Thursday, December 5, 2024
Homeಕ್ರೀಡಾ ಸುದ್ದಿ | Sportsಏಕಲವ್ಯ ಪ್ರಶಸ್ತಿಗೆ ಪಾತ್ರರಾದ ಈಜುಗಾರ್ತಿ ಪ್ರತ್ಯಾಸ ರೇ..

ಏಕಲವ್ಯ ಪ್ರಶಸ್ತಿಗೆ ಪಾತ್ರರಾದ ಈಜುಗಾರ್ತಿ ಪ್ರತ್ಯಾಸ ರೇ..

ಭುವನೇಶ್ವರ್‌ , ನ.4 (ಪಿಟಿಐ) – ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಈಜುಗಾರ್ತಿ ಪ್ರತ್ಯಾಸ ರೇ ಅವರಿಗೆ 2024 ರ ಪ್ರತಿಷ್ಠಿತ ಏಕಲವ್ಯ ಪುರಸ್ಕಾರ ಲಭಿಸಿದೆ. ಇಂಡಿಯನ್‌ ಮೆಟಲ್ಸ್‌‍ ಪಬ್ಲಿಕ್‌ ಚಾರಿಟೇಬಲ್‌ ಟ್ರಸ್ಟ್‌, ಇಂಡಿಯನ್‌ ಮೆಟಲ್ಸ್‌‍ ಫೆರೋ ಅಲಾಯ್ಸ್‌‍ ಲಿಮಿಟೆಡ್‌ನ ಚಾರಿಟಬಲ್‌ ವಿಭಾಗವು ಇಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೇ ಅವರು ಪ್ರಶಸ್ತಿ ಪತ್ರ, ಟ್ರೋಫಿ ಮತ್ತು 7 ಲಕ್ಷ ರೂ ನಗದು ಬಹುಮಾನವನ್ನು ಪಡೆದರು.

ಈ ಸಂದರ್ಭದಲ್ಲಿ ಸ್ಪ್ರಿಂಟರ್‌ ದೊಂಡಪತಿ ಮತ್ಯಂ ಜಯರಾಮ್‌ ಮತ್ತು ಬ್ಯಾಡಿಂಟನ್‌ ಆಟಗಾರ್ತಿ ತನ್ವಿ ಪಾತ್ರಿ ಅವರ ಸಾಧನೆಗಾಗಿ ತಲಾ 1.5 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಕೇಂದ್ರಪಾರ ಸಂಸದ ಹಾಗೂ ಏಕಲಬ್ಯ ಪುರಸ್ಕಾರ ಸಮಿತಿ 2024ರ ಅಧ್ಯಕ್ಷ ಬೈಜಯಂತ್‌ ಪಾಂಡಾ ಅವರ ಸಮುಖದಲ್ಲಿ ಉಪಮುಖ್ಯಮಂತ್ರಿ ಕನಕ ವರ್ಧನ್‌ ಸಿಂಗ್‌ ದೇವ್‌ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 1993 ರಲ್ಲಿ ಸ್ಥಾಪಿಸಿದ ಏಕಲಬ್ಯ ಪುರಸ್ಕಾರ್‌ ಅನ್ನು ಒಡಿಶಾದ ಯುವ ಕ್ರೀಡಾ ಪಟುಗಳಿಗೆ ಹಿಂದಿನ ಎರಡು ವರ್ಷಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ ವಾರ್ಷಿಕವಾಗಿ ನೀಡಲಾಗುತ್ತದೆ.

RELATED ARTICLES

Latest News