Saturday, September 28, 2024
Homeರಾಜ್ಯಕ್ಷುಲ್ಲಕ ವಿಚಾರಗಳಿಗೂ ರಾಜ್ಯಪಾಲರ ಹಸ್ತಕ್ಷೇಪ : ಸಿಎಂ ತೀವ್ರ ಅಸಮಾಧಾನ

ಕ್ಷುಲ್ಲಕ ವಿಚಾರಗಳಿಗೂ ರಾಜ್ಯಪಾಲರ ಹಸ್ತಕ್ಷೇಪ : ಸಿಎಂ ತೀವ್ರ ಅಸಮಾಧಾನ

CM is very upset on Governor's interference

ಬೆಂಗಳೂರು,ಸೆ.23- ಅರ್ಕಾವತಿ ರೀ ಡೂ ಪ್ರಕರಣದ ನ್ಯಾಯಾಂಗ ವಿಚಾರಣಾ ವರದಿಯನ್ನು ಈ ಹಿಂದೆ ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ದಾಗ ವಿಧಾನಮಂಡಲದಲ್ಲಿ ಏಕೆ ಮಂಡಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಕ್ಷುಲ್ಲಕ ವಿಚಾರಗಳಿಗೂ ಸರ್ಕಾರದ ವರದಿ ಕೇಳುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಕಾವತಿ ಲೇಔಟ್‌ ರೀ ಡೂ ಪ್ರಕರಣದಲ್ಲಿ ರಾಜ್ಯಪಾಲರು ಬರೆದಿರುವ ಪತ್ರವನ್ನು ಪರಿಶೀಲನೆ ನಡೆಸಲಾಗುವುದು. ಬಿಜೆಪಿಯ ಸಿ.ಟಿ.ರವಿ ಈಗ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಏಕೆ ಸುಮನಿದ್ದರು ಎಂದು ಕೇಳಿದರು.

ರೀ ಡೂ ಪ್ರಕರಣದ ವಿಚಾರಣೆ ನಡೆಸಿದ ಕೆಂಪಣ್ಣ ಆಯೋಗದ ಮೇಲೆ ಕೇಶವ ನಾರಾಯಣ ಸಮಿತಿ ಅಧ್ಯಯನ ನಡೆಸುತ್ತಿದೆ. ಅದೆಲ್ಲವನ್ನೂ ಪರಿಶೀಲನೆ ನಡೆಸಬೇಕಿದೆ ಎಂದರು.ರಾಜ್ಯಪಾಲರು ಸಣ್ಣಸಣ್ಣ ವಿಚಾರಗಳಿಗೂ ವರದಿ ಕೇಳುತ್ತಿದ್ದಾರೆ. ಯಾರೋ ಒಬ್ಬ ಮೈಸೂರಿನವರು ಮುಖ್ಯಮಂತ್ರಿಗಳು ಕನ್ನಡದಲ್ಲಿ ಸಹಿ ಮಾಡುತ್ತಿದ್ದರು. ಈಗ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಇದರ ವಿರುದ್ಧ ತನಿಖೆ ಮಾಡಿ ಎಂದು ದೂರು ನೀಡಿದ್ದಾರೆ. ಇದೊಂದು ವಿಷಯವೇ ಎಂದು ಪ್ರಶ್ನಿಸಿದರು.

ನಾನು ಇಂಗ್ಲಿಷ್‌ನಲ್ಲಾದರೂ ಅಥವಾ ಕನ್ನಡದಲ್ಲಾದರೂ ಸಹಿ ಮಾಡಬಹುದು. ಅದೂ ವಿವಾದವೇ?, ಯಾರಿಗೆ, ಯಾವ ಭಾಷೆ ಅನುಕೂಲವೋ ಅದರಲ್ಲಿ ಸಹಿ ಮಾಡಬಹುದು. ಕನ್ನಡದಲ್ಲಿ ಕಡತ ಮಂಡನೆಯಾಗಿದ್ದರೆ ಕನ್ನಡದಲ್ಲೇ ಸಹಿ ಮಾಡುತ್ತೇನೆ. ಕಡತಗಳು ಇಂಗ್ಲಿಷ್‌ನಲ್ಲಿದ್ದರೆ ಕೇಂದ್ರ ಸರ್ಕಾರ ಅಥವಾ ಬೇರೆ ರಾಜ್ಯಗಳಿಗೆ ಪತ್ರ ಬರೆಯಬೇಕಾದರೆ ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತೇನೆ. ಅಂತಹ ಕ್ಷುಲ್ಲಕ ವಿಚಾರಗಳಿಗೆ ರಾಜ್ಯಪಾಲರು ವರದಿ ಕೇಳುತ್ತಿರುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಸಿಡಿಮಿಡಿ ವ್ಯಕ್ತಪಡಿಸಿದರು.

RELATED ARTICLES

Latest News