Friday, September 20, 2024
Homeಇದೀಗ ಬಂದ ಸುದ್ದಿವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡು ಚುಂಬಿಸಿ ಪರಾರಿಯಾದ ಕಾಮುಕ

ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡು ಚುಂಬಿಸಿ ಪರಾರಿಯಾದ ಕಾಮುಕ

ಬೆಂಗಳೂರು,ಆ.5– ಸಿಲಿಕಾನ್‌ ಸಿಟಿ ಇತ್ತೀಚೆಗೆ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಬೆಳ್ಳಂಬೆಳ್ಳಗ್ಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಕಾಮುಕನೊಬ್ಬ ತಬ್ಬಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಕೋಣನಕುಂಟೆ ಬಳಿಯ ಕೃಷ್ಣಾನಂದ ನಗರದಲ್ಲಿ ಆಗಸ್ಟ್‌ 2ರಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ವಾಕಿಂಗ್‌ಗೆ ತೆರಳಲು 35 ವರ್ಷದ ಮಹಿಳೆ ಮನೆಯ ಸಮೀಪ ಸ್ನೇಹಿತಿಯರಿಗಾಗಿ ಕಾದು ನಿಂತಿದ್ದಾಗ ಏಕಾಏಕಿ ಬಂದ ಕಾಮುಕ ಹಿಂಬದಿಯಿಂದ ಮಹಿಳೆಯನ್ನು ತಬ್ಬಿ ಚುಂಬಿಸಲು ಯತ್ನಿಸಿದ್ದಾನೆ. ನಂತರ ಆತನಿಂದ ಮಹಿಳೆ ತಪ್ಪಿಸಿಕೊಂಡು ಓಡಿ ಹೋದರೂ ಸಹ ಹಿಂದೆ ಬಂದು ಕೈಹಿಡಿದು ಎಲೆದಾಡಿದ್ದಾನೆ.

ನಂತರ ಮಹಿಳೆ ಚೀರುತ್ತಿದ್ದಂತೆ ವಿಕೃತಕಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇಂತಹ ಘಟನೆಯಿಂದ ಮುಜುಗರಕ್ಕೊಳಗಾದ ಮಹಿಳೆ ವಾಕಿಂಗ್‌ಗೆ ತೆರಳದೆ ಮನೆ ಸೇರಿದ್ದು ಪೊಲೀಸರಿಗೆ ದೂರು ಕೊಡಲು ಸಹ ಹಿಂಜರಿದಿದ್ದು , ಸಿಸಿಟಿವಿಯ ದೃಶ್ಯಾವಳಿಗಳು ವೈರಲ್‌ ಆಗುತ್ತಿದ್ದಂತೆ ಅಂತಿಮವಾಗಿ ಕೋಣನಕುಂಟೆ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧಾರಿಸಿ ಕಾಮುಕನ ಪತ್ತೆಗಾಗಿ ವಿಶೇಷ ಮೂರು ತಂಡಗಳನ್ನು ರಚಿಸಿ ಪತ್ತೆಗೆ ಬಲೆಬೀಸಿದ್ದಾರೆ.

ನಗರದಲ್ಲಿ ಒಂದಲ್ಲ ಒಂದು ಕಡೆ ಮಹಿಳೆಯರ ಜೊತೆ ಅಸಭ್ಯ ವರ್ತನೆ ಪ್ರಕರಣಗಳು ದಾಖಲಾಗುತ್ತಿರುವುದನ್ನು ಸಿಲಿಕಾನ್‌ ಸಿಟಿಯಲ್ಲಿ ಮಹಿಳೆ ಯರು ಹಾಗೂ ಯುವತಿಯರು ಮನೆಯಿಂದ ನಿರ್ಭೀತಿಯಿಂದ ಹೊರಬರಲು ಹೆದುರುವಂತಹ ವಾತಾವರಣ ನಿರ್ಮಾಣವಾಗಿದೆ.

RELATED ARTICLES

Latest News