Friday, August 22, 2025
Homeರಾಜ್ಯಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸಿದ್ದರೆ ಬಿಜೆಪಿಯಿಂದ ದೊಡ್ಡ ಚಳವಳಿಯೇ ನಡೆಯುತ್ತಿತ್ತು : ಸಿಎಂ

ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸಿದ್ದರೆ ಬಿಜೆಪಿಯಿಂದ ದೊಡ್ಡ ಚಳವಳಿಯೇ ನಡೆಯುತ್ತಿತ್ತು : ಸಿಎಂ

CM Siddaramaiah on RCB Victory parade Stampede

ಬೆಂಗಳೂರು,ಆ.22– ಆರ್‌ಸಿಬಿ ವಿಜಯೋ ತ್ಸವಕ್ಕೆ ಅನುಮತಿ ನಿರಾಕರಿಸಿದ್ದರೆ ಬಿಜೆಪಿಯವರು ದೊಡ್ಡ ಚಳವಳಿಯನ್ನೇ ಮಾಡುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆರೋಪಿಸಿದರು.

ನಿಯಮ 69ರಡಿ ನಡೆದ ಚರ್ಚೆಯಲ್ಲಿ ಉತ್ತರ ನೀಡುತ್ತಿದ್ದ ಅವರು, ಆರ್‌ಸಿಬಿ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಆಟಗಾರರ ತೆರೆದ ವಾಹನದಲ್ಲಿ ಮೆರವಣಿಗೆ ಅನುಮತಿ ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿತ್ತು. ಒಂದು ವೇಳೆ ವಿಜಯೋತ್ಸವಕ್ಕೆ ಅನುಮತಿ ಕೊಡದಿದ್ದರೆ ಈಗಿನ ಧರ್ಮಸ್ಥಳದ ವಿಚಾರದಲ್ಲಿ ಮಾಡುತ್ತಿರುವ ಚಳವಳಿ ರೀತಿಯೇ ಮಾಡುತ್ತಿತ್ತು ಎಂದು ಟೀಕಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಎಸ್‌‍ಐಟಿ ರಚನೆ ಮಾಡಿರುವುದನ್ನು ಸ್ವಾಗತಿಸಿದ್ದಾರೆ. ಎಸ್‌‍ಐಟಿ ರಚನೆಯಾದ ಹತ್ತೆನ್ನರಡು ದಿನ ಬಿಜೆಪಿಯವರು ಮಾತನಾಡಲಿಲ್ಲ. ಒಂದು ಕಡೆ ಮೃತದ ದೇಹದ ಅಸ್ಥಿಪಂಜರ, ಇನ್ನೊಂದು ಕಡೆ ಮೂಳೆ ದೊರೆತಿರುವುದು ಗೊತ್ತಾದ ನಂತರ ಎಲ್ಲರೂ ಮಾತನಾಡಲು ಶುರು ಮಾಡಿದರು. ಜನರ ಉನಾದಕ್ಕೆ ಬೆಂಕಿ ಹಾಕೋದು, ತುಪ್ಪ ಸುರಿಯುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.

ಕೋವಿಡ್‌ ಉಚ್ಛಾಯ ಸ್ಥಿತಿಯಲ್ಲಿದ್ದರೂ ಗುಜರಾತ್‌ನಲ್ಲಿ ನಡೆದ ಕ್ರಿಕೆಟ್‌ ವಿಜಯೋತ್ಸವದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ತಮ ಪತ್ನಿ ಹಾಗೂ ಆಗಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರೊಂದಿಗೆ ಭಾಗಿಯಾಗಿದ್ದರು. ಕೋವಿಡ್‌ನಿಂದ ಸಾವಿರಾರು ಜನರು ಸತ್ತರು. ಬಿಜೆಪಿ ಅಧಿಕಾರದಲ್ಲಿದ್ದರೂ ತನಿಖೆ ಮಾಡಲಿಲ್ಲ, ರಾಜೀನಾಮೆ ಕೊಡಲಿಲ್ಲ. ತಪ್ಪಾಯಿತೆಂದು ಹೇಳಲಿಲ್ಲ ಎಂದು ಟೀಕಿಸಿದರು.

ಆರ್‌ಸಿಬಿ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದರ ಸಂಪಾದಯಕೀಯವನ್ನು ಮುಖ್ಯಮಂತ್ರಿ ಉಲ್ಲೇಖಿಸಿ ಅದರ ಪ್ರತಿಯನ್ನು ಅಶೋಕ್‌ಗೆ ನೀಡಿದರು. ಅದೇ ರೀತಿ ಅಶೋಕ್‌ ತಾವು ಓದಿದ್ದ ಪತ್ರಿಕೆಯೊಂದ ಸಂಪಾದಕೀಯದ ಪ್ರತಿಯನ್ನು ಮುಖ್ಯಮಂತ್ರಿಗೆ ತಲುಪಿಸಿದರು.

RELATED ARTICLES

Latest News