ನವದೆಹಲಿ,ಮೇ 7-ಪಹಲ್ಯಾಮ್ ನಲ್ಲಿ ನಡೆದ ನರಮೇಧದ ವೇಳೆ 26 ಭಾರತೀಯರ ಸಿಂಧೂರವನ್ನು ಅಳಿಸಿಹಾಕಿ ಅಟ್ಟಹಾಸ ಮೆರೆದಿದ್ದ ಉಗ್ರರ ಸಂಹಾರಕ್ಕೆ ಭಾರತೀಯ ಸೇನೆ ಕಾರ್ಯಾಚರಣೆಗೆ ಬಳಸಿದ್ದು ಇಬ್ಬರು ದಕ್ಷ ಮಹಿಳಾ ಅಧಿಕಾರಿಗಳನ್ನು,ಆಪರೇಷನ್ ಸಿಂಧೂರ್ ಹೆಸರು ಮಾತ್ರವಲ್ಲ ದಾಳಿಗೆ ನಿಯೋಜನೆ ಮಾಡುವಲ್ಲೂ ಚಾಣಕ್ಷತೆ ಮೆರೆದ ಸರಕಾರ ಎರಡು ವಿಭಿನ್ನ ಧರ್ಮಗಳ ಇಬ್ಬರು ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ದಾಳಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು.
ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಕ್ಯಾಪ್ಟನ್ಸಿಯಲ್ಲಿ ದಾಳಿ. ಮಹಿಳಾ ಅಧಿಕಾರಿಗಳ ನೇತೃತ್ವದಲ್ಲೇ ದಾಳಿ ನಡೆಸುವ ಮೂಲಕ ಅತ್ಯುತ್ತಮ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ. ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ಯೋಮಿಕಾ ಸಿಂಗ್ ಅವರು ಭಾರತದ ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಹಿಳಾ ಅಧಿಕಾರಿಗಳ ಆಯ್ಕೆಯು ಶಕ್ತಿ ಮತ್ತು ತ್ಯಾಗದ ಗುರುತನ್ನು ಪ್ರತಿಬಿಂಬಿಸುವ ಪ್ರಬಲ ಕ್ರಮವಾಗಿದೆ. ಇದು ಭಾರತದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ಸಿಂಧೂರ್‌ಗೆ ಸಾಂಕೇತಿಕವಾಗಿದೆ.
ಪಹಲ್ಯಾಮ್ ದಾಳಿಯಲ್ಲಿ ಭಯೋತ್ಪಾದಕರು ಪುರುಷರನ್ನು ಕೊಂದ ನಂತರ ವಿಧವೆಯರಾದ ಮಹಿಳೆಯರಿಗೆ ಗೌರವ ಸಲ್ಲಿಸುವ ಮಾರ್ಗವಾಗಿ ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಅವರ ಒಳಗೊಳ್ಳುವಿಕೆಯ ಆಧಾರದ ಮೇಲೆ ಭಯೋತ್ಪಾದನಾ ಗುರಿಗಳನ್ನು ಆಯ್ಕೆ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದಲ್ಲಿ ಯಾವುದೇ ಮಿಲಿಟರಿ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪಾಕ್ ಬಾಲಬಿಚ್ಚಿದ್ದರೆ ನಾವು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ಆಪರೇಷನ್ ಸಿಂಧೂರಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಪಾಕಿಸ್ತಾನ ದಶಕಗಳಿಂದ ಉಗ್ರರಿಗೆ ತರಬೇತಿ ನೀಡಲು ವ್ಯವಸ್ಥಿತ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಉಗ್ರರಿಗೆ ನೇಮಕ ಮಾಡಿ ತರಬೇತಿ ನೀಡುವ ಕಂಪ್ಲೇಸ್‌ಗಳನ್ನು ಪಾಕ್ ನಿರ್ಮಾಣ ಮಾಡಿದ್ದು, ಇಂತಹ 9 ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಅವುಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ. ಉಗ್ರರ ತರಬೇತಿ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಮಾತನಾಡಿ, ಪಾಕಿಸ್ತಾನದ ಯಾವುದೇ ದುಸ್ಸಾಹಸವನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಪಾಕಿಸ್ತಾನ ನಾಗರಿಕರಿಗೆ ಯಾವುದೇ ಪರಿಣಾಮ ಉಂಟು ಮಾಡದಂತೆ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಪಿಒಕೆನಲ್ಲಿ 21 ಉಗ್ರ ತರಬೇತಿ ಕೇಂದ್ರಗಳನ್ನು ಗುರುತು ಮಾಡಿದ್ದು, ಭಾರತೀಯ ಸೇವೆಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ನಿರ್ಧಾರ ಮಾಡಿದ ಉಗ್ರರ ಅಡಗು ತಾಣಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಪಾಕಿಸ್ತಾನ ಸೇನೆಯ ಯಾವುದೇ ಪ್ರದೇಶದ ಮೇಲೆ ದಾಳಿ ಮಾಡಿಲ್ಲ. ಎಲ್‌ಒಸಿಯಿಂದ 30 ಕಿಮೀ ದೊರಲ್ಲಿರುವ ಮುಜಾಫರಾಬಾದ್‌ನ ಸವಾಯಿ ನಾಲಾ ಕ್ಯಾಂಪ್. ಇಲ್ಲಿ ಲಷ್ಕರ್ ಉಗ್ರರ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಉಗ್ರರ ನೆಲೆಗಳ ಮೇಲಿನ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆಯೂ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾರ್ ಹೆಡ್ ಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗಿದೆ. ಇದು ಭಾರತೀಯ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತಿದ್ದು, ಟಾರ್ಗೆಟ್‌ಗಳು ಖಚಿತವಾಗಿ ಉಗ್ರರ ಅಡುಗು ತಾಣಗಳು, ನಿಖರ ಕಟ್ಟಡಗಳು ಮತ್ತು ಕಂಬ್ರೇಕ್‌ಗಳಾಗಿತ್ತು. ಭಾರತ ಸೇನೆಯ ಆಪರೇಷನ್ ಹಾಗೂ ಕಾರ್ಯಚರಣೆ ದಕ್ಷತೆಯನ್ನು ಈ ದಾಳಿ ತೋರಿಸುತ್ತಿದೆ. ಭಾರತೀಯ ಸೇನೆಯೂ ಪಾಕಿಸ್ತಾನ ಕೈಗೊಳ್ಳುವ ಯಾವುದೇ ಪ್ರತಿದಾಳಿಗೂ ಸಿದ್ಧವಾಗಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಯಾರು?
ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಅವರು ಭಾರತೀಯ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ನ್ಯಾಷನಲ್ ಕೆಡೆಟ್ ಕಾಪ್‌ಗೆ ಸೇರಿ ನಂತರ ತನ್ನ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದರು.
ಕರ್ನಲ್ ಸೋಫಿಯಾ ಖುರೇಷಿ ಭಾರತೀಯ ಸೇನೆಯ ಸಿಗ್ನಲ್ಸ್ ಕಾಪ್ಪನ ಅಲಂಕೃತ ಅಧಿಕಾರಿ. ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನೆಯ ತುಕಡಿಯನ್ನು ಮುನ್ನಡೆಸುವ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ – ಇದು ಭಾರತದ ನೆಲದಲ್ಲಿ ಇದುವರೆಗೆ ನಡೆಸಿದ ಅತಿದೊಡ್ಡ ವಿದೇಶಿ ಮಿಲಿಟರಿ ವ್ಯಾಯಾಮಗಳಲ್ಲಿ ಒಂದಾಗಿದೆ.
ಅಧಿಕಾರಿಯಾಗಿದ್ದಾರೆ. T