Friday, September 20, 2024
Homeಅಂತಾರಾಷ್ಟ್ರೀಯ | Internationalಜನಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಮುಂದಾದ ಚೀನಾ

ಜನಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಮುಂದಾದ ಚೀನಾ

China to raise retirement age for first time since 1950s

ಬೀಜಿಂಗ್‌,ಸೆ.14- ಚೀನಾದಲ್ಲಿ ಜನಸಂಖ್ಯೆ ಜೊತೆ ಉದ್ಯೋಗಿಗಳ ಸಂಖ್ಯೆಯು ಇಳಿಕೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಚೀನಾ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ. ಪುರುಷರ ನಿವೃತ್ತಿ ವಯಸ್ಸನ್ನು 63ಕ್ಕೆ ಏರಿಸಿದರೆ, ಮಹಿಳೆಯರ ನಿವೃತ್ತಿ ವಯಸ್ಸನ್ನು ಅವರ ವೃತ್ತಿಗೆ ಅನುಗುಣವಾಗಿ 55 ಮತ್ತು 58ಕ್ಕೆ ಏರಿಸಲಾಗಿದೆ. ಮುಂದಿನ ವರ್ಷದ ಜನವರಿಯಿಂದ ಹೋಸ ನೀತಿ ಜಾರಿಯಾಗಲಿದೆ.

1950ರಿಂದ ಚೀನಾ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದು ಇದೇ ಮೊದಲು. ಪ್ರಸ್ತುತ ನಿವೃತ್ತಿ ವಯಸ್ಸು ಪುರುಷರಿಗೆ 60 ಮತ್ತು ಮಹಿಳೆಯರಿಗೆ ವೃತ್ತಿಗೆ ಅನುಗುಣವಾಗಿ 60(ಬ್ಲೂ ಕಾಲರ್‌) ಮತ್ತು 55(ವೈಟ್‌ಕಾಲರ್‌) ಆಗಿದೆ.

ಈ ನಿರ್ಧಾರ ಯಾಕೆ?:
ಒಂದು ಕಡೆ ಜನಸಂಕ್ಯೆ ಇಳಿಕೆಯಾಗುತ್ತಿದೆ. ಇನ್ನೊಂದು ಕಡೆ ಹಿರಿಯ ನಾಗರಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಹಿಂದೆ ಜಾರಿ ತಂದ ಒಂದು ಕುಟುಂಬಕ್ಕೆ ಒಂದೇ ಮಗು ನೀತಿಯಿಂದಾಗಿ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ಈಗ ನಿವೃತ್ತಿ ವಯಸ್ಸು ಸಮೀಪಿಸುವವರ ಸಂಖ್ಯೆ ಹೆಚ್ಚಾಗಿದ್ದು, ಪಿಂಚಣಿ ನಿಧಿ ನೀಡಲು ಕಷ್ಟವಾಗುತ್ತಿದೆ.

ಅನೇಕ ಚೀನಿ ಪ್ರಾಂತ್ಯಗಳು ಈಗಾಗಲೇ ದೊಡ್ಡ ಆರ್ಥಿಕ ಸಮಸ್ಯೆಯಲ್ಲಿ ಸಿಲುಕೊಂಡಿದೆ. ಈಗ ನಿವೃತ್ತಿ ವಯಸ್ಸು ಏರಿಕೆ ಮಾಡಿದ್ದರಿಂದ ಈ ಪ್ರಾಂತ್ಯಗಳಿಗೆ ಸ್ವಲ್ಪ ರಿಲೀಫ್‌ ಸಿಗಲಿದೆ.2035ರ ವೇಳೆಗೆ ಚೀನಾದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 2035ರ ವೇಳೆ 28 ಕೋಟೆಯಿಂದ 40 ಕೋಟಿ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಚೀನಾದ ಸಂಖ್ಯೆಇದು ಬ್ರಿಟನ್‌ ಮತ್ತು ಅಮೆರಿಕದ ಒಟ್ಟು ಜನಸಂಖ್ಯೆಗೆ ಸಮವಾಗಿರುತ್ತದೆ. ಒಂದು ವೇಳೆ ಸುಧಾರಣೆ ಕೈಗೊಳ್ಳದೇ ಇದ್ದರೆ ಸರ್ಕಾರದ ಬಜೆಟ್‌ನ ಬಹುಪಾಲು ಹಣ ಪಿಂಚಣಿವೊಂದಕ್ಕೆ ಹೋಗುವ ಕಾರಣ ಸರ್ಕಾರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ.
ವಿಶ್ವದಲ್ಲೇ ಸದ್ಯ ಭಾರತದ ಜನಸಂಖ್ಯೆ 142 ಕೋಟಿಗೆ ಏರಿದ್ದರೆ ಚೀನಾ ಜನಸಂಖ್ಯೆ 141 ಕೋಟಿಗೆ ಕುಸಿದಿದೆ.

RELATED ARTICLES

Latest News