ಬೆಳಗಾವಿ,ಡಿ.14- ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಪರಿಣಾಮ ಬೆಳಗಾವಿಯಲ್ಲೂ ಕಂಡುಬಂದಿದ್ದು, ತೀವ್ರ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಆಗಾಗ್ಗೆ ಮೇಲೈ ತಂಪಾದ ಗಾಳಿ ಬೀಸುವುದರಿಂದ ಹಗಲಿನಲ್ಲೂ ಚಳಿಯ ತೀವ್ರತೆ ಹೆಚ್ಚಾಗಿತ್ತು. ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಬೆಳಿಗ್ಗೆ ಮೋಡ ಕವಿದ ವಾತಾವರಣ ಇತ್ತು.
ಕನಿಷ್ಠ ಉಷ್ಣಾಂಶ 15 ಡಿಗ್ರಿಗಿಂತ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಕನಿಷ್ಠ ಉಷ್ಣಾಂಶ 13ರಿಂದ 14 ಡಿಗ್ರಿ ಸೆಂಟಿಗ್ರೇಡ್‌ನಷ್ಟು ದಾಖಲಾಗಿದೆ. ಹೀಗಾಗಿ ಜನರು ಬೆಚ್ಚಗಿನ ಉಡುಪಿನ ಮೊರೆ ಹೋಗುತ್ತಿದ್ದಾರೆ.
ಮುಂಜಾನೆ ಚಳಿಯಿಂದ ಪಾರಾಗಲು ಆಟೋ ಚಾಲಕರು, ಕೂಲಿ ಕಾರ್ಮಿಕರು ಮತ್ತಿತರರು ಅಲ್ಲಲ್ಲಿ ಬೆಂಕಿ ಕಾಯಿಸುತ್ತಿರುವ ದೃಶ್ಯ ಸಾಮನ್ಯವಾಗಿ ಕಂಡುಬರುತ್ತಿದೆ.ವಾಯುಭಾರ ಕುಸಿತ ದುರ್ಬಲಗೊಂಡ ಪರಿಣಾಮ ಜಿಟಿಜಿಟಿ ಮಳೆ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತಲ ಪ್ರದೇಶಗಳಲ್ಲಿ ಉಂಟಾಗಿದೆ. ಮಳೆಯಾಗುವ ಸಾಧ್ಯತೆ ವಿರಳವಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಮೂರು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಕಂಡುಬರಲಿದೆ. ಆನಂತರ ಮತ್ತೊಮೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಎರಡುಮೂರು ಮಳೆಯಾಗುವ ಸಾಧ್ಯತೆ ಇದೆ.