ವಿನಾ ಡೆಲ್ ಮಾರ್, ಫೆ. 7: ಹೆಲಿಕಾಪ್ಟರ್ ಅಪಘಾತದಲ್ಲಿ ಚಿಲಿ ದೇಶದ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ(74) ಅವರು ಸಾವನ್ನಪ್ಪದ್ದಾರೆ. ಎರಡು ಬಾರಿ ಅಧ್ಯಕ್ಷರಾಗಿ ದೇಶ ಮುನ್ನಡೆಸಿದ್ದ ಸಾಮಾಜಿಕ ಕ್ರಾಂತಿಯ ನಾಯಕನೆಂದೇ ಗುರುತಿಸಿಕೊಂಡಿದ್ದರು 2010 ರಿಂದ 2014 ರವರೆಗೆ ಮತ್ತು ಮತ್ತೆ 2018 ರಿಂದ 2022 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಿನೆರಾ ಅವರು 8.8 ತೀವ್ರತೆಯ ಭೂಕಂಪ ಮತ್ತು ಸುನಾಮಿಯ ಬಿಕ್ಕಟ್ಟಿನ ಕ್ಷಣಗಳಲ್ಲಿ ದಕ್ಷಿಣ ಅಮೆರಿಕಾದ ರಾಷ್ಟ್ರವನ್ನು ಮುನ್ನಡೆಸಿದರು.
ಚಿಲಿಯ ಆಂತರಿಕ ಸಚಿವ ಕೆರೊಲಿನಾ ತೋಹಾ ಮಾಜಿ ಅಧ್ಯಕ್ಷರ ಸಾವನ್ನು ದೃಢಪಡಿಸಿದ್ದಾರೆ. ಅಪಘಾತದ ಕಾರಣದ ಬಗ್ಗೆ ಹೆಚ್ಚಿನ ವಿವರಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗಿಲ್ಲ.2019 ರಲ್ಲಿ ದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪಿಂಚಣಿ ವ್ಯವಸ್ಥೆಗಳ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು ಪೊಲೀಸ್ ದಬ್ಬಾಳಿಕೆ ಮಿತಿ ಮೀರಿತ್ತು ಕೂಡ ಕಳವಳ ವ್ಯಕ್ತಪಡಿಸಿತ್ತು ಇದರಿಂದ ಅವರ ವರ್ಚಸ್ಸು ಕುಸಿಯಿತು.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-02-2024)
ಚಿಲಿಯ ಕೇಂದ್ರ ಪ್ರದೇಶದಲ್ಲಿ ಸಂಭವಿಸ ಭಾರೀ ಕಾಡ್ಗಿಚ್ಚುಗಳಿಂದ ಜನರು ಚೇತರಿಸಿಕೊಳ್ಳುತ್ತಿರುವಾಗ ಪಿನೆರಾ ಅವರ ಸಾವು ಸಂಭವಿಸಿದೆ.ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಸೇರಿದಂತೆ ಲ್ಯಾಟಿನ್ ಅಮೆರಿಕದಾದ್ಯಂತ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. 1970 ರ ದಶಕದಿಂದ 1990 ರ ದಶಕದಲ್ಲಿ ಉದ್ಯಮಿಯಾಗಿ, ಅವರು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡಿದರು.
ಅವರು ಪ್ರಮುಖ ವಿಮಾನಯಾನ ಸಂಸ್ಥೆಗಳು, ದೂರಸಂಪರ್ಕ, ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದರು. ಅವರು ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ಕಂಪನಿಗಳಲ್ಲಿ ಒಂದನ್ನು ಸಹ ರಚಿಸಿದರು. 2009 ರಲ್ಲಿ, ಅವರು ತಮ್ಮ ವ್ಯವಹಾರಗಳ ನಿರ್ವಹಣೆಯನ್ನು ಇತರರಿಗೆ ಹಸ್ತಾಂತರಿಸಿದರು.