Wednesday, July 16, 2025
Homeಇದೀಗ ಬಂದ ಸುದ್ದಿಮಳೆಗಾಲದಲ್ಲೂ ಇಳಿಯದ ಎಳನೀರು ಬೆಲೆ, ಶ್ರಾವಣಕ್ಕೆ ತೆಂಗಿನಕಾಯಿ ಬೆಲೆ ಏರಿಕೆ ಸಾಧ್ಯತೆ

ಮಳೆಗಾಲದಲ್ಲೂ ಇಳಿಯದ ಎಳನೀರು ಬೆಲೆ, ಶ್ರಾವಣಕ್ಕೆ ತೆಂಗಿನಕಾಯಿ ಬೆಲೆ ಏರಿಕೆ ಸಾಧ್ಯತೆ

Coconut water prices do not fall even during the rainy season

ಬೆಂಗಳೂರು,ಜು.16– ಮೋಡ ಕವಿದ ವಾತಾವರಣ, ಬಿಸಿಲಿಲ್ಲ, ಆಗಾಗ್ಗೆ ಮಳೆ ಬರುತ್ತಿದೆಯಾದರೂ ಸಹ ಎಳನೀರು ಬೆಲೆ ಮಾತ್ರ 100 ರೂ.ಗಳ ಸನಿಹಕ್ಕೆ ಹೋಗಿದೆ. ಮಳೆಗಾಲದಲ್ಲಿ ಎಳನೀರು ಬೆಲೆ 70 ರೂ. ತಲುಪಿದ್ದು, ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಮೊದಲ ಬಾರಿಗೆ ಎಳನೀರು ಬೆಲೆ ಇಷ್ಟೊಂದು ಏರಿಕೆಯಾಗಿರುವುದು.

ಕಳೆದ ಎರಡು ವರ್ಷಗಳಿಂದ ಇಳುವರಿ ಕುಂಠಿತವಾಗಿದ್ದು, ಎಳನೀರು, ತೆಂಗಿನಕಾಯಿ, ಕೊಬ್ಬರಿ ದರ ಏರಿಕೆಯಾಗಿದೆ. ತೆಂಗು ಇಳುವರಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಕರ್ನಾಟಕದಲ್ಲಿ ಈ ಬಾರಿ ಇಳುವರಿ ಭಾರೀ ಕುಂಠಿತಗೊಂಡಿದೆ. ಹೀಗಾಗಿ ದರ ಗಗನಕ್ಕೇರಿದೆ.

ಬೆಲೆ ಏರಿಕೆಗೆ ಕಾರಣ :
ನುಸಿಪೀಡೆ, ಕಾಂಡ ಕೊರೆತ, ಕಪ್ಪು ತಲೆ ಹುಳು ಬಾಧೆ ಸೇರಿದಮತೆ ಇತರೆ ರೋಗಗಳಿಂದ ರೈತರು ತೆಂಗು ಬೆಳೆಯಿಂದ ದೂರ ಸರಿದು ಅಡಿಕೆ ಬೆಳೆಯುವಲ್ಲಿ ಒಲವು ತೋರಿದ್ದಾರೆ. ಇದರಿಂದ ಇಳುವರಿ ಕುಂಠಿತವಾಗಿದೆ.

ತೆಂಗಿನ ತೋಟದ ಜೊತೆ ಅಡಿಕೆ ಸಸಿಗಳನ್ನು ನೆಡುತ್ತಿದ್ದು, ಇದೂ ಕೂಡ ಇಳುವರಿಗೆ ಹೊಡೆತ ಬಿದ್ದಿದೆ. ಎಳನೀರಿಗಷ್ಟೇ ಅಲ್ಲದೆ ತೆಂಗಿನಕಾಯಿ, ಕೊಬ್ಬರಿ, ಚಿಪ್ಪಿನ ಬೆಲೆಯೂ ಸಹ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಶ್ರಾವಣಕ್ಕೆ ಮತ್ತಷ್ಟು ಏರಿಕೆ ಸಾಧ್ಯತೆ :
ಆಷಾಢ ಮುಗಿದು ಶ್ರಾವಣ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ಹಬ್ಬ ಹರಿದಿನಗಳು, ಮದುವೆ, ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಬೆಲೆಯೂ ಸಹ ಏರಿಕೆಯಾಗಲಿದೆ ಎಂದು ವ್ಯಾಪಾರಿ ಬೊಮಲಿಂಗಯ್ಯ ಎಂಬುವರು ತಿಳಿಸಿದ್ದಾರೆ.

RELATED ARTICLES

Latest News