Home ಇದೀಗ ಬಂದ ಸುದ್ದಿ ಸಂಚಾರ ನಿಯಮ ಉಲ್ಲಂಘನೆ, ಪೊಲೀಸರು ವಿಶೇಷ ಕಾರ್ಯಾಚರಣೆ, 10 ಲಕ್ಷ ರೂ.ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ, ಪೊಲೀಸರು ವಿಶೇಷ ಕಾರ್ಯಾಚರಣೆ, 10 ಲಕ್ಷ ರೂ.ದಂಡ ಸಂಗ್ರಹ

0
ಸಂಚಾರ ನಿಯಮ ಉಲ್ಲಂಘನೆ, ಪೊಲೀಸರು ವಿಶೇಷ ಕಾರ್ಯಾಚರಣೆ, 10 ಲಕ್ಷ ರೂ.ದಂಡ ಸಂಗ್ರಹ

ಬೆಂಗಳೂರು,ಆ.5- ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 2100 ಪ್ರಕರಣಗಳನ್ನು ದಾಖಲಿಸಿ 10,63,500 ರೂ. ದಂಡ ಸಂಗ್ರಹಿಸಿದ್ದಾರೆ.

ನಿನ್ನೆ ಪೂರ್ವವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ, ಕರ್ಕಶ ಶಬ್ದ, ಸಿಗ್ನಲ್‌ ಜಂಪ್‌, ರಾಂಗ್‌ ಪಾರ್ಕಿಂಗ್‌, ಫುಟ್‌ಪಾತ್‌ ಪಾರ್ಕಿಂಗ್‌, ಒಂದೇ ಬೈಕ್‌ನಲ್ಲಿ ಮೂವರ ಸಂಚಾರ, ಚಾಲನೆ ವೇಳೆ ಮೊಬೈಲ್‌ ಬಳಕೆ, ಸೀಟ್‌ ಬೆಲ್ಟ್ ಹಾಕದಿರುವುದೂ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಮಾಡಿದ 2,127 ಪ್ರಕರಣಗಳನ್ನು ದಾಖಲಿಸಿ ದ್ದಾರೆ.

ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರಿಂದ 10,63,500 ರೂ. ದಂಡ ಸಂಗ್ರಹಿಸಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.

ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರೆ ಯಲಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್‌‍ ಆಯುಕ್ತರಾದ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.