ಬೆಂಗಳೂರು,ಆ.29- ಬೆಂಗಳೂರಿನ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಅಸಮತೋಲನ ನಿವಾರಣೆ, ಪಶ್ಚಿಮ ಘಟ್ಟಗಳಲ್ಲಿನ ವಿಶೇಷ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ 16ನೇ ಹಣ ಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ ಸೆಸ್ ಮತ್ತು ಸರ್ಚಾರ್ಜ್ನಲ್ಲೂ ಪಾಲು ನೀಡುವಂತೆ ಪ್ರತಿಪಾ ದಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯ, ಸದಸ್ಯರಾದ ಅಜಯ್ ನಾರಾಯಣ
ಝ, ಅನೈಜಾರ್ಜ್ ಮ್ಯಾಥ್ಯೂ, ಡಾ.ಮನೋಜ್ ಪಾಂಡೆ, ಡಾ.ಸೌಮ್ಯಕಾಂತಿ ಘೋಷ್ ಅವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಸಿದ್ದರಾಮಯ್ಯ ಆರ್ಥಿಕ ಒಕ್ಕೂಟ ವ್ಯವಸ್ಥೆಯ ಸಹಭಾಗಿತ್ವವನ್ನು ಪ್ರತಿಪಾದಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಮುಂದುವರೆದ ರಾಜ್ಯಗಳು ಬೆಂಬಲ ನೀಡುವುದು ಅತ್ಯಗತ್ಯ. ಆದರೆ ಅದು ಅವರದ್ದೇ ಸ್ವಂತ ನೆಲದ ಖರ್ಚುವೆಚ್ಚಗಳಿಗೆ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ದುಬಾರಿಯಾಗಬಾರದು. ಬೃಹತ್ ಪ್ರಮಾಣದ ಸಂಪನೂಲ ಸಂಗ್ರಹವಾಗುವ ರಾಜ್ಯಗಳಲ್ಲಿ ತಮಲ್ಲೇ ಹಣಕಾಸು ಹಂಚಿಕೆಯಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಗಮನ ಕೇಂದ್ರೀಕರಿಸಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಒತ್ತು ನೀಡುತ್ತಿದೆ. ನಗರೀಕರಣದ ಸವಾಲುಗಳು ನಮ ಮುಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬೃಹತ್ ಪ್ರಮಾಣದ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ 5 ವರ್ಷಗಳಲ್ಲಿ 55,586 ಕೋಟಿ ರೂ.ಗಳ ಹೂಡಿಕೆಯ ಅಗತ್ಯವಿದ್ದು, ಇದಕ್ಕೆ ಹೊಂದಾಣಿಕೆಯ ಮೊತ್ತವಾಗಿರುವ 27,793 ಕೋಟಿ ರೂ.ಗಳನ್ನು ಕೇಂದ್ರಸರ್ಕಾರ ಅನುದಾನದ ರೂಪದಲ್ಲಿ ನೀಡಬೇಕಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 25,000 ಕೋಟಿ ರೂ. ನೀಡಬೇಕಿದ್ದು, ಇದಕ್ಕೆ ಸಮನಾಂತರವಾದ ನೆರವಿಗೆ ಹಣಕಾಸು ಆಯೋಗ ಶಿಫಾರಸ್ಸು ಮಾಡಬೇಕಿದೆ.
ಪಶ್ಚಿಮಘಟ್ಟಗಳಲ್ಲಿನ ವಿಪತ್ತು ನಿರ್ವಹಣಾ ಸಾಮರ್ಥ್ಯ ವೃದ್ಧಿ ಹಾಗೂ ಸಕಾಲಿಕ ಪರಿಹಾರ ಪುನರ್ವಸತಿ ಕ್ರಮಗಳಿಗಾಗಿ 10 ಸಾವಿರ ಕೋಟಿ ರೂ.ಗಳ ನೆರವು ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಮನಾಂತರ ಹಾಗೂ ಲಂಬಾಕೃತಿಯ ಆರ್ಥಿಕಾಭಿವೃದ್ಧಿಗೆ ಪ್ರಮುಖ ಶಿಫಾರಸ್ಸುಗಳನ್ನು ನೀಡುವ ಕುರಿತು ಸಲಹೆ ನೀಡಿರುವ ಸಿದ್ದರಾಮಯ್ಯ, ಲಂಬಾಕಾರದ ಸಂಪನೂಲ ಹಂಚಿಕೆ ಶೇ.50ರ ಪ್ರಮಾಣದಲ್ಲಿರಬೇಕು. ಸರ್ಚಾರ್ಜ್ ಮತ್ತು ಸೆಸ್ಗಳ ಗರಿಷ್ಠ ಮಿತಿ ಒಟ್ಟು ತೆರಿಗೆಯ ಶೇ.5ರ ಮಿತಿಯೊಳಗಿರಬೇಕು. ಯಾವುದಾದರೂ ಮಿತಿಯನ್ನು ಮೀರಿದರೆ ಅದು ಅನುದಾನದ ವಿಭಜನೆಯ ಭಾಗವಾಗಿರಬೇಕು. ಕೇಂದ್ರದಿಂದ ತೆರಿಗೆಯೇತರ ಸಂಪನೂಲಗಳ ಹಂಚಿಕೆಗೆ ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿ ತರಲು ಶಿಫಾರಸ್ಸು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಸಮತೋಲಿತ, ಸಮರ್ಥ ಹಾಗೂ ಕಾರ್ಯಸಾಧುವಾದ ಸಲಹೆಗಳನ್ನು ಆಯೋಗ ದಿಟ್ಟತನದಿಂದ ನೀಡಬೇಕಿದೆ. ಕರ್ನಾಟಕಕ್ಕೆ ಸಂಪನೂಲ ಕೊಡುಗೆಯಲ್ಲಿ ಸ್ಥಳೀಯವಾಗಿ ಶೇ.60 ರಷ್ಟು ಮರುಪಾವತಿಯಾಗಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಸಂಬಂಧಗಳು ಮೊನಚಾದ ಘಮ್ಯವನ್ನು 16ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಪರಿಣಾಮಕಾರಿ ಸಾಮರ್ಥ್ಯ ವೃದ್ಧಿಗೆ ಪೂರಕವಾಗಿರಬೇಕು ಎಂದು ಹೇಳಿದ್ದಾರೆ.
ಬಲಿಷ್ಠ ಭಾರತಕ್ಕೆ ಬಲಿಷ್ಠ ಕರ್ನಾಟಕದ ಪಾತ್ರ ಪ್ರಮುಖವಾಗಿದೆ. ದೇಶದ ಜಿಡಿಪಿ ಮತ್ತು ನಿವ್ವಳ ತೆರಿಗೆ ಆದಾಯಕ್ಕೆ ರಾಜ್ಯದ ಕೊಡುಗೆ ಅಮೂಲ್ಯವಾದುದು. ದೇಶಕ್ಕೆ ಕೊಡುಗೆ ನೀಡುತ್ತಿರುವ 7 ಕೋಟಿ ಕನ್ನಡಿಗರು ಹೆಮೆಯ ಭಾವನೆ ಹಾಗೂ ಅಷ್ಟೇ ಆಶಾಭಾವನೆಯನ್ನು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಪನೂಲ ಹಂಚಿಕೆಯ ಶಿಫಾರಸ್ಸುಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ.
ಸಹಭಾಗಿತ್ವ ಒಕ್ಕೂಟ ಮತ್ತು ಆರ್ಥಿಕ ಒಕ್ಕೂಟದ ಹಿನ್ನೆಲೆಯಲ್ಲಿ ಸಂವಿಧಾನದ ಪರಿಚ್ಛೇದ 280 ರಡಿ ಪ್ರಧಾನಮಂತ್ರಿಗಳು ಹಣಕಾಸು ಆಯೋಗವನ್ನು ರಚಿಸಿದ್ದಾರೆ.
ಸ್ವತಂತ್ರ, ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾದ ಸಲಹೆಗಳನ್ನು ಆಯೋಗ ನೀಡಬೇಕಿದೆ. ಈ ವೇಳೆ ಸಾಮರ್ಥ್ಯ ವೃದ್ಧಿ ಮತ್ತು ಪಾಲುದಾರಿಕೆ ತತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಂಪನೂಲದ ಮರು ಹಂಚಿಕೆಯ ಪ್ರಕ್ರಿಯೆಗಳು ಅಗತ್ಯವಿದೆ. ತೆರಿಗೆದಾರರ ನಿರೀಕ್ಷೆಗಳಿಗೆ ತಕ್ಕ ಪ್ರತಿಫಲ ದೊರೆತರೆ ಸಾರ್ವಜನಿಕರ ವಿಶ್ವಾಸವು ವೃದ್ಧಿಯಾಗಲಿದೆ. ಹೀಗಾಗಿ ಹಣಕಾಸು ಆಯೋಗ ಸಮತೋಲಿತ ಸಾಮರ್ಥ್ಯಕ್ಕಾಗಿ ಬಿಗಿಯಾದ ಹಗ್ಗದ ನಡಿಗೆಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ದೇಶದ ಜಿಡಿಪಿಗೆ ಶೇ.8.4 ರಷ್ಟು ಕೊಡುಗೆ ನೀಡಿದ್ದರೆ, ಜನಸಂಖ್ಯೆಯಲ್ಲಿ ಶೇ.5 ರಷ್ಟು ಪಾಲು ಹೊಂದಿದೆ. ಜಿಎಸ್ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ವಾರ್ಷಿಕವಾಗಿ 4 ಲಕ್ಷ ಕೋಟಿ ರೂ.ಗಳ ಸಂಪನೂಲ ಒದಗಿಸಲಾಗುತ್ತಿದೆ. ಪ್ರತಿಯಾಗಿ ನಮಗೆ ಹಂಚಿಕೆಯಾಗುತ್ತಿರುವುದು 45 ಸಾವಿರ ಕೋಟಿ ಮಾತ್ರ. ಅದರಲ್ಲಿ 15 ಸಾವಿರ ಕೋಟಿ ಅನುದಾನದ ರೂಪದಲ್ಲಿದೆ. ಇದರ ಅರ್ಥ ಕರ್ನಾಟಕದ ತೆರಿಗೆದಾರರು 1 ರೂಪಾಯಿಯಲ್ಲಿ 15 ಪೈಸೆಯನ್ನು ಮಾತ್ರ ವಾಪಸ್ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.
15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ಕರ್ನಾಟಕದ ತೆರಿಗೆ ಪಾಲು ಶೇ.4.713 ರಿಂದ ಶೇ.3.647 ಕ್ಕೆ ಕುಸಿದಿದೆ. ಇದರ ಪರಿಣಾಮ 2021 ರಿಂದ 2026 ರ ಅವಧಿಯಲ್ಲಿ 68,275 ಕೋಟಿ ರೂ.ಗಳ ನಷ್ಟವಾಗಿದೆ. ವಿಶೇಷವಾಗಿ 11,495 ಕೋಟಿ ರೂ.ಗಳ ಅನುದಾನಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಹಿಂದಿನ ಹಣಕಾಸು ಆಯೋಗದಿಂದ ರಾಜ್ಯಕ್ಕಾದ ಒಟ್ಟು ನಷ್ಟ 79,770 ಕೋಟಿ ರೂ.ಗಳೆಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಕರ್ನಾಟಕದ ಸಂಪನೂಲದಲ್ಲಿ 35 ರಿಂದ 40 ಸಾವಿರ ಕೋಟಿ ರೂ.ಗಳು ಇತರ ರಾಜ್ಯಗಳಿಗೆ ಹಂಚಿಕೆಯಾಗುತ್ತದೆ. ಜೊತೆಗೆ ಸೆಸ್ ಮತ್ತು ಸರ್ಚಾರ್ಜ್ಗಳನ್ನು ಕೇಂದ್ರ ಸರ್ಕಾರ 50 ರಿಂದ 55 ರಷ್ಟು ಹೆಚ್ಚಳ ಮಾಡಿಕೊಂಡಿದ್ದು, ಇದರ ಹಂಚಿಕೆಯಾಗದೇ ಇರುವುದರಿಂದ 2017 ರಿಂದ 2025 ರವರೆಗೆ 55,359 ಕೋಟಿ ರೂ.ಗಳ ನಷ್ಟವಾಗುತ್ತಿದೆ ಎಂದಿದ್ದಾರೆ.
ಕೇಂದ್ರಸರ್ಕಾರ ಅನುದಾನ ಕಡಿತ ಮಾಡಿದ್ದರ ಹೊರತಾಗಿಯೂ ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸಿದೆ. ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ.2 ರ ಮಿತಿಯಲ್ಲೇ ನಿರ್ವಹಣೆ ಮಾಡುತ್ತಿದ್ದು, ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿದೆ ಎಂದು ಪ್ರಶಂಸಿಕೊಂಡಿದ್ದಾರೆ.