ್ಲಿ ಸಾವನ್ನಪ್ಪಿದ ವಿದೇಶಿ ಪ್ರಜೆಗಳ ಸಂಖ್ಯೆ ಮೂರಕ್ಕೇರಿದೆ. ಒಡಿಸಾದ ಜಗತ್‍ಸಿಂಗ್‍ಪುರ್ ಜಿಲ್ಲೆಯ ಪರದೀಪ್ ಬಂದರಿನಲ್ಲಿನ ಹಡಗಿನಲ್ಲಿ ರಷ್ಯಾದ ಮಿಲ್ಯಾಕೋವ್ ಸೆರ್ಗೆ (51) ಮೃತಪಟ್ಟಿದ್ದಾರೆ. ಎಂ.ಡಿ.ಅಲ್ಡಾನಹ್ ಎಂಬ ಹೆಸರಿನ ಹಡಗಿನಲ್ಲಿ ಮಿಲ್ಯಾಕೋವ್ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಡಗು ಬಾಂಗ್ಲಾದೇಶದ ಚಿತ್ತಾಂಗೊಂಗ್ ಬಂದರಿನಿಂದ ಪರದೀಪ್ ಮಾರ್ಗವಾಗಿ ಮುಂಬೈ ಕಡೆಗೆ ಪ್ರಯಾಣಿಸುತ್ತಿತ್ತು. ಹಡಗಿನ ತಮ್ಮ ಚೆಂಬರ್‍ನಲ್ಲಿ ಮಿಲ್ಯಾಕೋವ್ ಮುಂಜಾನೆ 4.30ರ ಸುಮಾರಿನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. […]
ತುಂಡಾಗಿದ್ದ ಕೈಯನ್ನು ಮರು ಜೋಡಿಸಿದ AIIMS ವೈದ್ಯರು

ಭುವನೇಶ್ವರ್, ಡಿ.23- ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕೈ ಅನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡುವ ಮೂಲಕ ಭುವನೇಶ್ವರದ ಎಐಐಎಂಎಸ್‍ನ ವೈದ್ಯರು, ಯುವತಿಯೊಬ್ಬಳಿಗೆ ಕಳೆದು ಹೋಗುತ್ತಿದ್ದ ಜೀವನವನ್ನು ಧಕ್ಕಿಸಿಕೊಟ್ಟಿದ್ದಾರೆ. ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ 25 ವರ್ಷದ ಯುವತಿ ಬರ್ಷಾದಾಸ್ ಡಿಸೆಂಬರ್ 9ರಂದು ಜಮೀನಿನಲ್ಲಿ ಕೆಲಸ ಮಾಡುವಾಗ ಆಕೆಯ ದುಪ್ಪಟ್ಟ ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿತ್ತು. ಕ್ಷಣಾರ್ಧದಲ್ಲಿ ಯಂತ್ರದ ಸೆಳೆತಕ್ಕೆ ಸಿಲುಕಿದ ಬರ್ಷಾಳ ಎಡಗೈ ಕೂಡಕತ್ತರಿಸಿ ಹೋಗಿತ್ತು. ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ […]
ಒಡಿಶಾದಲ್ಲಿ ಹಾಕಿ ವಿಶ್ವಕಪ್ : ದೇಶದ ಎಲ್ಲಾ ಸಿಎಂಗಳಿಗೆ ಆಹ್ವಾನ

ಭುವನೇಶ್ವರ್, ಡಿ .23 – ಮುಂದಿನ ಜನವರಿ 13-29 ರವರೆಗೆ ಒಡಿಶಾದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‍ಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು ಎಂದು ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಕ್ರೀಡಾ ಸಂಭ್ರಮಕ್ಕೂ ಮುನ್ನ ಇಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಆಡಳಿತಾರೂಢ ಬಿಜೆಡಿ, ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಸಮಾಜವಾದಿ ಪಕ್ಷ, ಆರ್‍ಜೆಡಿ ಮತ್ತು ಎಎಪಿಯ ಪ್ರತಿನಿಧಿಗಳು ಭಾಗವಹಿಸಿ ಚರ್ಚೆ ವೇಳೆ ಸಿಎಂ ಪಟ್ನಾಯಕ್ ಈ ಘೋಷಣೆ ಮಾಡಿದರು. ಬೆಂಗಳೂರು ವಿವಿ ಆವರಣದಲ್ಲಿ […]
10.50 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಒಡಿಶಾ ಸರ್ಕಾರ ಸಹಿ

ಭುವನೇಶ್ವರ್,ಡಿ.4- ಒಡಿಶಾ ಸರ್ಕಾರ ಇತ್ತೀಚೆಗೆ ನಡೆಸಿದ ಹೂಡಿಕೆದಾರರ ಸಮಾವೇಶದಲ್ಲಿ 10.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಸಹಿ ಹಾಕಲಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಕೋವಿಡೋತ್ತರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೆಂಗಿಂತಲೂ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಗಳ ಮೂಲಕ ಬಂಡವಾಲ ಹೂಡಿಕೆಯ ಪ್ರಸ್ತಾವನೆಗಳು ಚರ್ಚೆಯಾಗಿವೆ ಎಂದು ಅವರು ತಿಳಿಸಿದರು. ಹೂಡಿಕೆದಾರರ ಸಮಾವೇಶದ ಪಾಲುದಾರಿಕೆ ದೇಶಗಳಾಗಿದ್ದ ಜರ್ಮನಿ, ಜಪಾನ್, ನಾರ್ವೆಗೆ ಕೃತಜ್ಞತೆ ಸಲ್ಲಿಸಿದ ಅವರು, ಬಾಧ್ಯಸ್ಥ ಕಂಪನಿಗಳು ಶೀಘ್ರವಾಗಿಯೇ ಉದ್ಯಮಗಳನ್ನು ಆರಂಭಿಸುವ […]
ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

ಜಾಜ್‍ಪುರ (ಒಡಿಶಾ), ನ.21-ಗೂಡ್ಸ್ ರೈಲು ಹಳಿತಪ್ಪಿ ಕನಿಷ್ಠ ಇಬ್ಬರು ಸಾವನ್ನಪ್ಪಿ ,ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಘಟನೆ ಇಂದು ಬೆಳಿಗ್ಗೆ ಜಾಜ್‍ಪುರ ಜಿಲ್ಲೆಯ ಕೊರೆ ರೈಲು ನಿಲ್ದಾಣದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್‍ಫಾರ್ಮ್‍ನಲ್ಲಿ ಕಾಯುತ್ತಿದ್ದಾಗ ಡೊಂಗೋ ಆಪೋಸಿಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಎಂಟು ವ್ಯಾಗನ್‍ಗಳು ಹಳಿ ತಪ್ಪಿ ಪ್ಲಾಟ್‍ಫಾರ್ಮ್ ಮತ್ತು ವೇಟಿಂಗ್ ಹಾಲ್‍ಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಸ್ಥಳದಲ್ಲೇ […]
ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಸಾವು, 21 ಮಂದಿಗೆ ಗಾಯ

ಭುವನೇಶ್ವರ್, ಅ. 10 – ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಿಡಿಲು ಬಡಿದು ಆಟಗಾರ ಸೇರಿ ಇಬ್ಬರು ಸಾವನ್ನಪ್ಪಿ ಸುಮಾರು 21ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ನುಗಾಂವ್ ಬ್ಲಾಕನ್ ಬನೆಲಾಟಾದಲ್ಲಿ ನಡೆದಿದೆ. ಮೃತರಲ್ಲಿ ಒಬ್ಬರು ಫುಟ್ಬಾಲ್ ಆಟಗಾರರಾಗಿದ್ದರೆ, ಗಾಯಗೊಂಡವರಲ್ಲಿ ಹೆಚ್ಚಿನವರು ಪ್ರೇಕ್ಷಕರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ನುಗಾಂವ್‍ನಲ್ಲಿ ಸ್ಥಳೀಯ ಕ್ಲಬ್‍ಗಳ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತುಆಕಾಶದಲ್ಲಿ ಮೋಡ ಕವಿದಿದ್ದರೂ ಮಳೆ ಬರುತ್ತಿರಲಿಲ್ಲ ದಿಢೀರನೆ […]