Wednesday, October 16, 2024
Homeರಾಜಕೀಯ | Politics"ರೇವಣ್ಣ ಪ್ರಕರಣದಲ್ಲಿ ಇದ್ದ ಆತುರ ವಾಲ್ಮೀಕಿ ಹಗರಣದಲ್ಲಿ ಏಕಿಲ್ಲ..?"

“ರೇವಣ್ಣ ಪ್ರಕರಣದಲ್ಲಿ ಇದ್ದ ಆತುರ ವಾಲ್ಮೀಕಿ ಹಗರಣದಲ್ಲಿ ಏಕಿಲ್ಲ..?”

ಬೆಂಗಳೂರು,ಆ.5- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬ ಸದಸ್ಯರ ಮೇಲೆ ಬಂದಿ ರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಆತುರದಲ್ಲಿ ಎಸ್‌‍ಐಟಿ ರಚನೆ ಮಾಡಿ, ನೋಟೀಸ್‌‍ ನೀಡಿ, ವಿಚಾರಣೆ ಮಾಡಿ, ನ್ಯಾಯಾಂಗ ಬಂಧನಕ್ಕೂ ಕಳಿಸುತ್ತೀರಿ.

ಆದರೆ ಅದೇ ಆಸಕ್ತಿ ವಾಲೀಕಿ ನಿಗಮದ ಹಗರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಇದು ಯಾವ ಸೀಮೆ ನ್ಯಾಯ ಸಿದ್ದರಾಮಯ್ಯನವರೇ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಆಶೋಕ್‌ ಅವರು, ಎಸ್‌‍ಐಟಿ ರಚನೆಯಾಗಿದ್ದು 31.05.2024 ರಂದು. ಆದರೆ ಎಸ್‌‍ಐಟಿ ರಚನೆಯಾಗಿ 40 ದಿನ ಕಳೆದರೂ ಮಾಜಿ ಸಚಿವ ನಾಗೇಂದ್ರ ಅವರನ್ನಾಗಲಿ, ಶಾಸಕ ಬಸವರಾಜ ದದ್ದಲ್‌ ಅವರನ್ನಾಗಲಿ ವಿಚಾರಣೆ ಮಾಡಲಿಲ್ಲ.

ವಿಚಾರಣೆ ಹೋಗಲಿ ಒಂದು ನೋಟಿಸ್‌‍ ಕೂಡಾ ಕೊಡಲಿಲ್ಲ. ಅಂದಮೇಲೆ ನಿಮಗೆ ಸತ್ಯ ಸಂಗತಿ ಹೊರಬರುವುದು ಬೇಕಾಗಿಯೇ ಇರಲಿಲ್ಲ. ಎಸ್‌‍ಐಟಿ ರಚಿಸಿದ್ದೇ ಈ ಹಗರಣ ಮುಚ್ಚಿಹಾಕಲು ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದ್ದಾರೆ.

ಎಸ್‌‍ಐಟಿ ನಿಮ ಕೈಗೊಂಬೆ ಎನ್ನುವುದಕ್ಕೆ ಪರಶುರಾಮ್‌ ಮತ್ತು ಪದನಾಭ್‌ ಅವರ ನಡುವೆ ನಡೆದಿರುವ ಫೋನ್ ಸಂಭಾಷಣೆಯೇ ಸಾಕ್ಷಿ. ಸಿಬಿಐ, ಇಡಿ ಆದರೆ ನಮಗೆ ಜೈಲೇ ಗತಿ, ಎಸ್‌‍ಐಟಿ ಆದರೆ ನೋಡಿಕೊಳ್ಳಬಹುದು ಎಂದು ಪದನಾಭ್‌ ಹೇಳಿರುವುದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ನಿಮ ಎಸ್‌‍ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ? ಎಂದು ವ್ಯಂಗ್ಯವಾಡಿದ್ದಾರೆ.

ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್‌ ಒಂದರಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ನಿಗಮದ ಎಲ್ಲ ಅಧಿಕಾರಿಗಳನ್ನು ಕರೆದು, ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಎಲ್ಲಿಯೂ ಹೇಳಬೇಡಿ. ನಾನು ಅಧಿಕಾರದಲ್ಲಿ ಇದ್ದರೆ ಮಾತ್ರ ನಿಮನ್ನೆಲ್ಲ ಬಚಾವ್‌ ಮಾಡಲು ಸಾಧ್ಯ ಎಂದು ಎಚ್ಚರಿಕೆ ನೀಡಿದ್ದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಡಿ ಮಧ್ಯ ಪ್ರವೇಶವಾದ ನಂತರ ಕೇವಲ ನೆಪ ಮಾತ್ರಕ್ಕೆ ವಿಚಾರಣೆಯ ನಾಟಕ ಮಾಡಿದ್ದು ಸುಳ್ಳಾ ಸಿದ್ದರಾಮಯ್ಯನವರೇ? ವಿಚಾರಣೆಗೂ ಮುನ್ನ ಎಸ್‌‍ಐಟಿ ಮುಂದೆ ನೆಪ ಮಾತ್ರಕ್ಕೆ ಹೋಗಿ ಬಾ, ನಾನು ಅಧಿಕಾರಿಗಳಿಗೆ ಹೇಳಿಕೊಳ್ಳುತ್ತೇನೆ ಎಂದು ಪ್ರಭಾವಿ ನಾಯಕರೊಬ್ಬರು ನಾಗೇಂದ್ರ ಅವರಿಗೆ ಅಭಯ ಕೊಟ್ಟಿದ್ದು ಸುಳ್ಳೇ ಸಿದ್ದರಾಮಯ್ಯನವರೇ? ಎಂದು ಆಶೋಕ್‌ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಾರೆ.

RELATED ARTICLES

Latest News