Thursday, September 19, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾ ಧಗಧಗ : ರಾಜೀನಾಮೆ ನೀಡಿ ಪ್ರಧಾನಿ ಶೇಖ್ ಹಸೀನಾ ಪಲಾಯನ, ಅಡಳಿತ ಸೇನೆಯ ವಶಕ್ಕೆ

ಬಾಂಗ್ಲಾ ಧಗಧಗ : ರಾಜೀನಾಮೆ ನೀಡಿ ಪ್ರಧಾನಿ ಶೇಖ್ ಹಸೀನಾ ಪಲಾಯನ, ಅಡಳಿತ ಸೇನೆಯ ವಶಕ್ಕೆ

ಡಾಕಾ.ಆ.5- ಬಾಂಗ್ಲಾದೇಶದಲ್ಲಿ ಎದ್ದರುವ ದಂಗೆಯಿಂದ ಉಂಟಾಗಿರುವ ಅರಾಜಕತೆಯಿಂದಾಗಿ ಬೀತಿಗೊಂಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಗಣಭಬನ್‍ನಲ್ಲಿರುವ ನಿವಾಸದಿಂದ ಪಲಾಯನ ಮಾಡಿದ್ದಾರೆ.ಪ್ರತಿಭಟನೆಗಳಿಂದ ಈವರೆಗೆ ಸುಮಾರು 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು,ದೇಶದ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಇಂದು ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿದ್ದಾರೆ.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‍ಗಳನ್ನು ಬಳಸಿದ್ದರಿಂದ ಹಲವರು ಸಾವನ್ನಪ್ಪಿ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರವು ಬಾಂಗ್ಲಾದೇಶದಲ್ಲಿ ಅಶಾಂತಿಯ ಸೃಷ್ಠಿಸಿದೆ.ಕಳೆದ ಜುಲೈ 19 ರಂದು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯನ್ನು ವಿರೋಧಿಸಿ ನಡೆದ ಹೋರಾಟ ಇಂದು ದೇಶಕ್ಕೆ ದೊಡ್ಡ ಅಪತ್ತು ತಂದಿದೆ.

ಕಳೆದ ತಿಂಗಳ ಕೊನೆಯಲ್ಲಿ ಆರಂಭವಾದ ಪ್ರತಿಭಟನೆಗಳು, ದೇಶದಲ್ಲೇ ಅತಿ ದೊಡ್ಡದಾದ ಢಾಕಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಪೊಲೀಸರು ಮತ್ತು ಸರ್ಕಾರದ ಪರ ಪ್ರತಿಭಟನಕಾರರೊಂದಿಗೆ ಘರ್ಷಣೆ ಮಾಡಿದಾಗ ಪರಿಸ್ಥತಿ ಮತ್ತಷ್ಟು ಉಲ್ಬಣಗೊಂಡಿತು.ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ 1971 ರ ಸ್ವಾತಂತ್ರ್ಯದ ಯುದ್ಧದ ಬಾಗಿಯಾದ ಕುಟುಂಬದ ಸದಸ್ಯರಿಗೆ ಶೇ.30 ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುತ್ತದೆ.

1972 ರಲ್ಲಿ ಸ್ಥಾಪಿಸಲಾದ ಕೋಟಾ ವ್ಯವಸ್ಥೆಯನ್ನು ಕಳೆದ 2018 ರಲ್ಲಿ ಸಂಕ್ಷಿಪ್ತವಾಗಿ ರದ್ದುಗೊಳಿಸಲಾಯಿತು, ಇದು ನಿರಂತರ ವಿವಾದದ ಮೂಲವಾಗಿದೆ.ನಂತರ ಪ್ರಧಾನಿ ಹಸೀನಾ ಅವರ ಸಾರ್ವಜನಿಕ ಹೇಳಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತು, ಇದು ತೀವ್ರ ಪ್ರತಿಭಟನೆಗೆ ಕಾರಣವಾಯಿತು.

ಪ್ರಸ್ತುತ ಬಾಂಗ್ಲಾದೇಶದ ಸೇನೆ ಪರಿಸ್ಥಿತಿ ಹತೋಟಿ ಮುಂದಾಗಿದೆ.ಅಡಳಿತ ತನ್ನ ವಶಕ್ಕೆ ಪಡೆದಿದೆ.ಪ್ರತಿಭಟನಾಕಾರರನ್ನು ಹತ್ತಿಕಲ್ಲು ಮುಂದಾಗಿದೆ .ಶೇಘ್ ಹಸೀನಾ ದೇಶ ತೊರೆದು ಭಾರತಕ್ಕೆ ಬಂದಿದ್ದಾರೆ ಎಂದು ಹೇಳಾಗುತ್ತಿದೆ.

RELATED ARTICLES

Latest News