Thursday, August 14, 2025
Homeಜಿಲ್ಲಾ ಸುದ್ದಿಗಳು | District Newsಚಿತ್ರದುರ್ಗ | Chitradurgaಚಿತ್ರದುರ್ಗ : ಆಟೋ ಚಾಲಕ ರವಿಕುಮಾರ್‌ ಹತ್ಯೆ ಪ್ರಕರಣದಲ್ಲಿ ಪತ್ನಿ, ಮಗ ಹಾಗೂ ಪ್ರಿಯಕರ ಅರೆಸ್ಟ್

ಚಿತ್ರದುರ್ಗ : ಆಟೋ ಚಾಲಕ ರವಿಕುಮಾರ್‌ ಹತ್ಯೆ ಪ್ರಕರಣದಲ್ಲಿ ಪತ್ನಿ, ಮಗ ಹಾಗೂ ಪ್ರಿಯಕರ ಅರೆಸ್ಟ್

Chitradurga: Wife, son and lover arrested in the murder case of tow truck driver Ravikuma

ಚಿತ್ರದುರ್ಗ,ಆ.14-ಇಲ್ಲಿ ನಡೆದಿದ್ದ ಆಟೋ ಚಾಲಕ ರವಿಕುಮಾರ್‌ ಹತ್ಯೆ ಪ್ರಕರಣವನ್ನು ಭೇಧಿಸಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಪತ್ನಿ,ಮಗ ಹಾಗು ಪ್ರಿಯಕರನನ್ನು ಬಂಧಿಸಿದ್ದಾರೆ.ಸುನೀತಾ, ಪುತ್ರ ವಿಷ್ಣು ಹಾಗು ಪ್ರಿಯಕರ ಗಣೇಶ್‌ ಬಂಧಿತ ಅರೋಪಿ.

ಘಟನೆ ವಿವರ : ತಾಲೂಕಿನ ಈರಜ್ಜನಹಟ್ಟಿ ಗ್ರಾಮದ ಬಳಿ ಕಳೆದ ಜುಲೈ 20ರಂದು ಆಟೋ ಚಾಲಕ ರವಿಕುಮಾರ್‌ (51) ಕೊಲೆ ನಡೆದಿತ್ತು.ಶವವನ್ನು ಮೂಟೆ ಕಟ್ಟಿ ಬಿಸಾಡಲಾಗಿತ್ತು.
ನಂತರ ಶವಪತ್ತೆಯಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಗುರುತು ಪತ್ತೆಯಾದ ನಂತರ ಪೊಲೀಸರ ವಿಚಾರಣೆ ವೇಳೆ ಕೊಲೆಯಾ ರವಿಕುಮಾರ್‌ ಪತ್ನಿ ಸುನಿತಾ, ತನ್ನ ಮಗಳ ಗಂಡನ ಮೇಲೆ ಆರೋಪ ಹೊರಿಸಿದ್ದಳು. ಆದರೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸೆ ಬೆಂಗಳೂರು ಮೂಲದವನಾದ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಗಣೇಶನ ಪಾತ್ರದ ಬಗ್ಗೆ ಸುಳಿವು ಸಿಕ್ಕಿತ್ತು.

ಆತ ಕೆಲ ತಿಂಗಳಿಂದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಸುನೀತಾ ಜೊತೆ ಅನೈತಿಕ ಸಂಬಂಧ ಹೊಂದಿರುವದು ಗೊತ್ತಾಗಿತ್ತು.ಇವರ ಕಳ್ಳಾಟಕ್ಕೆ ಅಡ್ಡಿಯಾಗಿದ್ದ ರವಿಕುಮಾರ್‌ ಕೊಲೆಗೆ ಸಂಚು ರೂಪಿಸಿದ್ದ ಕೊಲೆ ಮಾಡಿರುವ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ. ಮೃತ ರವಿಕುಮಾರ್‌ ಪತ್ನಿ ಸುನೀತಾ, ಪುತ್ರ ವಿಷ್ಣು ಹಾಗು ಆಕೆಯ ಪ್ರಿಯಕರ ಗಣೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಲ್ಲಿ ಮಗ ವಿಷ್ಣು ಕೂಡ ಸಹಕರಿಸಿರುವುದು ತನಿಖೆ ಯಿಂದ ತಿಳಿದು ಬಂದಿದ್ದು ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣದ ಮೋಹಕ್ಕೆ ಇಡೀ ಕುಟುಂಬ ನಾಶವಾಗಿದೆ.

RELATED ARTICLES

Latest News