ಕಾರವಾರ, ನ.12– ತಮ್ಮ ಸರ್ವಿಸ್ ಪಿಸ್ತೂಲಿನಿಂದ ಗುಂಡು ಹಾರಿ ಇಲ್ಲಿನ ಕೈಗಾ ಪರಮಾಣು ಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ಬಿಹಾರ ಮೂಲಕ ಸಿಐಎಸ್ಎಫ್ ಸಿಬ್ಬಂದಿ ಅರವಿಂದ್ ಎಂದು ಗುರುತಿಸಲಾಗಿದೆ. ಸದ್ಯ ರಕ್ಷಣಾ ಸಿಬ್ಬಂದಿಯ ಆತಹತ್ಯೆಯಿಂದ ಕೈಗಾದಲ್ಲಿ ಆತಂಕ ಸೃಷ್ಠಿಯಾಗಿದೆ.ಸ್ಥಾವರದೊಳಗೆ ವಾಹನದಲ್ಲಿ ಹೋಗುವಾಗ ಗುಂಡು ಹಾರಿದೆ.
ವಯಕ್ತಿಕ ಕಾರಣದಿಂದಲೋ ಅಥವಾ ಅಧಿಕಾರಿಗಳ ಕಿರುಕುಳದಿಂದ ಆತಹತ್ಯೆ ಮಾಡಿಕೊಂಡಿದ್ದರೆಯೇ ಅಥವಾ ಮಿಸ್ ಫಯರ್ ಆಗದೆಯೇ ಎಂಬುದು ತಿಳಿದುಬಂದಿಲ್ಲ.ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸ್ಥಾವರದ ಬಳಗೆ ಅಧಿಕಾರಿಗಳಿಗೆ ಬೆಂಗಾವಲು ನೀಡುತ್ತಿದ್ದ ವಾಹನದ ಹಿಂದೆ ಅರವಿಂದ್ ಕುಳಿತ್ತಿದ್ದರು,ಏಕಾಏಕಿ ಗುಂಡಿನ ಸದ್ದು ಕೇಳಿ ವಾಹನಗಳನ್ನು ನಿಲ್ಲಿಸಿ ನೋಡಿದಾಗ ಅವರ ಎದೆಗೆ ಗುಂಡು ಹೊಕ್ಕಿ ರಕ್ತ ಚಿಮಿತ್ತು.ನಂತರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.