Sunday, June 30, 2024
Homeರಾಜಕೀಯಇರೋದು 7 ಸ್ಥಾನ ಯಾರಿಗಂತ ಕೊಡೋದು : ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಇರೋದು 7 ಸ್ಥಾನ ಯಾರಿಗಂತ ಕೊಡೋದು : ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ 25- ಇರುವುದು 7 ಸ್ಥಾನ. ಯಾರಿಗೆಂದು ಹಂಚಿಕೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ತಂಗಿರುವ ಅವರನ್ನು ಇಂದು ಬೆಳಿಗ್ಗೆ ಪಕ್ಷದ ಹಲವು ನಾಯಕರು ಭೇಟಿ ಮಾಡಿ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕಾಗಿ ಬೇಡಿಕೆ ಇಟ್ಟರು. ಈ ವೇಳೆ ಎಸ್‌‍ಸಿ/ಎಸ್‌‍ಟಿಗೆ ಕೊಡಬೇಕು. ಯಾರಿಗೆಂದು ಕೊಡೋಣ. ನಮ್ಮ ಕಷ್ಟ ನಿಮಗೆ ಅರ್ಥವಾಗುವುದಿಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.

ಇದೇ ವೇಳೆ ಮತ್ತೊಬ್ಬ ವ್ಯಕ್ತಿ ತಮ್ಮ ಸಮಸ್ಯೆ ಪರಿಹರಿಸಿಕೊಡುವಂತೆ ಅರ್ಜಿ ನೀಡಲು ಬಂದಿದ್ದರು. ಅವರನ್ನು ಗದರಿದ ಸಿದ್ದರಾಮಯ್ಯ, ಎಷ್ಟು ಬಾರಿ ಅರ್ಜಿ ಕೊಡುತ್ತೀಯ. ಈಗಾಗಲೇ ಮೂರು ಬಾರಿ ಕೊಟ್ಟಿರಬಹುದು ಎಂದು ಖಾರವಾಗಿ ಹೇಳಿದರು.

ತುಂಬಾ ಜನ ಮುಖ್ಯಮಂತ್ರಿಯವರ ಬೆನ್ನಿಗೆ ಬಿದ್ದಾಗ ತಿಂಡಿ ತಿಂದು ಬರುತ್ತೇನೆ, ಸ್ವಲ್ಪ ಹೊತ್ತು ಇರಿ ಎಂದು ಹೇಳಿ ಹೊರಟರು. ನಿನ್ನೆ ಕೂಡಾ ಮುಖ್ಯಮಂತ್ರಿಯವರು ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ರುಚಿ ಸವಿದಿದ್ದರು. ಇಂದು ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್‌ಗೆ ಸಚಿವ ವೆಂಕಟೇಶ್‌ರೊಂದಿಗೆ ತೆರಳಿ ಉಪಹಾರ ಸೇವಿಸಿದರು.

RELATED ARTICLES

Latest News