Sunday, November 24, 2024
Homeರಾಜಕೀಯ | Politicsಸರ್ಕಾರ ವರ್ಷ ಪೂರೈಸಿದ ಬೆನ್ನಲ್ಲೇ ಡಿಕೆಶಿ ಕುರಿತು ಸಿಎಂ ಸಿದ್ದರಾಮಯ್ಯ ಸಿಡಿಮಿಡಿ ಮಾತು..!

ಸರ್ಕಾರ ವರ್ಷ ಪೂರೈಸಿದ ಬೆನ್ನಲ್ಲೇ ಡಿಕೆಶಿ ಕುರಿತು ಸಿಎಂ ಸಿದ್ದರಾಮಯ್ಯ ಸಿಡಿಮಿಡಿ ಮಾತು..!

ಬೆಂಗಳೂರು, ಮಾ 21- ಜೋಡೆತ್ತುಗಳಂತೆ ಬರೋಬ್ಬರಿ ಒಂದು ವರ್ಷ ಯಶಸ್ವಿ ಆಡಳಿತ ಪೂರೈಸಿದ ಮಾರನೆ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುರಿತಂತೆ ಅಸಮಾಧಾನದ ಚಡಪಡಿಕೆ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮೇ 21 ದಿ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಪುಣ್ಯಸರಣೆ ಅಂಗವಾಗಿ ಆಚರಿಸಲಾಗುವ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಡಿ.ಕೆ.ಶಿವಕುಮಾರ್‌ ಅವರ ದಿನಚರಿಯಲ್ಲಿ ವೇಳಾಪಟ್ಟಿಯಲ್ಲಿ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆಯುವ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮವಿತ್ತು.

11 ಗಂಟೆಗೆ ಸರಿಯಾಗಿ ಸಿದ್ದರಾಮಯ್ಯ ಆಗಮಿಸಿದಾಗ ಮುಖ್ಯ ಕಾರ್ಯದರ್ಶಿ ರಜನೀಶ್‌ ಘೋಯಲ್‌ ಅವರು ಉಪಮುಖ್ಯಮಂತ್ರಿಯವರು ಕೆಳಗಡೆ ಇದ್ದಾರೆ. ನಾವು ಸ್ವಾಗತ ಭಾಷಣ ಮುಗಿಸುವ ವೇಳೆಗೆ ಅವರೂ ಬಂದು ಸೇರಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಯವರಿಗೆ ವಿವರಿಸಿದರು.

ಇದಕ್ಕೆ ಸಿಡಿಮಿಡಿಗೊಂಡ ಮುಖ್ಯಮಂತ್ರಿಯವರು ಬಂದ್ರೆ ಬರ್ತಾರೆ, ನೀವು ಶುರು ಮಾಡಿ, ನಾನು ಹೋಗಬೇಕಿದೆ ಎಂದು ತಾಕೀತು ಮಾಡಿದರು.ಸ್ವಲ್ಪ ಹೊತ್ತಿನಲ್ಲೇ ಮುಖ್ಯಮಂತ್ರಿಯವರು ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಅವರು ಬಂದು ಉಪಮುಖ್ಯಮಂತ್ರಿಯವರು ಕೆಳಗಡೆ ಇದ್ದಾರೆ, ಬರುತ್ತಾರೆ ಎಂದು ಮತ್ತೊಮೆ ವಿವರಿಸಿದರು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯನವರು ಕಾರ್ಯಕ್ರಮ ಮುಂದುವರೆಸುವಂತೆ ಸೂಚಿಸಿದ್ದಲ್ಲದೆ, ಪ್ರತಿಜ್ಞಾವಿಧಿಯನ್ನೂ ಬೋಧಿಸಿದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳು ಹಾಜರಾಗದಿರುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಸಹನೆ ಹೊರಹಾಕಿದ್ದು ಕಂಡುಬಂದಿತು. ಕೊನೆಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ವಿಧಾನಸೌಧದ ನೆಲಮಹಡಿಯಲ್ಲಿದ್ದ ಡಿ.ಕೆ.ಶಿವಕುಮಾರ್‌, ಕಾರ್ಯಕ್ರಮ ಶುರುವಾದ ಮಾಹಿತಿ ದೊರೆಯುತ್ತಿದ್ದಂತೆ ಅನ್ಯಮನಸ್ಕರಾಗಿ ವಿಧಾನಸೌಧದಿಂದ ನಿರ್ಗಮಿಸಿ ಕೆಪಿಸಿಸಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರಾಜೀವ್‌ಗಾಂಧಿ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದಕ್ಕೆ ಪೂರಕವಾಗಿ ಕೆಪಿಸಿಸಿ ಕಚೇರಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇನ್ನೆಷ್ಟು ದಿನ ನಾನು ಈ ಹುದ್ದೆಯಲ್ಲಿರುತ್ತೇನೋ ಗೊತ್ತಿಲ್ಲ, ಆದರೆ ಪಕ್ಷದ ಸಂಘಟನೆಗೆ ಸಂಬಂಧಪಟ್ಟಂತೆ ನಾನು ಭದ್ರ ಬುನಾದಿ ತಳಪಾಯ ಹಾಕಿಕೊಡುತ್ತೇನೆ ಎಂದು ಹೇಳಿದ್ದು ವಿಶೇಷವಾಗಿತ್ತು.

RELATED ARTICLES

Latest News