ಬೆಂಗಳೂರು, ಅ.23-ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಮವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ. ಅಮವಾಸ್ಯೆ ಇರುವ ದಿನ ಸಹ ಸೂರ್ಯ ಇರುತ್ತಾನೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಮುಖ್ಯಮಂತ್ರಿ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಅಮವಾಸ್ಯೆ ದಿನ ಚಂದ್ರ ಇರಲ್ಲ. ಈ ಚಂದ್ರನ ನೋಡಿ ಪೂಜೆ ಮಾಡುವವರ ಜೊತೆ ಇದ್ದು, ಸಿದ್ದರಾಮಯ್ಯ ಈ ರೀತಿ ಹೇಳಿರಬೇಕು. ಸೂರ್ಯ ಯಾವತ್ತು ಇರುತ್ತದೆ. ಸೂರ್ಯನ ಪೂಜೆ ಮಾಡುವವರಿಗೂ
ಚಂದ್ರನ ಪೂಜೆ ಮಾಡುವವ ವ್ಯತ್ಯಾಸ ತಿಳಿದು ಮಾತಾಡಲಿ ಎಂದು ಹೇಳಿದರು.ಮುಖ್ಯಮಂತ್ರಿ ಅವರ ಸ್ಥಾನಕ್ಕೆ ಶೋಭೆ ತರದೆ ಇರುವ ರೀತಿ ಟೀಕೆ ಮಾಡುತ್ತಾರೆ. ನಾನು ಸಿದ್ದರಾಮಯ್ಯ ಅವರ ಬಗ್ಗೆ ವಯಕ್ತಿಕವಾಗಿ ಮಾತಾಡಬಹುದು. ನಾನು 24 ಲಕ್ಷ ಜನರಿಂದ ಆಯ್ಕೆಯಾಗಿದ್ದೇನೆ. ನಾನು ವೈಯಕ್ತಿಕ ಟೀಕೆಗೆ ಹೋಗುವುದಿಲ್ಲ. ನಾನು ಸಿದ್ದರಾಮಯ್ಯ ಮೇಲೆ ವಯಕ್ತಿಕ ಟೀಕೆ ಮಾಡುವುದಿಲ್ಲ. ನಮ ಪಕ್ಷದ ಸಂಸ್ಕ್ರತಿ ಸಹ ಅದಲ್ಲ ಎಂದರು.
ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ ಆಡಳಿತ. ಬೆಂಗಳೂರಿಗರು ನರಕ ಯಾತನೆಯಲ್ಲಿದ್ದಾರೆ. ಗುಂಡಿ ಇಲ್ಲದ ಒಂದು ರಸ್ತೆ ಕೂಡ ಇಲ್ಲ. ರಸ್ತೆ ಗುಂಡಿಯೇ ನಿಮ ಆಡಳಿತ ವೈಖರಿ ತೋರಿಸುತ್ತದೆ ಎಂದು ಅವರು ಆರೋಪಿಸಿದರು.15 ಬಿಲಿಯನ್ ಡಾಲರ್ ಹೂಡಿಕೆ ಆಂದ್ರಕ್ಕೆ ಹೋಗಿದೆ. 2300 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ಸಾರಿಗೆ ನೌಕರರು ಸಂಬಳ ಇಲ್ಲದೆ ಪ್ರತಿಭಟನೆ ಮಾಡಿದ್ದಾರೆ. ಹಿಂದಿನ ಸರ್ಕಾರದ ಮೇಲ್ಸೇತುವೆ ಯೋಜನೆಯನ್ನು ಇಂದಿಗೂ ಮುಗಿಸಿಲ್ಲ. ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಬೆಂಗಳೂರಲ್ಲಿ ನಿವೇಶನಕ್ಕೆ ರೇಟ್ ಚಾರ್ಟ್ ಆಗುತ್ತಿದೆ. ಬಿಹಾರ್ ಚುನಾವಣೆಗೆ ಫಂಡಿಂಗ್ ನಲ್ಲಿ ಬ್ಯುಸಿ ಆಗಿದ್ದೀರಿ. ಮಿಗತೆ ಬಜೆಟ್ ನೀಡಿದ್ದು, ಬಿಜೆಪಿ. ನೀವು ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ. ನಿಮ ಶಾಸಕರೇ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ. 100 ರೂ. ಆದಾಯದಲ್ಲಿ 18 ರೂ. ಬಡ್ಡಿಗೆ ಹೋಗುತ್ತಿದೆ. ವಿವಿಧ ಇಲಾಖೆಗೆ ಮೀಸಲಿಟ್ಟ ಹಣಕ್ಕಿಂತ ಹೆಚ್ಚು ಗ್ಯಾರಂಟಿಗೆ ಖರ್ಚಾಗುತ್ತಿದೆ. ಇನ್ನೆರುಡುವರೆ ವರ್ಷದಲ್ಲಿ ರಾಜ್ಯಕ್ಕೆ ಹಿಡಿದ ಗ್ರಹಣ ಬಿಡಲಿದೆ. ರಾಜಕೀಯ ನಿವೃತ್ತಿ ಬಳಿಕ ನಿಮ ಕೊಡುಗೆ ಏನು? ರಾಜ್ಯವನ್ನು ಸಾಲದಲ್ಲಿ ಮುಳುಗುಸಿದ್ದಲ್ಲವೆ? ಎಂದು ಅವರು ವಾಗ್ದಾಳಿ ನಡೆಸಿದರು.
ಆರ್ಥಿಕವಾಗಿ ನಿಮಗೆ ನಂಬಿಕೆ ಇದ್ದರೆ ಶ್ವೇತ ಪತ್ರ ಹೊರಡಿಸಿ. ಕರ್ನಾಟಕ ಎಷ್ಟು ಸಾಲ ಮಾಡಿದೆ. ಎಷ್ಟು ಬಡ್ಡಿ ಕಟ್ತಿದೆ, ಈಗ ಸಾಲದ ಹೊರೆ ಹೆಚ್ಚಿದೆಯಾ, ಕಡಿಮೆ ಇದೆಯಾ? ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ನಲ್ಲಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಹೋಗೋವರೆಗೂಅದು ಸರಿಯಾಗಲ್ಲ. ಟನಲ್ ಯೋಜನೆಯೇ ಅವೈಜ್ಞಾನಿಕವಾಗಿದ್ದು,25000 ಕೋಟಿ ರೂ. ಖರ್ಚು ಮಾಡುತ್ತಿರುವುದು ಯಾರಿಗೋಸ್ಕರ? ಎಂದು ಅವರು ವಾಗ್ದಾಳಿ ನಡೆಸಿದರು.