ಚಿತ್ರದುರ್ಗ, ಮಾ.23- ವಾಯುವ್ಯಸಾರಿಗೆ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸರ್ವಿಸ್ ರಸ್ತೆ ವೃತ್ತದಲ್ಲಿ ಇಂದು ಸಂಭವಿಸಿದೆ.
ಯಾಸಿನ್ (22), ಅಲ್ತಾಫ್ (22) ಮೃತ ವಿದ್ಯಾರ್ಥಿಗಳು. ಮೃತರು ಕೇರಳ ಮೂಲದವರಾಗಿದ್ದು, ಚಿತ್ರದುರ್ಗದ ಎಸ್ ಜೆಎಂ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಓದುತ್ತಿದ್ದರು. ಮುಂಜಾನೆ ಸುಮಾರು 2 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದ್ದಿ ಇದರಲ್ಲಿ ನಬೀಲ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಜಿಎಂ ಎಂಜಿನಿಯರಿಂಗ್ ಕಾಲೇಜಿನ ಹಿಂಬಾಗದಲ್ಲಿರುವ ಪಿಜಿಯಲ್ಲಿ ಇವೆ ವಾಸಿಸುತ್ತಿದ್ದರು.
ಹೊಂಡಾ 350 ಬೈಕ್‌ನಲ್ಲಿ ಮೂವರು ರಾತ್ರಿ ಚಿತ್ರದುರ್ಗದಿಂದ ಚಳಕರೆ ಕಡೆಗೆ ಹೋಗಿದ್ದರು. ವಾಪಸ್ ಬರುವಾಗ ಜಂಗ್ಟನ್ ಬಳಿ ಬಸ್ ತಿರುವು ಪಡೆಯುವಾಗ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದುರ್ಗ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.