ವಿಭಿನ್ನ ಕಥಾಹಂದರ ಹೊಂದಿ, ಪ್ರೇಕ್ಷಕರನ್ನು ಸಾಕಷ್ಟು ರೀತಿಯಲ್ಲಿ ಸೆಳೆಯುತ್ತಿರುವ ಛೂಮಂತರ್ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೊಂಡು ಒಂದು ದಿನಕ್ಕೆ ಅಥವಾ ಎರಡು ದಿನಕ್ಕೆ ಎತ್ತುಂಗಡಿಯಾಗುತ್ತಿರುವ ಸಿನಿಮಾಗಳ ನಡುವೆ ಆಗಾಗ ಛೂಮಂತರ್ ನಂತಹ ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಭರವಸೆಯನ್ನು ಮೂಡಿಸುತ್ತಿರುತ್ತವೆ.
ಅದರಲ್ಲೂ ಸಿನಿಮಾ ತಂಡಗಳು ಸಕ್ಸಸ್ ಮೀಟ್ ಮಾಡುತ್ತಿವೆ ಎಂದರೆ ಸಿನಿಮಾ ತಂತ್ರಜ್ಞರಿಗೆ ಮತ್ತಷ್ಟು ಪ್ರೇರಣೆ ನೀಡುತ್ತವೆ. ಈಗ ಇಂತಹದ್ದೇ ಖುಷಿಯಲ್ಲಿರುವ ನಿರ್ಮಾಪಕ ತರುಣ್ ಶಿವಪ್ಪ ತನ್ನ ಸಿನಿಮಾದ ಗೆಲುವಿನ ಖುಷಿಯನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ನಿರ್ಮಾಪಕ ಯೋಗಿ ದ್ವಾರಕೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಾಕಷ್ಟು ಅಡೆತಡೆಗಳ ನಡುವೆ ಬಿಡುಗಡೆಯಾದ ನಮ ಚಿತ್ರಕ್ಕೆ ಜನರು ನೀಡುತ್ತಿರುವ ಬೆಂಬಲಕ್ಕೆ ಮನತುಂಬಿ ಬಂದಿದೆ. ಈ ಯಶಸ್ಸಿಗೆ ಕಾರಣರಾದ ಚಿತ್ರತಂಡದ ಸದಸ್ಯರಿಗೆ, ಸ್ನೇಹಿತರ ಬಳಗಕ್ಕೆ ಹಾಗೂ ವಿಶೇಷವಾಗಿ ನಿರಂಜನ್ ಮತ್ತು ವೆಂಕಟೇಶ್ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ತರುಣ್ ಶಿವಪ್ಪ.
ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಆದರೆ ಧೈರ್ಯ ಮಾಡಿ ನಮ ಚಿತ್ರವನ್ನು ನಿರ್ಮಾಪಕರು ಬಿಡುಗಡೆ ಮಾಡಿದರು. ಚಿತ್ರ ಬಿಡುಗಡೆ ಅಷ್ಟು ಸುಲಭವಾಗಿರಲಿಲ್ಲ. ಅಂತು ಇಂತು ಸಾಕಷ್ಟು ಶ್ರಮಪಟ್ಟು ಬಿಡುಗಡೆ ಮಾಡಲಾಯಿತು. ಬಿಡುಗಡೆ ನಂತರ ಏನಾಗಬಹುದು ಎಂಬ ಆತಂಕವಿತ್ತು. ಉತ್ತಮ ಕಂಟೆಂಟ್ ವುಳ್ಳ ಚಿತ್ರಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಮತ್ತೊಮೆ ಸಾಬೀತಾಯಿತು. ಚಿತ್ರತಂಡದ ಸದಸ್ಯರು ನನ್ನ ಬಗ್ಗೆ ಆಡಿದ ಮಾತುಗಳಿಗೆ ಮನ ತುಂಬಿ ಬಂತು ಎಂದು ನಾಯಕ ಶರಣ್ ತಿಳಿಸಿದರು.
ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ತರುಣ್ ಶಿವಪ್ಪ ನನ್ನ ಮೇಲೆ ನಂಬಿಕೆಯಿಟ್ಟು ಚಿತ್ರ ಶುರು ಮಾಡಿದರು. ಶರಣ್ ಸೇರಿದಂತೆ ಎಲ್ಲಾ ಕಲಾವಿದರು ಕಥೆ ಮೆಚ್ಚಿಕೊಂಡು ನಟಿಸಲು ಒಪ್ಪಿಕೊಂಡರು. ಚಿತ್ರತಂಡದ ಸದಸ್ಯರು ಸಾಥ್ ನೀಡಿದರು. ಕೊನೆಗೆ ನಮ ಚಿತ್ರವನ್ನು ನಾಡಿನ ಜನರು ಒಪ್ಪಿಕೊಂಡರು. ಶುಕ್ರವಾರ ಮಧ್ಯಾಹ್ನದ ನಂತರ ನಮ ಚಿತ್ರದ ಬುಕ್ಕಿಂಗ್ ಗಣನೀಯಾಗಿ ಏರಿಕೆಯಾಯಿತು. ಅದನ್ನು ನೋಡಿ ಬಹಳ ಖುಷಿಯಾಯಿತು.
ಇದಕ್ಕೆ ಹಿರಿಯ ನಟರಾದ ವಿಷ್ಣುವರ್ಧನ್, ದ್ವಾರಕೀಶ್ ಹಾಗೂ ದೇವರ ಆಶೀರ್ವಾದವೇ ಕಾರಣ. ಕನ್ನಡ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನವನೀತ್.ಇಂದು ನನ್ನ ಹುಟ್ಟುಹಬ್ಬ. ಇದು ನನ್ನ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬ. ಏಕೆಂದರೆ ನನಗೆ ಗೆಲುವಿನ ಉಡುಗೊರೆ ಸಿಕ್ಕಿದೆ ಎಂದರು ನಟಿ ಅದಿತಿ ಪ್ರಭುದೇವ.