Tuesday, July 22, 2025
Homeರಾಜ್ಯ17 ಲಕ್ಷ ಜನರಿಗೆ ತುಂಗಭದ್ರಾ ಕುಡಿಯುವ ನೀರಿನ ನೌಲಭ್ಯ : ಸಿಎಂ ಸಿದ್ದರಾಮಯ್ಯ

17 ಲಕ್ಷ ಜನರಿಗೆ ತುಂಗಭದ್ರಾ ಕುಡಿಯುವ ನೀರಿನ ನೌಲಭ್ಯ : ಸಿಎಂ ಸಿದ್ದರಾಮಯ್ಯ

ತುಮಕೂರು : ಪಾವಗಡ ಕ್ಷೇತ್ರದ ಜನ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಕ್ಷಣವಾಗಿದೆ, 2529 ಕೋಟಿ ವೆಚ್ಚದಲ್ಲಿ ಪಾವಗಡ,ಮೊಳಕಾಲ್ಮೂರು,ಚಳ್ಳಕೆರೆ,ಕೊಡ್ಲಗಿ,ಹಾಗೂ ಹರಪ್ಪನಹಳ್ಳಿ ತಾಲ್ಲೂಕಿನ ಜನಕ್ಕೆ ಕುಡಿಯುವ ನೀರು ನೀಡಲಾಗುತ್ತಿದೆ, ಪ್ಲೋರೈಡ್ ನೀರಿನಿಂದ ಹಲವು ರೋಗಗಳು ಬರುತ್ತಿದ್ದವು ಇದರ ನಿವಾರಣೆಗೆ ಇನ್ನೂರು ಕೀಮಿ ದೂರದಿಂದ ಕುಡಿಯುವ ನೀರು ತಂದು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಅವರು ಇಂದು ಪಾವಗಡ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ 17 ಲಕ್ಷ ಜನರಿಗೆ ಈ ತುಂಗಭದ್ರಾ ಕುಡಿಯುವ ನೀರಿನ ನೌಲಭ್ಯ ಸಿಗಲ್ಲಿದೆ,ಈ ಯೋಜನೆ 2050 ರವರೆಗೆ ಮುಂದುವರೆಯಲ್ಲಿದೆ,ಇನ್ನೂ ಮಂದೆ ಈ ಭಾಗದ ಜನ ಅಂಗವೈಕಲ್ಯಕ್ಕೆ ತುತ್ತಾಗುವುದಿಲ್ಲ, ಪಾವಗಡದ 270 ಹಳ್ಳಿಗಳಿಗೆ ಹಾಗೂ ಪಾವಗಡ ಪಟ್ಟಣಕ್ಕೆ‌ ಈ ನೀರಿನ ಸೌಲಭ್ಯ ಸಿಗಲಿದೆ‌ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಕರ್ನಾಟಕದಲ್ಲಿ ಜನರನ್ನು ತಪ್ಪು ದಾರಿಗೆ ಎಳೆದು ಜನರನ್ನು ದಿಕ್ಕು ತಪ್ಪಿಸುತ್ತಿದೀರಾ ಎಂದಾದರೂ ರಾಜ್ಯದ ಜನತೆಗೆ ಬೃಹತ್ ಯೋಜನೆಗಳನ್ನು ಜನರಿಗೆ ಕೊಟ್ಟಿದೀರಾ,ಮೋದಿ ಸೇರಿ,ಆಶೋಕ,ಯಡ್ಡಿಯೂರಪ್ಪ,ವಿಜೇಯಂದ್ರ ಎಲ್ಲಾ ಹೇಳತ್ತಾರೆ ಸರ್ಕಾರ ದಿವಾಳಿಯಾಗಿದೆ ಎಂದು ನಿಮ್ಮ ಸಾಧನೆ ಏನು ಮೊದಲು ಹೇಳಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಜೆ ಡಿ ಎಸ್ ಮತ್ತು ಬಿಜೆಪಿಯವರೆ ನಿಮ್ಮಗೆ ಮಾನ ಮರ್ಯಾದೆ ಇದೆಯಾ ಎಂದು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದಿಂದ ಪ್ರತಿ ವರ್ಷ ನಾಲ್ಕುವರೆ ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಕಟ್ಟಲಾಗುತ್ತಿದೆ,ನಮ್ಮಗೆ ಅವರು ಕೊಡುತ್ತಿರುವ ತೆರಿಗೆ ಹಣ ಬರಿ 60 ಸಾವಿರ ಕೋಟಿ ಅಷ್ಟೇ ಸಂಸದರು ಯಾಕೆ ಹಣದ ತಾರತಮ್ಯದ ಬಗ್ಗೆ ಮಾತನಾತ್ತಿಲ್ಲ ಎಂದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಕೊಡಲಾಗುತ್ತಿದೆ .ಈ ಭಾಗದ‌ ಜನ ಮತ್ತೊಮ್ಮೆ ವೆಂಕಟೇಶ್ ರನ್ನು ‌ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು‌ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾವಗಡ ತಾಲ್ಲೂಕಿನ ಶಾಸಕ ಹೆಚ್ ವಿ ವೆಂಕಟೇಶ್ ತಾಲ್ಲೂಕಿನ ಜನ ಸಿದ್ದರಾಮಯ್ಯನವರು ಇನ್ನೂ ಹತ್ತು ತಲೆಮಾರು ಜನ ಮರೆಯುವಾ ಆಗಿಲ್ಲ,ಫ್ಲೋರೈಡ್ ನೀರಿಗೆ ಹೆಸರುವಾಸಿಯಾಗಿದ ನಮ್ಮ ತಾಲ್ಲೂಕಿಗೆ ತುಂಗಭದ್ರಾ ಡ್ಯಾಮ್ ನಿಂದ ಕುಡಿಯುವ ನೀರು ಕಲ್ಪಿಸಲಾಗಿದೆ, ಪಾವಗಡವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದಾರೆ, ಸಿದ್ದರಾಮಯ್ಯನವರನ್ನು ಮರೆಯುವ ಆಗಿಲ್ಲ ,ಪಾವಗಡ ಪಾಲಿನ ದೇವರು ಸಿದ್ದರಾಮಯ್ಯನವರು ,ಪಾವಗಡಕ್ಕೆ ಮೇಗಾ ಡೈರಿಗೆ ಇನ್ನೂರು ಕೋಟಿ ನೀಡಬೇಕು, ಕೈಗಾರಿಕೆ ಮತ್ತು ಶಿಕ್ಷಣ,ವಸತಿ ಸೌಲಭ್ಯಕ್ಕೆ ಹೆಚ್ಟಿನ ಅನುದಾನ ಬಿಡುಗಡೆ ಮಾಡಬೇಕು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಡಾ .ಜಿ ಪರಮೇಶ್ವರ್,ಲೋಕಸಭಾ ‌ಸದಸ್ಯ ಗೋವಿಂದ ಕಾರಜೋಳ ಮಾತನಾಡಿದರು. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಜನತೆಗೆ ತುಂಗಭದ್ರ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ,ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ,ಸಮಾಜಕಲ್ಯಾಣ ಇಲಾಖೆಯ ಸಚಿವ ಎಚ್ ಸಿ ಮಹದೇವಪ್ಪ,ಚಳ್ಳಕೆರೆ ಶಾಸಕ ರಘು ಮೂರ್ತಿ,ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ,ಶ್ರೀನಿವಾಸ್,ಮಾಜಿ ಸಚಿವ ವೆಂಕಟರಮಣಪ್ಪ,ಪುರಸಭೆ ಅಧ್ಯಕ್ಷ ಸುದೇಶ್ ಬಾಬು ,ಹೆಚ್ ವಿ ಕುಮಾರ ಸ್ವಾಮಿ ,ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ ಪಂ ಸಿ ಇ ಓ ಪ್ರಭು,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ ಹಾಜರಿದ್ದರು.

RELATED ARTICLES

Latest News