ಮಂಡ್ಯ, ಮೇ 8- ಯಾವ ಗಳಿಗೆಯಲ್ಲಿ, ಏನಾದರೂ ಆಗಬಹುದು ಎಂಬ ಕಾರಣಕ್ಕೆ ಎಲ್ಲೆಡೆ ಜಾಗೃತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಇಂದು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ ಎಂದರು.
ಅಣೆಕಟ್ಟು, ವಿದ್ಯುತ್ ಉತ್ಪಾದನಾ ಸ್ಥಾವರ ಸೇರಿದಂತೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ಸೂಚನೆಯ ಮೇಲೆಗೆ ಎಲ್ಲೆಡೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ ಎಂದೂ ಸ್ಪಷ್ಟ ಪಡಿಸಿದರು.
ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಮೈಸೂರಿನಲ್ಲಿ ಇರುವವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಂತಹವರು ಇನ್ನೂ ಉಳಿದುಕೊಂಡಿರ ಬಹುದು, ಉಳಿದಂತೆ ಎಲ್ಲರನ್ನೂ ಕಳುಹಿಸಲಾಗಿದೆ. ಬಾಕಿ ಎಷ್ಟು ಜನ ಇರಬಹುದು ಎಂದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ ಎಂದರು.
ಸಚಿವ ರಾಮಲಿಂಗಾರೆಡ್ಡಿಯವರು ತಮ ಜೊತೆ ಮಾತನಾಡಿ ಮುಜರಾಯಿ ದೇವಸ್ಥಾನದಲ್ಲಿ ಯೋಧರ ಶ್ರೇಯಸ್ಸಿಗೆ ವಿಶೇಷ ಪೂಜೆಯ ವ್ಯವಸ್ಥೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-09-2025)
- ಮತಪತ್ರ ಬಳಕೆ ಸ್ವಾಗತಾರ್ಹ : ಖರ್ಗೆ
- ಅಮೆರಿಕ ರೈಲಿನಲ್ಲಿ ಉಕ್ರೇನ್ ಮಹಿಳೆ ಹತ್ಯೆ
- ಬ್ಯಾಲೆಟ್ ಪೇಪರ್ ವಿರುದ್ಧ ಕಾನೂನು ಸಮರ : ವಿಜಯೇಂದ್ರ
- ತಲೆ ಬುರುಡೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾದ ಎಸ್ಐಟಿ ಅಧಿಕಾರಿಗಳು