Saturday, February 8, 2025
Homeರಾಜ್ಯಬಜೆಟ್ ಪೂರ್ವಬಾವಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

ಬಜೆಟ್ ಪೂರ್ವಬಾವಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

CM Siddaramaiah holds pre-budget meeting

ಬೆಂಗಳೂರು,ಫೆ.8- ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರನೇ ದಿನವೂ ಕೂಡ ಬಜೆಟ್‌ ಪೂರ್ವಬಾವಿ ಸಭೆ ನಡೆಸಿದ್ದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ.

ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿ ತೀರ್ಪು ನೀಡಿದ್ದ ಬಳಿಕ ನಿರಾಳಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸಾಹದಿಂದ ಪ್ರಗತಿ ಪರಿಶೀಲನಾ ಸಭೆಗಳನ್ನು ಬೆಳಗ್ಗೆ ಉನ್ನತ ಶಿಕ್ಷಣ, ಮುಜರಾಯಿ, ಸಾರಿಗೆ, ಮಧ್ಯಾಹ್ನ ನಗರಾಭಿವೃದ್ಧಿ, ನಗರ ಯೋಜನೆ, ಪೌರಾಡಳಿತ, ಹಜ್‌, ಸಣ್ಣ ನೀರಾವರಿ, ವಿಜ್ಞಾನ-ತಂತ್ರಜ್ಞಾನ, ಆರೋಗ್ಯ-ಕುಟುಂಬ ಕಲ್ಯಾಣ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಗಳ ಬಜೆಟ್‌ ಪೂರ್ವಬಾವಿ ಸಭೆ ನಡೆಸಿದ್ದಾರೆ.

ಈ ಹಿಂದಿನ ಬಜೆಟ್‌ನಲ್ಲಿ ನೀಡಲಾಗಿದ್ದ ಅನುದಾನ, ಅದರ ಬಳಕೆ ಕುರಿತಂತೆ ಚರ್ಚೆ ನಡೆಸಲಾಗಿದೆ. ಮುಂದಿನ ಬಜೆಟ್‌ಗೆ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ.

RELATED ARTICLES

Latest News