Sunday, July 27, 2025
Homeರಾಜ್ಯತವರೂರಿನಲ್ಲಿ ಜನರ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ

ತವರೂರಿನಲ್ಲಿ ಜನರ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah in his hometown

ಮೈಸೂರು, ಜು.27- ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರಿನ ಲ್ಲಿಂದು ಜನರನ್ನು ಭೇಟಿಮಾಡಿ ಸಮಸ್ಯೆಗಳನ್ನು ಆಲಿಸಿದರು. ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮನೆಯ ಬಳಿ ನೂರಾರು ಜನರು ಜಮಾಯಿಸಿದರು.

ಎಲ್ಲರನ್ನೂ ಭೇಟಿಮಾಡಿದ ಸಿದ್ದರಾಮಯ್ಯ ಲಿಖಿತ ಮನವಿಗಳನ್ನು ಖುದ್ದು ಸ್ವೀಕರಿಸಿದರು.ಬಹುತೇಕ ಜನರನ್ನು ಗುರುತಿಸಿ ಹೆಸರು ಹಿಡಿದು ಮಾತನಾಡಿಸಿದ ಸಿದ್ದರಾಮಯ್ಯ, ಭಾನುವಾರವಾದರೂ ಏನ್ರಪ್ಪ ನೀವು ಎಂದು ಗೊಣಗುತ್ತಲೇ ಅಹವಾಲುಗಳನ್ನು ಆಲಿಸಿದರು.ಕೆಲವರ ಜೊತೆ ನೀನ್ಯಾಕಯ್ಯ ಬಂದಿದ್ದೀಯ ಎಂದು ಆತೀಯವಾಗಿ ಗದರಿದರು. ಅರ್ಜಿ ನೀಡಿದ ಕೆಲವರು ಹಲವು ಬಾರಿ ಮನವಿ ನೀಡಿದ ಹೊರತಾಗಿಯೂ ತಮ ಕೆಲಸಗಳಾಗಿಲ್ಲ ಎಂದು ಹೇಳಿಕೊಂಡರು.

ಈವರೆಗೂ ಏಕೆ ಕೆಲಸ ಮಾಡಿಕೊಟ್ಟಿಲ್ಲ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಅಧಿಕಾರಿಗಳತ್ತ ಕೆಂಗಣ್ಣು ಬೀರಿದ್ದು ಕಂಡು ಬಂತು. ಮೈಸೂರು ಜಿಲ್ಲೆಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅಲ್ಲಿಂದ ಮಂಡ್ಯದಲ್ಲಿ ನಡೆಯುವ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡರು.

ಸಿದ್ದರಾಮಯ್ಯ ಯಾವಾಗ ಮೈಸೂರಿಗೆ ಬಂದರೂ ಅವರನ್ನು ಭೇಟಿ ಮಾಡಲು ಜನ ಕಿಕ್ಕಿರಿದು ಸೇರುವುದು ಸಾಮಾನ್ಯವಾಗಿದೆ. ಅವರಲ್ಲಿ ಕೆಲವರು ದೂರು ಅರ್ಜಿಗಳನ್ನು ನೀಡಿದರೆ, ಇನ್ನೂ ಕೆಲವರು ಸಿದ್ದರಾಮಯ್ಯ ಅವರನ್ನು ನೋಡಿ ಕಣ್ಣುತುಂಬಿಕೊಳ್ಳಲು ಆಗಮಿಸುವುದು ಸಾಮಾನ್ಯವಾಗಿರುತ್ತದೆ.

RELATED ARTICLES

Latest News