ಜಮ್ಮು, ಮೇ 10-ಪಾಕ್‌ನಿಂದ ಶಲ್‌ಹಾಗು ದ್ರೋನ್ ದಾಳಿಯಲ್ಲಿ ಹಾನಿಗೊಂಡಿರುವ ಜಮ್ಮುವಿನ ವಸತಿ ಪ್ರದೇಶಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ಭೇಟಿ ನೀಡಿದರು.
ಸ್ಫೋಟದಿಂದ ಮನೆ ಮತ್ತು ಹಲವಾರು ವಾಹನಗಳು ಹಾನಿಗೊಳಗಾಗಿವೆ.ರೆಹಾರಿಯಲ್ಲಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಅಬ್ದುಲ್ಲಾ ಭೇಟಿ ನೀಡಿ ಸಂತ್ರಸ್ತ ಕುಟುಂಬದೊಂದಿಗೆ ಸಂವಾದ ನಡೆಸಿದ್ದಾರೆ.
ಪಾಕಿಸ್ತಾನದಿಂದ ಡೋನ್ ದಾಳಿಯ ನಡುವೆ ನಗರದಲ್ಲಿ ಬೆಳಿಗ್ಗೆ ಸೈರನ್ಗಳು ಮೊಳಗುತ್ತಿದ್ದಂತೆ ಸ್ಫೋಟದ ಭಾರಿ ಶಬ್ದ ಕೇಳಿಸಿದೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ಜಮ್ಮುವಿನಲ್ಲಿ ಸ್ಫೋಟಗಳ ಶಬ್ದಗಳು ಪ್ರಾರಂಭವಾದವು. ಗಡಿಯಾಚೆಯಿಂದ ಹೊಸ ಟ್ರೋನ್ ದಾಳಿಯ ಅಲೆಯನ್ನು ಅಧಿಕಾರಿಗಳು ದೃಢಪಡಿಸಿದರು. ನಗರದ ರೂಪ್ ನಗರ ಪ್ರದೇಶದಲ್ಲಿ ವಸತಿ ಕಟ್ಟಡಕ್ಕೂ ಹಾನಿಯಾಗಿದೆ. ಪಾಕಿಸ್ತಾನವು ಕಳೆದ ರಾತ್ರಿ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಡೋನ್ ದಾಳಿಯ ನಡೆಸಿದ್ದು ಮತ್ತೆ ಬೆಳಿಗ್ಗೆ ಹೊಸ ದಾಳಿಗಳು ನಡೆದವು.